ಹೊನ್ನಾಳಿ : ವಾಲ್ಮೀಕಿ ನಾಯಕ ಸಮಾಜಕ್ಕೆ 7.5 ರಷ್ಟು ಮೀಸಲಾತಿ ನೀಡುವ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಸಿ.ಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬರವಸೆ ನೀಡಿದರು..
ಪರಿಶಿಷ್ಟ ಪಂಗಡಕ್ಕೆ 7.5 ರಷ್ಟು ಮೀಸಲಾತಿ ಹೆಚ್ಚಳ ಕುರಿತು ಬೆಳಗಾವಿಯಲ್ಲಿ ನಡೆಯುವ ಅಧಿವೇನದಲ್ಲಿ ಧ್ವನಿ ಎತ್ತುವಂತೆ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಗಳ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಭಾನುವಾರ ಎಂ.ಪಿ.ರೇಣುಕಾಚಾರ್ಯ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು..
ಮನವಿ ಸ್ವೀಕರಿಸಿ ಮಾತನಾಡಿದ ರೇಣುಕಾಚಾರ್ಯ ಮೀಸಲಾತಿ ಕುರಿತಂತೆ ಈಗಾಗಲೇ ಸುರಪುರ ಶಾಸಕ ರಾಜುಗೌಡ ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಹೇಳಿದ್ದು, ನಾನು ಕೂಡ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತುವುದಾಗಿ ಹೇಳಿದರು…
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಶ್ರೀಗಳು ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದು ಅವರನ್ನು ಭೇಟಿ ಮಾಡಿ ಶುಭ ಕೋರಿದೆನ್ನಲ್ಲದೇ, ಉಪವಾಸ ಸತ್ಯಾಗ್ರಹ ಸಂದರ್ಭದಲ್ಲೂ ಶ್ರೀಗಳನ್ನು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆಂದು ನಾನು ಹಾಗೂ ರಾಜುಗೌಡ ಬರವಸೆ ನೀಡಿದ್ದೇವು ಎಂದರು..
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮೀಸಲಾತಿ ಅತಿಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಮುಂಬವರು ಭವಿಷ್ಯತ್ತಿನ ದಿನಗಳಿಗೆ ಸವಿಧಾನದ ಅಡಿಯಲ್ಲಿ ಬರುವ ಸಮಾಜದ ಹಿತದೃಷ್ಟಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜನಪ್ರತಿನಿಧೀಗಳಾದ ನಾವು ಕೂಡ ಶಾಸನಸಭಾ ಸದಸ್ಯರಾಗಿ ಈ ಬಗ್ಗೆ ಅಧಿವೇಶನದಲ್ಲಿ ಎಲ್ಲಾ ಆಯಮಗಳಿಂದ ಸಮಗ್ರ ಚರ್ಚೆ ನಡೆಸಿ, ಸಮಾಜದ ಹಿತದೃಷ್ಟಿ ಕಾಪಾಡಲು ಪ್ರಯತ್ನಿಸುವುದಾಗಿ ಹೇಳಿದರು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದರು ಎಂದ ರೇಣುಕಾಚಾರ್ಯ ವಾಲ್ಮೀಕಿ ನಾಯಕ ಸಮಾಜಕ್ಕೆ 7.5 ರಷ್ಟು ಮೀಸಲಾತಿ ತಂದೆ ತರುತ್ತೇವೆಂದು ಬರವಸೆ ನೀಡಿದರು..
ಪಂಚಮಶಾಲಿ ಸಮಾಜದ ವಚನಾನಂದ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೇಳುತ್ತಿದ್ದರೇ, ಕುರುಬ ಸಮಾಜದ ನಿರಂಜನಾನಂದ ಪುರಿ ಸ್ವಾಮೀಜಿ ಎಸ್‍ಸ್ಟಿ ಮೀಸಲಾತಿಗಾಗೀ ಹೋರಾಟ ಮಾಡುತ್ತಿದ್ದು ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು..
ಸರ್ವ ಸಮಾಜಕ್ಕೂ ಒಳಿತನ್ನು ಬಯಸುವ ಹಾಗೂ 12 ನೇ ಶತಮಾನದ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡ ನಮ್ಮ ಸರ್ಕಾರ ಪಾರದರ್ಶಕವಾಗಿ ಎಲ್ಲಾ ಸಮಾಜದವರ ಹಿತದೃಷ್ಟಿಗಾಗೀ ಒಳಿತನ್ನ ಬಯಸಲು ಬದ್ದರಾಗಿದ್ದೇವೆ ಎಂದರು.
ಈ ಸಂದರ್ಭ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಕುಳಗಟ್ಟೆ ರಂಗನಾಥ್, ಮಾಜಿ ಅಧ್ಯಕ್ಷರಾದ ತಿಮ್ಮೇನಹಳ್ಳಿ ಚಂದ್ರಪ್ಪ ಸೇರಿದಂತೆ ಸಮಾಜದ ಮುಖಂಡರು ಮತ್ತೀತರರಿದ್ದರು..