ಹೊನ್ನಾಳಿ ತಾಲೂಕು ಕ್ಯಾಸಿನ ಕೆರೆ ಗ್ರಾಮದಲ್ಲಿ ಇರುವ ವೀರಭದ್ರೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸುಧಾ ಮೇಡಂ ರವರಿಗೆ ಸನ್ಮಾನ ಸಮಾರಂಭವನ್ನು ಹಳೆ ವಿದ್ಯಾರ್ಥಿಗಳಿಂದ ಮತ್ತು ಎಸ್ಡಿಎಂಸಿ ತಾಲೂಕ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ತಾಲೂಕು ಶಿಕ್ಷಣ ಅಧಿಕಾರಿಗಳಾದ ಪಿ ರಾಜೀವ್ ರವರು ಮಾತನಾಡಿ ,ಕ್ಯಾಸಿನಕೆರೆ ವೀರಭದ್ರೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸುಧಾ ಮೇಡಂ ಅವರು ಉತ್ತಮವಾಗಿ ಶಾಲೆಯಲ್ಲಿ 19 92 ರಿಂದ ಇಲ್ಲಿಯವರೆಗೆ ಉತ್ತಮ ಕಾರ್ಯ ನಿರ್ವಹಿಸುತ್ತಾ ಮುಖ್ಯೋಪಾಧ್ಯಾಯರಾಗಿ ಶಿಕ್ಷಕರ ಜೊತೆ ಉತ್ತಮ ಬಾಂಧವ್ಯ ವನ್ನು ಇಟ್ಟುಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡುತ್ತಿರುವುದರಿಂದ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಎಸ್ಡಿಎಂಸಿ ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ಅವರು ಮಾತನಾಡಿ ,ನಾವು ಇಪ್ಪತ್ತೈದು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಓದಿದ್ದು , ಆ ಸಮಯದಲ್ಲಿ ಮುಖ್ಯೋಪಾಧ್ಯಯರು ಮತ್ತು ಸಹ ಶಿಕ್ಷಕರು ಸರಿಯಾಗಿ ಶಿಕ್ಷಣ ಹೇಳಿಕೊಟ್ಟರು ಸಹ ,ನಾವು ಕಲಿಯಲಿಲ್ಲ ಅವರು ಹೇಳಿದ ಹಾಗೆ ಶಿಕ್ಷಣವನ್ನು ಕಲಿತಿದ್ದರೆ ನಾವುಗಳು ಇಂಜಿನಿಯರು, ಡಾಕ್ಟ್ರು. ಡಿ ಸಿ . ಎಸ್ಪಿ ಆಗಿ ಇರ್ತಿದ್ವ ಏನೋ ,ಆದರೆ ಆಗಿನ ಸಮಯಕ್ಕೆನಮಗೆ ತುಂಬಾ ಆಸ್ತಿ ಇದೆ ಎಂದು ತಾತ್ಸಾರ ಮಾಡಿ ಅಹಂಕಾರದಿಂದ ವಿದ್ಯಾಭ್ಯಾಸವನ್ನು ಸರಿಯಾಗಿ ಕಲಿಯದೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೆವು ಅದು ನಮ್ಮ ದುರ್ದೈವದ ಸಂಗತಿ ,
ಈಗ ಪುನಹ ಮುಖ್ಯೋಪಾಧ್ಯಾಯರಾದ ಸುಧಾ ಮೇಡಂ ಅವರು ನಮಗೆ ಈಗಿನ ಸರ್ಕಾರದ ಹೊಸ ಆದೇಶದ ಹೊರಡಿಸಿರುವ ಹಿನ್ನೆಲೆಯಲ್ಲಿ 20 21 ನೇ ಸಾಲಿನಲ್ಲಿ ಸುಮಾರು 26 ವಿದ್ಯಾರ್ಥಿಗಳು ವಯಸ್ಸು 45 ಆಗಿದ್ದರೂ ಸಹ ನಮಗೆ ಪರೀಕ್ಷೆಯನ್ನು ಕಟ್ಟಿಸಿ ಶಿಕ್ಷಣವನ್ನು ಹೇಳಿಕೊಟ್ಟು ಸುಮಾರು 26 ವಿದ್ಯಾರ್ಥಿಗಳು ಪಾಸ್ ಆಗಲಿಕ್ಕೆ ಅವರೇ ಕಾರಣ . ಹಾಗಾಗಿ ಸುಧಾ ಮೇಡಂ ರವರಿಗೆ ಗೌರವ ಸಲ್ಲಿಸಬೇಕು ಎಂದು ಹಳೆಯ 26 ವಿದ್ಯಾರ್ಥಿಗಳು ಸೇರಿ ಮುಖ್ಯೋಪಾಧ್ಯಾಯರಿಗೆ ಮತ್ತು ಸಹ ಶಿಕ್ಷಕರಿಗೆ ಗುರುವಂದನ ಕಾರ್ಯಕ್ರಮವನ್ನು ಮಾಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ .ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಸುಧಾ ಮೇಡಮ್ಮ ರವರು ಮಾತನಾಡಿ ,ನಾನು ಶಿಕ್ಷಕರ ಆಗಿದ್ದಕ್ಕೆ ಸರ್ಕಾರ ಒಂದು ಅವಕಾಶವನ್ನು ನಿಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಬರೆಯಲಿಕ್ಕೆ ಅವಕಾಶ ಮಾಡಿಕೊಟ್ಟಿರುವುದು ಮೊದಲನೇದಾಗಿ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ . ನಾನು ಶಿಕ್ಷಕರ ಆಗಿದ್ದಕ್ಕೆ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ದೊಡ್ಡತನದಿಂದ ನೋಡಿದರು. ನೀವೆಲ್ಲ ಹಳೆಯ-ವಿದ್ಯಾರ್ಥಿಗಳು ಸೇರಿ ನನಗೆ ಗುರು ವಂದನೆಯನ್ನು ಸಲ್ಲಿಸಿರುವುದು ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಊರಿನ ಗ್ರಾಮಸ್ಥರಿಗೆ ಹಾಗೂ ತಾಲೂಕಿನ ಶಿಕ್ಷಣ ಅಧಿಕಾರಿಗಳಿಗೆ ಹೃದಯ ಪೂರ್ವಕ ನಮನವನ್ನು ಸಲ್ಲಿಸಿದರು.
ಉಪಸ್ಥಿತಿಯಲ್ಲಿ ತಾಲೂಕು ಶಿಕ್ಷಣ ಅಧಿಕಾರಿ ಪಿ ರಾಜೀವ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮಾಶಂಕರ್ ,ಅಕ್ಷರ ದಾಸೋಹದ ರುದ್ರಪ್ಪ, ವೈದ್ಯರಾದ ಚಂದ್ರಪ್ಪ, ತಾಲೂಕ ಎಸ್ಡಿಎಂಸಿ ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ,ರಾಜ್ಯ ಸಂಘಟನೆಯ ಕಾರ್ಯಾಧ್ಯಕ್ಷರಾದ ರುದ್ರನಾಯಕ ,ಸತೀಶ್ ಬನ್ನಿಕೋಡ್ ,ರಮೇಶ್ ಬೆಲೆ ಮಲ್ಲೂರು, ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾ ಮೇಡಂ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮುದ್ದಿನ ಮಕ್ಕಳು ಊರಿನ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.