ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ
ಆರೋಗ್ಯ ಅಭಿಯಾನ ಕಾರ್ಯಕ್ರಮ ಯೋಜನೆಗಳ ಕುರಿತು
ತೀವ್ರ ಪ್ರಚಾರದೋಲನ ಮೂಲಕ ಜನಜಾಗೃತಿ ಮೂಡಿಸಲು
ಸಂಗೀತ ಮತ್ತು ನಾಟಕ ವಿಭಾಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ
ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ
ನೋಂದಾವಣೆಯಾಗಿರುವ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಾತಂಡದಲ್ಲಿ ಕನಿಷ್ಠ 8 ಜನ ಕಲಾವಿದರು ಇರಬೇಕು. ಈ ಪೈಕಿ
ಇಬ್ಬರು ಮಹಿಳಾ ಕಲಾವಿದರು ಇರುವುದು ಕಡ್ಡಾಯ,
ಕಲಾತಂಡದವರು ದಾವಣಗೆರೆ ಜಿಲ್ಲೆಯವರಿರಬೇಕು. ಸರ್ಕಾರಿ
ಯೋಜನೆಗಳ ಬಗ್ಗೆ ಬೀದಿ ನಾಟಕಗಳನ್ನು ಪ್ರದರ್ಶಿಸಿದ ಅನುಭವ
ಹೊಂದಿರಬೇಕು. ಈ ಜಿಲ್ಲೆಗೆ ಒಟ್ಟು 05 ತಂಡಗಳನ್ನು ಮಾತ್ರ ಆಯ್ಕೆ
ಮಾಡಲಾಗುವುದು.
ಆಸಕ್ತ ಅರ್ಹ ಬೀದಿನಾಟಕ ಕಲಾತಂಡಗಳು ತಮ್ಮ ತಂಡದ
ಸಂಪೂರ್ಣ ವಿವರ, ಕಲಾವಿದರ ವಿವರ, ಅನುಭವ ದಾಖಲೆಗಳ ಸಹಿತ
ಅರ್ಜಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ
ಕಚೇರಿ, ದಾವಣಗೆರೆ ಇವರಿಗೆ ಡಿ.21 ರೊಳಗಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ
ಕಲಾತಂಡಗಳಿಗೆ ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿಯಲ್ಲಿ
ಆಯ್ಕೆ ಪ್ರಕ್ರಿಯೆ ಏರ್ಪಡಿಸಿದ್ದು, ಕಲಾತಂಡಗಳು ಭಾಗವಹಿಸಿ
ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಜಿಲ್ಲಾ ಮಟ್ಟದ ಆಯ್ಕೆ
ಸಮಿತಿಯು ಕಲಾತಂಡಗಳನ್ನು ಆಯ್ಕೆ ಮಾಡಲಿದೆ. ಆಸಕ್ತ
ಬೀದಿನಾಟಕ ಕಲಾತಂಡಗಳು ಡಿ. 21 ರೊಳಗೆ ಕಚೇರಿಯಲ್ಲಿ ಅರ್ಜಿ
ಸಲ್ಲಿಸಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.