ದಾವಣಗೆರೆ:ದಾವಣಗೆರೆದಕ್ಷಿಣ ವಿಧಾನಸಭೆರಾಜ್ಯಕ್ಕೆ ಮಾದರಿ ಆಗುವ ನಿಟ್ಟಿನಲ್ಲಿಅಭಿವೃದ್ಧಿಆಗುತ್ತಿದ್ದು, ಸಾರ್ವಜನಿಕರು ಊಹಾಪೋಹಾಗಳಿಗೆ ಕಿವಿಗೊಡದೆಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರಾದಡಾ|| ಶಾಮನೂರು ಶಿವಶಂಕರಪ್ಪನವರು ಕರೆ ನೀಡಿದರು.
ಇಂದು ಸಂಜೆ ನಗರದ ವಾರ್ಡ್ ನಂಬರ್ 3ರಲ್ಲಿ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದಅವರು ಹಿಂದಿನ ಸರ್ಕಾರದಅವಧಿಯಲ್ಲಿ ಸಾವಿರಾರುಕೋಟಿ ರೂಗಳನ್ನು ತಂದುದಾವಣಗೆರೆ ನಗರ ಮತ್ತುಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಕ್ಷೇತ್ರದದಾವಣಗೆರೆ ನಗರ ಮತ್ತುಗ್ರಾಮಾಂತರ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನಆದ್ಯತೆ ನೀಡಲಾಗುತ್ತಿದ್ದು, ವಿವಿಧ ಇಲಾಖೆಗಳ ಅನುದಾನವನ್ನು ಸದ್ಬಳಕೆ ಮಾಡಿಕೊಂಡುಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದ್ದು, ರಾಜ್ಯಕ್ಕೆ ನಮ್ಮಕ್ಷೇತ್ರ ಮಾದರಿಆಗಲಿದೆಎಂದರು.
ಇಂದುಅಲ್ಪಸಂಖ್ಯಾತರಕಲ್ಯಾಣಇಲಾಖೆಯಿಂದ 2.85 ಕೋಟಿರೂ ವೆಚ್ಚದಲ್ಲಿ ಈ ವಾರ್ಡ್‍ನಜೋಗಲ್ ಬಾಬಾ ಲೇ ಔಟ್‍ನಖಲಂದರಿಯಾ ಮಸೀದಿ ಹತ್ತಿರ, 1ನೇ ಕ್ರಾಸ್ ನಿಂದ 2 ಕ್ರಾಸ್ ವರೆಗೆ ಹಾಗೂ 1ನೇ ಮುಖ್ಯರಸ್ತೆಯವರೆಗೆ ಸಿ.ಸಿ.ರಸ್ತೆ ಮತ್ತುಚರಂಡಿ ಸ್ಲ್ಯಾಬ್ ಕಾಮಗಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆಜೊತೆಗೆವಾರ್ಡ್‍ನಲ್ಲಿಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿನಿಂದ 204 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿದ್ದು, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಮತ್ತುಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಸೂಚಿಸಿದರು.
ಪಾಲಿಕೆ ಸದಸ್ಯ ಎ.ಬಿ.ರಹೀಂಸಾಬ್‍ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರುಗಳಾದ ಜಾಕೀರ್, ಶಫೀಕ್ ಪಂಡಿತ್, ಎನ್.ಕೆ.ಇಸ್ಮಾಯಿಲ್, ಪಂಚಾಯತ್‍ರಾಜ್‍ಇಂಜಿಯರ್ ವಿಭಾಗದ ಸಹಾಯಕಅಭಿಯಂತರರಾದ ಹೆಚ್.ವೆಂಕಟೇಶ್, ಗುತ್ತಿಗೆದಾರರಾದರವಿಕುಮಾರ್, ರಾಮಬಾಬು, ಮುಖಂಡರುಗಳಾದ ಹಬೀಬ್ ಸಾಬ್, ಮಹ್ಮದ್ ಹರ್ಷದ್, ಅಕ್ಬರ್ ಅಲಿ, ಅಬ್ದುಲ್‍ಜಬ್ಬಾರ್, ನಾಸೀರ್ ಸಾಬ್, ಅಲಿ, ಮಹಬೂಬ್, ಇಮ್ತಿಯಾಜ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *