ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್) ಕೌಶಲ್ಯ
ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸಿಪೆಟ್ ಸಂಸ್ಥೆಯು
ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು
ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು,
ನಿರುದ್ಯೋಗ ಯುವಜನತೆಗೆ ಉಚಿತ ವೃತ್ತಿಪರ ತರಬೇತಿ
ನೀಡಲು ಅರ್ಜಿ ಆಹ್ವಾನಿಸಿದೆ.
ರಾಜ್ಯದ 8, 10 ನೇ
ತರಗತಿ/ಪಿಯುಸಿ/ಐಟಿಐ/ಜೆಓಸಿ/ಡಿಪ್ಲೊಮಾ/ಬಿಇ/ಯಾವುದೇ
ಪದವಿ(ಪಾಸ್/ಫೇಲ್) ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ
ಯುವಕ ಯುವತಿಯರಿಗೆ ಮೈಸೂರಿನಲ್ಲಿ ವಿವಿಧ ವೃತ್ತಿಪರ
ಯೋಜನೆಯಡಿ 03 ರಿಂದ 06 ತಿಂಗಳ ಅವಧಿಯ ಆಟೋಮೊಬೈಲ್,
ಕೃಷಿ, ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುನ್ಮಾನ ಮುಂತಾದ
ಕ್ಷೇತ್ರಗಳಲ್ಲಿ ಬಳಸುವಂತಹ ಆಧುನಿಕ ವಿನ್ಯಾಸದಲ್ಲಿ
ಪಾಲಿಮರ್/ಪ್ಲಾಸ್ಟಿಕ್ ವಸ್ತುಗಳ ತಯಾರಿಕಾ ತಂತ್ರಜ್ಞಾನ
ಮತ್ತು ಪ್ಲಾಸ್ಟಿಕ್‍ನ ಮರುಬಳಕೆ ಬಗ್ಗೆ ಸಂಪೂರ್ಣ
ತರಬೇತಿಯನ್ನು ಉಚಿತ ಊಟ, ವಸತಿಯೊಂದಿಗೆ
ನೀಡಲಾಗುವುದು. ಹಾಗೂ ತರಬೇತಿ ನಂತರ
ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ
ಸಂಬಂಧಿಸಿದ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಆಧಾರ್ ಕಾರ್ಡ್ ಮೂಲ ದಾಖಲೆಗಳು ಮತ್ತು 06 ಪಾಸ್‍ಪೋರ್ಟ್
ಅಳತೆಯ ಫೋಟೊಗಳೊಂದಿಗೆ ನೇರವಾಗಿ ಬಂದು ದಾಖಲಾತಿ
ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್
ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, 437/ಎ,
ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು-570016 ದೂರವಾಣಿ
ಸಂಖ್ಯೆ: 7259622928, 0821-2510619, 9845873498, 9066648466 ನ್ನು
ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು
ಮತ್ತು ಮುಖ್ಯಸ್ಥರಾದ ಆರ್.ಟಿ.ನಾಗರಳ್ಳಿ ಇವರು ತಿಳಿಸಿದ್ದಾರೆ.