ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್
ಲಿ.ಮೈಸೂರು ಸಂಸ್ಥೆಯು 2021-22 ನೇ ಸಾಲಿನಲ್ಲಿ ತನ್ನ
ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ಯೋಜನೆಯಡಿ
ಮೈಸೂರಿನಲ್ಲಿರುವ ಭಾರತ ಸರ್ಕಾರದ ಕೇಂದ್ರೀಯ
ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ
ಸಂಸ್ಥೆ(ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರದ
ಮೂಲಕ ರಾಜ್ಯದ ನಿರುದ್ಯೋಗ ಯುವಜನತೆಗೆ 03 ತಿಂಗಳ
ಉಚಿತ ಕೌಶಲ್ಯಾಭಿವೃದ್ದಿ ಕಾರ್ಯಕ್ರಮ ಏರ್ಪಡಿಸಿದೆ.
03 ತಿಂಗಳು ಅವಧಿಯ ಮೆಷಿನ್ ಆಪರೇಟರ್ ಅಸಿಸ್ಟೆಂಟ್ ಪ್ಲಾಸ್ಟಿಕ್
ಪ್ರೊಸೆಸಿಂಗ್(ಎಂಒಎ-ಪಿಪಿ) ತರಬೇತಿಯನ್ನು ಎಲ್ಲ ವರ್ಗದ
ನಿರುದ್ಯೋಗ ಯುವಕ/ಯುವತಿಯರಿಗೆ ನೀಡಲಾಗುವುದು.
ಸಾಮಾನ್ಯ ವರ್ಗ 18 ರಿಂದ 30, ಓಬಿಸಿ 18 ರಿಂದ 33 ವರ್ಷ, ಎಸ್‍ಸಿ/ಎಸ್‍ಟಿ 35
ವರ್ಷ ವಯೋಮಿತಿಯೊಳಗಿನವರು ಅರ್ಜಿ ಸಲ್ಲಿಸಬಹುದು.
ತರಬೇತಿ ವೇಳೆ ಉಚಿತ ಊಟ ವಸತಿ, ಸಮವಸ್ತ್ರ ಇತರೆ
ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ತರಬೇತಿ
ಜೊತೆಗೆ ಕಂಪ್ಯೂಟರ್ ಬೇಸಿಕ್, ಸ್ಪೋಕನ್ ಇಂಗ್ಲಿಷ್ ತರಬೇತಿ
ನೀಡಲಾಗುವುದು. ತರಬೇತಿ ನಂತರ ಉದ್ಯೋಗಾವಕಾಶಕ್ಕೆ
ನೆರವು ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ವಿದ್ಯಾರ್ಹತೆಗೆ
ಸಂಬಂಧಿಸಿದ ದಾಖಲೆ, ಆಧಾರ್ ಪ್ರತಿ, ಜಾತಿ ಹಾಗೂ ಆದಾಯ ಪ್ರಮಾಣ
ಪತ್ರ ಹಾಗೂ ಸಂಬಂಧಿಸಿದ ಎಲ್ಲ ದಾಖಲೆಗಳ ಜೆರಾಕ್ಸ್
ಪ್ರತಿಗಳನ್ನು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್
ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, 437/ಎ, ಹೆಬ್ಬಾಳು ಕೈಗಾರಿಕಾ
ಪ್ರದೇಶ, ಮೈಸೂರು-570016 ಇಲ್ಲಿಗೆ ಕಳುಹಿಸಬಹುದು. 05
ಕಲರ್ ಫೋಟೊಗಳೊಂದಿಗೆ ಮೈಸೂರಿನ ಸಿಪೆಟ್ ಸಂಸ್ಥೆಯಲ್ಲಿ
ನಡೆಯುವ ನೇರ ಸಂದರ್ಶನ ಮತ್ತು ದಾಖಲಾತಿಗಾಗಿ
ಹಾಜರಾಗಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ 9380756024, 9066648466,
9789010015, 0821-2510619 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ
ತಿಳಿಸಿದೆ.