ದಾವಣಗೆರೆ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ
ನಡೆಸಲಾಗುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ
ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದಿರುವ ಬಾಲಕಿಯರಿಗೆ
ಸ್ವರಕ್ಷಣೆ ಕುರಿತಂತೆ ತರಬೇತಿ ನೀಡಲು, ಅರ್ಹ ತರಬೇತಿ
ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಅರ್ಜಿ ಸಲ್ಲಿಸಲು ನುರಿತ ಬ್ಲಾಕ್‍ಬೆಲ್ಟ್ (ಬ್ಲಾಕ್‍ಬೆಲ್ಟ್) ಮಹಿಳಾ ತರಬೇತಿ
ಶಿಕ್ಷಕರನ್ನು ಹೊಂದಿರುವ ಸಂಸ್ಥೆಗಳಿಗೆ ಪ್ರಥಮ ಆದ್ಯತೆ
ನೀಡಲಾಗುವುದು. ವಾರದಲ್ಲಿ ಎರಡು ದಿನಗಳಂತೆ ಮತ್ತು ದಿನಕ್ಕೆ
60 ನಿಮಿಷಗಳ ಸಮಯದಂತೆ ಒಟ್ಟು 6 ತಿಂಗಳಿಗೆ 48 ಭೋಧನಾ
ಅವಧಿಗಳಲ್ಲಿ ತರಬೇತಿ ನೀಡಬೇಕು. ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳು, ಜಿಲ್ಲಾ ಪಂಚಾಯತ್, ದಾವಣಗೆರೆ ರವರ ನೇತೃತ್ವದ
ಸಮಿತಿಯ ಮೂಲಕ ಜಿಲ್ಲಾ ಮಟ್ಟದಲ್ಲಿ ಗುರುತಿಸಲ್ಪಟ್ಟ
ತರಬೇತಿದಾರರನ್ನು ಆಯ್ಕೆ ಮಾಡಲಾಗುವುದು. ಆಯಾ
ತಾಲ್ಲೂಕಿನ ಸಹಾಯಕ ನಿರ್ದೇಶಕರು (ಗ್ರೇಡ್ 1 ; 2) ಸಮಾಜ ಕಲ್ಯಾಣ
ಇಲಾಖೆ ಇವರು ಅನುಷ್ಠಾನಾಧಿಕಾರಿ ಆಗಿರುತ್ತಾರೆ. ಪ್ರತಿ ಒಬ್ಬ
ತರಬೇತುದಾರರಿಗೆ ಪ್ರತಿ ಭೋಧನಾ ಅವಧಿ ಸಂಭಾವನೆ ರೂ.500/-
ಹಾಗೂ ತರಬೇತಿದಾರರ ಪ್ರಯಾಣ ವೆಚ್ಚ ಹಾಗೂ ಇತರೆ ವೆಚ್ಚಕ್ಕಾಗಿ
ರೂ.100/- ರಂತೆ ಪಾವತಿಸಲಾಗುವುದು. ತರಬೇತಿ
ಕಾರ್ಯಕ್ರಮದ ಕುರಿತು ದೂರುಗಳು ಬಾರದಂತೆ ಎಚ್ಚರವಹಿಸಿ,
ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ತರಬೇತಿ
ನೀಡಬೇಕು.
       ಡಿ.21 ರಿಂದ 27 ರವರೆಗೆ ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು,
ಕಚೇರಿ ಸಮಯದಲ್ಲಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ
ಇಲಾಖೆ, ದಾವಣಗೆರೆ ಇಲ್ಲಿ ಮುದ್ದಾಂ ಸಲ್ಲಿಸಬಹುದಾಗಿದೆ.  ಹೆಚ್ಚಿನ
ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿಯಿಂದ ಮಾಹಿತಿ
ಪಡೆಯಬಹುದೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *