ಹೊನ್ನಾಳಿ,14: ಪಟ್ಟಣದ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ಷರಭಿ ಗುಗ್ಗುಳ ಮತ್ತು ಕಾರ್ತಿಕೋತ್ಸವ ಅದ್ದೂರಿಯಾಗಿ ನಡೆಯಿತು.
ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಡಿ.14ರ ಮಂಗಳವಾರ ಬೆಳಗ್ಗೆ 6.30ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ಬಳಿಕ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಹೊರಡುವ ಷರಭಿ ಗುಗ್ಗುಳ ಮಹೋತ್ಸವವು ಪುರುವಂತರು, ವೀರಗಾಸೆ ಹಾಗೂ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸುತು.
ನಂತರ ತುಂಗಭದ್ರಾ ನದಿಯಲ್ಲಿ ಷರಭಿ ಗುಗ್ಗುಳ ವಿಸರ್ಜಿಸಲಾಯಿತು. ದಾವಣಗೆರೆಯ ಪುರುವಂತರಾದ ಜಗದೀಶ್ ಮತ್ತು ಸಂಗಡಿಗರು ನೇತೃತ್ವ ವಹಿಸಿದ್ದರು. ಮಧ್ಯಾಹ್ನ 1 ರಿಂದ ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ದೇವರ ದರ್ಶನಪಡೆದು ಪ್ರಸಾದ ಸೇಯಲ್ಲಿ ಪಲ್ಗೊಂಡಿದ್ದರು.
ಸಂಜೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಸಮಾರಂಭ ನಡೆಯ¬ತು. ಶ್ರೀವೀರಭದ್ರೇಶ್ವರ ದೇವರ ಅರ್ಚಕ ಕುಮಾರ,ಬೆನಕಯ್ಯಶಾಸ್ತ್ರಿ,ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳಾದ ಪಟ್ಟಣಶೆಟ್ಟಿ ರುದ್ರಪ್ಪ,ಪಟ್ಟಣಶೇಟ್ಟಿಪರಮೇಶ್,ಪಟ್ಟಣಶೆಟ್ಟಿ ವಿಜಯಕುಮಾರ,ಬೆನಕನಹಳ್ಳಿವೀರಣ್ಣ,ಕುಂಬಾರ ಮುರುಗೇಶ್,ಕುಂಬಾರ ಬಸವರಾಜ, ,ಹಳಕಟ್ಟಿ ಶಿವುಕುಮಾರ,ಹೋಟೆಲ್‍ಗಿರೀಶ್,ಪೇಟೆಪ್ರಶಾಂತ,ಅಡಿಗೆವೀರಣ್ಣ ಭಕ್ತಾಧಿಗಳು ಇದ್ದರು.