ಹೊನ್ನಾಳಿ ಡಿ/ 22 ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಇಂದು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಲವೊಂದು ಎಂಇಎಸ್ ಪುಂಡರು ಕೆಲವರ ಮಾತು ಕೇಳಿ ಪ್ರಚೋದನೆಯಿಂದ ಇಂತಹ ಸ್ವಾತಂತ್ರ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನ ಗೊಳಿಸಿದ್ದಕ್ಕೆ ಗಡಿನಾಡು ಕನ್ನಡಿಗರಿಗೂ ಹಾಗೂ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೂ ಸಹ ಅವಮಾನವನ್ನು ಮಾಡಿರುತ್ತಾರೆ, ಇದನ್ನು ಖಂಡಿಸಿ ಹೊನ್ನಾಳಿ ಸಂಗೊಳ್ಳಿರಾಯಣ್ಣ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಅಲ್ಲಿಂದ ಪಾದಯಾತ್ರೆ ಮೂಲಕ ಪ್ರತಿಭಟಿಸುತ್ತ ತಾಲೂಕು ಆಫೀಸಿನ ವರೆಗೆ ತೆರಳಿ ,ತಪ್ಪಿತಸ್ಥರ ವಿರುದ್ಧ ಸರಕಾರವು ಕೂಡಲೇ ಕಠಿಣ ಕ್ರಮವನ್ನು ಜರುಗಿಸುವಂತೆ ಒತ್ತಾಯಿಸಿ ಉಪ ತಹಸೀಲ್ದಾರ್ ರಾದ ಸುರೇಶ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯ ಉಪಸ್ಥಿತಿಯಲ್ಲಿ ಹೊನ್ನಾಳಿ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಚನ್ನಬಸಪ್ಪ ಕೆ ,ಪ್ರಧಾನ ಕಾರ್ಯದರ್ಶಿಯಾದ ಭಾಷಾ ಸಾಬ್ ಮತ್ತು ಗುತ್ತಿಗೆದಾರರಾದ ತಿಮ್ಮೇಗೌಡ್ರು ಕಡದಕಟ್ಟೆ, ಆಸಿಫ ಲಕ್ಷ್ಮಣ ನಾಯಕ ,ದೇವರಾಜ್ , ಅಣ್ಣಪ್ಪ, ಹಾಲಸ್ವಾಮಿ, ಸುನಿಲ್ ಇನ್ನು ಮುಂತಾದವರು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.