ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020- 21 ನೇ ಸಾಲಿನ ಸಂಘದ ಸರ್ವ ಸದಸ್ಯರುಗಳ ಮಹಾಸಭೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈಗ ನಮ್ಮ ಜಿಲ್ಲಾ ಡಿಸಿಸಿ ಬ್ಯಾಂಕಿಗೆ ದೇಪೋಸಿಟ್ ಹಣವು ಹರಿದುಬರುತ್ತಿದ್ದು ಸಿರಿಗೆರೆ ತರಳಬಾಳು ಜಗದ್ಗುರುಗಳ 3 ಕೋಟಿ ರೂ ಡೆಪಾಸಿಟ್ ಇಟ್ಟಿದ್ದು ಇನ್ನು 7 ಕೋಟಿ ರೂ ಠೇವಣಿ ನೀಡುವುದಾಗಿ ತಿಳಿಸಿದ್ದಾರೆ. ನಾವು ಈ ಹಿಂದೆ ಜಿಲ್ಲೆಯ ರೈತರಿಗೆ 150 ಕೋಟಿ ರೂ ಸಾಲ ನೀಡುತ್ತಾ ಬಂದಿದ್ದು, ಮುಂದಿನ ವರ್ಷ ಸಾವಿರ ಕೋಟಿ ರೂ ಜಿಲ್ಲಾ ರೈತರಿಗೆ ಸಾಲ ನೀಡುವ ಗುರಿ ಹೊಂದಿದ್ದೇವೆ ಎಂದರು.
ಸಿಎಂ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸಂಘದ ಕಚೇರಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಸಹಕಾರಿ ಸಂಘವು ಗ್ರಾಮದ ರೈತರ ಸರ್ವತೋಮುಖ ಅಭಿವೃದ್ಧಿಗೆ ಹೆಬ್ಬಾಗಿಲಾಗಿದೆ. ಸಹಕಾರಿ ಸಂಘದ ಪಿತಾಮಹ ಸಿದ್ದನಗೌಡ ಪಾಟೀಲ್ ಕಟ್ಟಿದ ಸಹಕಾರಿ ಸಂಸ್ಥೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದ ಅವರು ಬೀರಗೊಂಡನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ದಂಗಾಳಿ ಬಸವೇಶ್ವರ ಸಮುದಾಯ ಭವನಕ್ಕೆ 1 ಕೋಟಿ ರೂ ನೀಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಡಿಜಿ ಶಾಂತನ ಗೌಡ್ರು ಸಂಘದ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿ ನನ್ನ ಕರ್ಮಭೂಮಿ ಬೆನಕನಹಳ್ಳಿ ಯಾದರೆ, ನನ್ನ ಜನ್ಮಭೂಮಿ ಬೀರಗೊಂಡನಹಳ್ಳಿ. ನನ್ನ ಅಜ್ಜಿಯ ಊರು ಇದು. ಇವೆರಡು ಗ್ರಾಮಗಳನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚಿನದಾಗಿ ಪ್ರೀತಿಸುತ್ತೇನೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಘಗಳ ವಲಯದಲ್ಲೂ ಸರಕಾರದ ರಾಜಕೀಯ ಹಸ್ತಕ್ಷೇಪದಿಂದಾಗಿ ನಿಜವಾದ ರೈತರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ನೀವು ರಾಜಕಾರಣ ಮಾಡಿ ಬೇಡ ಎನ್ನುವುದಿಲ್ಲ ಆದರೆ ಹಾಲು ಉತ್ಪಾದಕರ ಸಂಘ ಸಹಕಾರಿ ಸಂಘಗಳಲ್ಲಿ ರಾಜಕಾರಣ ಮಾಡಬೇಡಿ ಇಲ್ಲಿ ರಾಜಕಾರಣ ಮಾಡಿದರೆ ನಷ್ಟವಾಗುವುದು ನಿಮಗೆ. ಈ ಸಹಕಾರದ ರಥವನ್ನು ನೀವೆಲ್ಲರೂ ಸಹಕಾರದಿಂದ ಕೈಜೋಡಿಸಿ ಹೇಳಿದಾಗ ರೈತ ಸಮುದಾಯದ ಏಳಿಗೆ ಸಾಧ್ಯ. ಇದೇ ಸಂದರ್ಭದಲ್ಲಿ ಸಮುದಾಯದ ಭವನಕ್ಕೆ 5ಲಕ್ಷ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ ಬಸವರಾಜ್ ವಹಿಸಿ ಮಾತನಾಡಿ ನಮ್ಮ ಸಂಘವು 2019ರಲ್ಲಿ ಸ್ಥಾಪನೆಗೊಂಡು ಇದುವರೆಗು 843 ರೈತರ ಸದಸ್ಯರನ್ನು ಹೊಂದಿದ್ದು 246 ರೈತರಿಗೆ 2.20 ಕೋಟಿ ಬೆಳೆ ಸಾಲ, ಇಬ್ಬರು ರೈತರಿಗೆ 13 ಲಕ್ಷ ರೂ ಮಧ್ಯಮಾವಧಿ ಸಾಲ, 28 ರೈತ ಸದಸ್ಯರಿಗೆ 4 ಲಕ್ಷ ರೂ ಹೈನುಗಾರಿಕೆ ಸಾಲ ನೀಡಲಾಗಿದೆ. 30 ಲಕ್ಷ ರೂ ಪಿಗ್ಮಿ ಸಾಲ, 25 ಲಕ್ಷ ರೂ ಪಿಗ್ಮಿ ಠೇವಣಿ, 18 ಲಕ್ಷ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಹುಟ್ಟು 2.50 ಕೋಟಿ ಗೂ ಹೆಚ್ಚಿನ ವಹಿವಾಟು ನಡೆಸುತ್ತಿದ್ದು ಶೇಕಡ ನೂರರಷ್ಟು ಸಾಲ ಮರುಪಾವತಿ ಮಾಡಿ ಸಂಗವು ಮಾದರಿಯಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಎಚ್ ಷಣ್ಮುಖಪ್ಪ ಹಾಗೂ ಸಂಘದ ಉಪಾಧ್ಯಕ್ಷ ಸಂಪತ್ ಕುಮಾರ್ ಮಾತನಾಡಿದರು. ನಿರ್ದೇಶಕ ಬಿಹೆಚ್ ಉಮೇಶ್ ಪ್ರಾಸ್ತವಿಕ ಮಾತನಾಡಿದರು. ಬಿಪಿ ವಿಜಯಕುಮಾರ್ ಕಾರ್ಯನಿರ್ವಣಾಧಿಕಾರಿ ಶಿಲ್ಪ, ನಿರ್ದೇಶಕರಾದ ವೀರಭದ್ರಪ್ಪ, ರಾಜು, ಹಾಲೇಶ್, ಮಂಜುನಾಯ್ಕ, ಚೆನ್ನವೀರ ಚಾರಿ,ಮೌನೇಶ್ಚಾರ್, ಲಲಿತಮ್ಮ, ಯಶೋದಮ್ಮ, ಕರಿಯಪ್ಪ ಹಾಗೂ ನಾಲ್ಕು ಹಳ್ಳಿಯ ರೈತರು ಉಪಸ್ಥಿತರಿದ್ದರು.