ಬೆಂಗಳೂರು ನಗರದಲ್ಲಿ 2030 ಕ್ಕೆ 2 ಕೋಟಿ ಜನಸಂಖ್ಯೆ ದಾಟುವ ನೀರೀಕ್ಷೆ ಇದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಂದಮೇಲೆ ಮುಂದಿನ ದಿನಗಳಲ್ಲಿ ಎಷ್ಟು ತೊಂದರೆ ಆಗಬಹುದೆಂದು ಆಡಳಿತ ಮಾಡುವ ಸರ್ಕಾರ ಯೋಚನೆ ಮಾಡಬೇಕಿತ್ತು. ಆದರೆ ಇದರ ಬಗ್ಗೆ ಕಿಂಚಿತ್ತು ಕಾಳಜಿ ಸರ್ಕಾರಕ್ಕಿಲ್ಲ. ಇದನ್ನರಿತು ವಿರೋದ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಯೋಚಿಸಿ ಸೋಮವಾರ ಸಭೆ ಕರೆದು
ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜನವರಿ ಮೊದಲ ವಾರದಿಂದ ಮೇಕೆದಾಟು ಮೂಲಕ ಬೆಂಗಳೂರಿಗೆ ನೀರು ತರಲು ಪಕ್ಷಾತೀತವಾಗಿ ಹೋರಾಟದ ಮೂಲಕ ಜನವರಿ ಮೊದಲ ವಾರದಿಂದ ಪಾದಯಾತ್ರೆ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಗಮನಹರಿಸಲು ತೀರ್ಮಾನಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಪಾದಯಾತ್ರೆಗೆ ಕೈ ಜೋಡಿಸಿ ಹೋರಾಟದ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು ಸಹಕರಿಸಿಲು ಕೊರಿದರು .