ಹೊನ್ನಾಳಿ ಡಿ ./ 23 ಕುಂದೂರು ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದ ವತಿಯಿಂದ ಇಂದು ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ 20 21 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು .ಇದರ ಉದ್ಘಾಟನೆಯನ್ನು ಅಧ್ಯಕ್ಷರಾದ ಎಂ ಕಾಂತರಾಜು ರವರು ದೀಪವನ್ನ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಅಧ್ಯಕ್ಷರಾದ ಎನ್ ಕಾಂತರಾಜ್ ಅವರು ಮಾತನಾಡಿ ಸರ್ವ ಸದಸ್ಯರು ಸಕಾಲದಲ್ಲಿ ಬೆಳೆ ಕೃಷಿ ಸಾಲವನ್ನು ಮರುಪಾವತಿಸಿ ಸುಸ್ತಿ ಆಗದಂತೆ ಎಚ್ಚರ ವಹಿಸಬೇಕು ಹಾಗೂ ಡಿಸಿಸಿ ಬ್ಯಾಂಕಿನಲ್ಲಿ ಹೆಚ್ಚಿನ ಹಣವನ್ನು ತೊಡಗಿಸುವುದರ ಮೂಲಕ (ಫಿಕ್ಸೆಡ್) ಹಣವನ್ನು ತೊಡಗಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು. ಇದಕ್ಕೆ ಸರ್ವ ನಿರ್ದೇಶಕರುಗಳು ಅಧ್ಯಕ್ಷರ ಮಾತಿಗೆ ಒಪ್ಪಿಗೆಯನ್ನು ಸೂಚಿಸಿದರು.
ಕುಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿದೆ.
ಶ್ರೀಕಾಂತ್ ರಾಜು ಅಧ್ಯಕ್ಷರು ಶ್ರೀಮತಿ ಲಲಿತಮ್ಮ ಉಪಾಧ್ಯಕ್ಷರು
ನಿರ್ದೇಶಕರುಗಳಾದ ಶ್ರೀಮತಿ ಪ್ರೇಮಮ್ಮ ರಾಜಪ್ಪ ಎಂಎಚ್, ಕೆ ಎಂ ಡಿ ಶಾಂತರಾಜ್, ರೇವಣಸಿದ್ಧ ಜಿ ಎಂ, ಆಂಜನೇಯ ಎಸ್, ಮಂಜಪ್ಪ ಟಿ ವೈ ,ವಿಜಯ್ ಕುಮಾರ್ ಟಿ ಎಂ ,ಆಂಜನೇಯ (ನಗರಿ )ಮಂಜುನಾಥ ಪಿ ,ರವಿಕುಮಾರ್ ಕೆ ಜಿ ,
ಉಪಸ್ಥಿತಿಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ನಿರ್ದೇಶಕರುಗಳು ಹಾಗೂ ಬಿ ಪಿ ವಿಜಯಕುಮಾರ್ ಕ್ಷೇತ್ರ ಅಧಿಕಾರಿ ಡಿಸಿಸಿ ಬ್ಯಾಂಕ್ ಹೊನ್ನಾಳಿ 2 ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಬಿ ಹೆಚ್, ಕುಂದೂರು ಗ್ರಾಮದ ಗ್ರಾಮಸ್ಥರು ಹಾಗೂ ರೈತರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.