ಇಂದು ವಿಶ್ವ ಕ.ರ.ವೇ ಹೊನ್ನಾಳಿ ತಾಲ್ಲೂಕು ಘಟಕದ ವತಿಯಿಂದ ಬೆಳಗಾವಿಯಲ್ಲಿ ಎಮ್.ಇ.ಎಸ್. ಹಾಗೂ ಶಿವಸೇನೆಯ ಕಿಡಿಗೇಡಿಗಳು ರಾಯಣ್ಣನ ಮೂರ್ತಿಯನ್ನು ಧ್ವಂಸಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿ ಹಾಗೂ ಕರ್ನಾಟಕದ ನಾಡಧ್ವಜವನ್ನು ಸುಟ್ಟಂತಹ ವಿಕೃತ ಮನಸ್ಸಿನ ದ್ರೋಹಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು ಹಾಗೂ ಎಂ.ಇ.ಎಸ್. ಸಂಘಟನೆಯನ್ನು ರಾಜ್ಯದಿಂದ ಕಿತ್ತೊಸೆಯಬೇಕೆಂದು ಆಗ್ರಹಿಸಿ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ತಾಲ್ಲೂಕು ಅಧ್ಯಕ್ಷರಾದ ಪ್ರದೀಪ್ ಮಾರಗೊಂಡನಹಳ್ಳಿ ಯವರ ನೇತೃತ್ವದಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆಯ ಪ್ರತಿಕೃತಿಯನ್ನು ದಹಿಸಿ ಮನವಿ ಸಲ್ಲಿಸಲಾಯಿತು..