ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ಡಿ.17
ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆವರೆಗೆ ಹೊನ್ನಾಳಿ
ತಾಲ್ಲೂಕಿನ ಪ್ರವಾಸಿ ಮಂದಿರಕ್ಕೆ ಹಾಗೂ ಅದೇ ದಿನ ಮಧ್ಯಾಹ್ನ 3
ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನ್ಯಾಮತಿ ತಾಲ್ಲೂಕು
ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆಗಳ
ಅರ್ಜಿಗಳನ್ನು ಸ್ವೀಕರಿಸುವರು.
ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅರ್ಜಿಗಳನ್ನು ನೀಡಿ,
ಈ ಭೇಟಿಯ ಸದುಪಯೋಗ ಪಡೆಯಬಹುದಾಗಿದ್ದು, ಹೆಚ್ಚಿನ
ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-236600, 9480806227, 9480806284
ಅನ್ನು ಸಂಪರ್ಕಿಸಬಹುದೆಂದು ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ
ಆರ್.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.