ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತನ್ನ ಮಗನನ್ನ ರಕ್ಷಣೆ ಮಾಡಲು ಹಿಂದೆ ನೀಡಿದ ಹೇಳಿಕೆ ಇಂದು ಬಹಿರಂಗವಾಗಿದ್ದು ಎಸ್ ಐಟಿ ತಂಡದ ತನಿಖೆಯಿಂದ ಉದ್ದೇಶಪೂರ್ವಕವಾಗಿ ರೈತರ ಮೇಲೆ ಲಿಖಿಂಪುರ ಕೇರಿಯಲ್ಲಿ ಅಜಯ್ ಮಿಶ್ರನ ಪುತ್ರ ಆಶಿಶ್ ಮಿಶ್ರಾ ವಾಹನ ಹರಿಸಿ ಕಗ್ಗೊಲೆ ಮಾಡಿರುವುದು ಬಹಿರಂಗವಾಗಿದೆ ಈ ಹಿನ್ನೆಲೆಯಲ್ಲಿ ಕೂಡಲೇ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಹಾಗೂ ಮಾಜಿ ಸಚಿವ ಬಿಜೆಪಿಯ ಬ್ಲೂ ಬಾಯ್ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಹಾಗೂ ಪ್ರತಿಕೃತಿ ದಹಿಸಲಾಯಿತು.
ರೈತರ ಹೋರಾಟವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಹತ್ತಿಕ್ಕಿ ಅನ್ನದಾತನ ಪಾದಯಾತ್ರೆಯ ಮೇಲೆ ಆಶಿಕ್ ಮಿಶ್ರಾ ವಾಹನ ಹರಿಸಿ ಮುಗ್ಧ ರೈತರನ್ನು ಹೊಂದಿದ್ದರೂ ಸಹ ನರೇಂದ್ರ ಮೋದಿ ರೈತರ ಸಾವಿನ ಬಗ್ಗೆ ಶ್ರದ್ಧಾಂಜಲಿಯ ಮಾತನ್ನೆ ಆಡದೆ ಮೌನಕ್ಕೆ ಶರಣಾಗಿದ್ದಾರೆ ಆದರೆ ಇಂದು ಎಸ್ ಐಟಿ ತನಿಖೆಯಿಂದ ಉದ್ದೇಶಪೂರ್ವಕವಾಗಿ ರೈತರನ್ನು ಆಶಿಕ್ ಮಿಶ್ರಾ ವಾಹನ ಹರಿಸಿ ಕಗ್ಗೊಲೆ ಮಾಡಿದ್ದಾನೆಂದು ವರದಿಯಿಂದ ಬಹಿರಂಗವಾಗಿದೆ ನರೇಂದ್ರ ಮೋದಿ ರೈತರ ಕ್ಷಮೆ ಕೋರಿ ರಾಜಿನಾಮೆ ನೀಡಬೇಕು
ದೇಶದ ಇತಿಹಾಸದಲ್ಲೇ ಇಂತಹ ಅತ್ಯಂತ ಕ್ರೂರ ಸರ್ಕಾರವನ್ನ ಕಾಣಲು ಸಾಧ್ಯವಿಲ್ಲ ಸರ್ವಾಧಿಕಾರಿ ಆಡಳಿತದಲ್ಲಿ ಮುಗ್ಧ ರೈತರನ್ನು ಕಗ್ಗೊಲೆ ಮಾಡಿದ್ದರೂ ಸಹ ಕಂಡರೂ ಕಾಣದ ರೀತಿಯಲ್ಲಿ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಅಜಯ್ ಮಿಶ್ರಾ ನ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ
ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಈ ಪ್ರಕರಣದಲ್ಲಿ ನ್ಯಾಯಾಂಗವೇ ಉಸ್ತುವಾರಿ ವಹಿಸಿ ಕೊಲೆ ಪ್ರಕರಣವನ್ನು ಬಯಲಿಗೆ ಎಳೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಇಂದು ದೇಶದ ಜನರ ಕಣ್ಣೆದುರೇ ತೆರೆದು ನಿಂತಿದೆ
ಸರ್ವಾಧಿಕಾರಿ ಸರಕಾರದ ಧೋರಣೆಯನ್ನು ಖಂಡಿಸಿ ಕೂಡಲೇ ಅಜಯ್ ಮಿಶ್ರ ನನ್ನ ಸಚಿವ ಸಂಪುಟದ ವಜಾಗೊಳಿಸಬೇಕು ಆತನನ್ನು ಬಂಧಿಸಬೇಕು ಕೊಲೆಗಾರರಿಗೆ ರಕ್ಷಣೆ ನೀಡಿರುವ ಹಿನ್ನೆಲೆಯಲ್ಲಿ ಅಜಯ್ ಮಿಶ್ರ ನನ್ನ ಬಂಧಿಸಲೇಬೇಕು ಎಂದು ಈ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯನ್ನು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆಸಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್, ಎ.ಆನಂದ್, ಜಿ.ಜನಾರ್ಧನ್, ಎಲ್.ಜಯಸಿಂಹ, ಮಂಜುನಾಥ್, ಪುಟ್ಟರಾಜು,ಚಂದ್ರಶೇಖರ್, ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.