ನ್ಯಾಮತಿ : ಪಟ್ಟಣದ ಮೂಲಕ ಹಾದು ಹೋಗಿರುವ ಜೀನಹಳ್ಳಿ-ನ್ಯಾಮತಿ-ಚೀಲೂರು ಹಾಗೂ ತೀರ್ಥರಾಮೇಶ್ವರ-ನ್ಯಾಮತಿ-ಗೋವಿಕೋವಿ ರಸ್ತೆಗಳ ವಿಸ್ತರಣಾ ಕಾಮಾಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಕಿತ್ತೂರು ರಾಣಿಚೆನ್ನಮ್ಮ ವೃತ್ತದಲ್ಲಿ ಕುಂಬಾರ ಬೀದಿ, ವಾಲ್ಮೀಕಿ ಬೀದಿ, ಆಂಜನೇಯ ಬೀದಿ ಮತ್ತು ವೀರಭದ್ರೇಶ್ವರ ದೇವಸ್ಥಾನದ ರಸ್ತೆಗಳ ವಿಸ್ತರಣೆ ಹಾಗೂ ಅಲಂಕಾರಿಕ ದೀಪಗಳನ್ನು ಅಳವಡಿಸುವ ರೂ 25 ಕೋಟಿ ಅಂದಾಜಿನ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಆಡಳಿತ ಕೊನೆಯ ಅವಧಿಯಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಬೇಡಿಕೆಗೆ ರೂಪಾಯಿ 25 ಕೋಟಿ ಹಣವನ್ನು ಮಂಜೂರು ಮಾಡಿದರು. ಅಷ್ಟೇ ಅಲ್ಲದೇ 44.6 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಹಾಗೂ 33.95 ಕೋಟಿ ವೆಚ್ಚದಲ್ಲಿ ಒಳ ಚರಂಡಿ ಸೇರಿ ಒಟ್ಟಾರೆ ಕೋಟ್ಯಾಂತರ ರೂಪಾಯಿ ಮಂಜೂರು ಮಾಡಿದ್ದು, ಅದಕ್ಕಾಗಿ ಅವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಹೊನ್ನಾಳಿಯ ಯುಟಿಪಿ ಕಚೇರಿಯಿಂದ ಗೊಲ್ಲರಹಳ್ಳಿವರೆಗೆ ರಸ್ತೆ ವಿಭಜಕಗಳನ್ನು ಪುನರ್ ನವೀಕರಿಸಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುವುದು ಎಂದ ರೇಣುಕಾಚಾರ್ಯ ನ್ಯಾಮತಿ ಪಟ್ಟಣದ ಪೊಲೀಸ್ ಠಾಣೆಯಿಂದ ಕೋಡಿಕೊಪ್ಪ ಸರ್ಕಾರಿ ಶಾಲೆಯ ವರೆಗೆ ಸಿಂಗಲ್ ದೀಪಗಳನ್ನು ಅಳವಡಿಸಲು ಮತ್ತು ಆಯ್ದ ಜಾಗಗಳಲ್ಲಿ 12 ಹೈ ಮಾಸ್ಕ್ ಲೈಟ್‍ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದ ರೇಣುಕಾಚಾರ್ಯ ಈ ಎಲ್ಲಾ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಪಕ್ಷಾತೀತವಾಗಿ ಸಹಕರಿಸುವಂತೆ ಮನವಿ ಮಾಡಿದರು.
ಕಿತ್ತೂರುರಾಣಿ ಚೆನ್ನಮ್ಮ, ಕುಂಬಾರ ಬೀದಿ, ವಾಲ್ಮೀಕಿ ಬೀದಿ, ಆಂಜನೇಯ ಬೀದಿ ಈ ನಾಲ್ಕು ಬೀದಿಗಳ ರಸ್ತೆಯ ಇಕ್ಕೆಲಗಳಲ್ಲಿ 25 ಹಾಗೂ 25 ಅಡಿ ರಸ್ತೆ ವಿಸ್ತರಣೆ, ಚರಂಡಿ, ಪೈಪ್ ಲೈಲ್ ಒಳಗೊಂಡಂತೆ ಕಾಮಗಾರಿ ನಡೆಯಲಿದ್ದು ಈ ನಾಲ್ಕು ರಸ್ತೆಗಳ ನಿವಾಸಿಗಳು ಜಾಗ ತೆರವು ಮಾಡಿ ಅಭಿವೃದ್ದಿಗೆ ಸಹಕಾರ ನೀಡುವಂತೆ ಶಾಸಕರು ಮನವಿ ಮಾಡಿದರು.
ಈ ನಾಲ್ಕು ಬೀದಿಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ರಸ್ತೆಗಳು ನಿರ್ಮಾಣವಾಗಲಿದ್ದು ಜನರು ಈ ಕಾಮಗಾರಿಗೆ ಸಹಕಾರ ನೀಡುವ ಮೂಲಕ ರಸ್ತೆ ಅಭಿವೃದ್ದಿಗೆ ಕೈ ಜೋಡಿಸುವಂತೆ ಸಾರ್ವನಿಕರಲ್ಲಿ ಮನವಿ ಮಾಡಿದರು.
ಕಳೆದ ಅವಧಿಯಲ್ಲಿ ಈ ನಾಲ್ಕು ಬೀದಿಗಳ ರಸ್ತೆಗಳ ಅಭಿವೃದ್ದಿಗೆ ಹಣ ಬಿಡುಗಡೆ ಯಾಗಿತ್ತು, ಆದರೇ ಕೆಲವರಿಂದಾಗಿ ಈ ರಸ್ತೆಗಳ ಅಭಿವೃದ್ದಿ ಮಾಡಲು ಸಾಧ್ಯವಾಗದೇ ಅನುದಾನ ವಾಪಸ್ಸಾಗಿತ್ತು ಎಂಬುದನ್ನು ಸ್ಮರಿಸಿದರು.
ಈ ಸಂದರ್ಭ ತಹಶೀಲ್ದಾರ್ ರೇಣುಕಾ, ಉಪತಹಶೀಲ್ದಾರ್ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಉಮಾರಮೇಶ್, ಇಂಜಿನಿಯರ್ ಶಶಿಧರ್, ಬಗರ್ ಹುಕುಂ ಕಮಿಟಿ ಅಧ್ಯಕ್ಷ ಈರಣ್ಣ, ಮುಖಂಡರಾದ ರಾಜೇಶ್ವರಿ, ಎಸ್.ಪಿ.ರವಿಕುಮಾರ್, ಸಿ.ಕೆ.ರವಿಕುಮಾರ್, ಲಿಂಗರಾಜ್, ಕರಿಬಸವರೆಡ್ಡಿ ರೆಡ್ಡಿ ರತ್ನಮ್ಮ, ಗೀತಾ, ನಟರಾಜ್ ಸೇರಿದಂತೆ ಮತ್ತೀತತರಿದ್ದರು..

Leave a Reply

Your email address will not be published. Required fields are marked *