ಹೊನ್ನಾಳಿ 24 ಪಟ್ಟಣದ ಎಪಿಎಂಸಿ ಮಾರ್ಕೆಟ್ ಹಿಂಭಾಗದಲ್ಲಿ ಇರುವ ಶ್ರೀ ಯೇಸು ದೇವಾಲಯದಲ್ಲಿ ಯೇಸು ಕ್ರೈಸ್ತರು ಹುಟ್ಟು ಹಬ್ಬದ ದಿನದ ಅಂಗವಾಗಿ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಸರ್ಕಾರದ ಆದೇಶವನ್ನು ಪಾಲಿಸಿಕೊಂಡು ಸುಮಾರು 5 ರಿಂದ 6 ಕುಟುಂಬದ ಜೊತೆ ಫಾದರ್ ರಾದ ಲೂರ್ಡತ್ ಸ್ವಾಮಿಗಳ ನೇತೃತ್ವದಲ್ಲಿ ಆಚರಿಸಲಾಯಿತು.
ನಂತರ ಲೂರ್ಡತ ಸ್ವಾಮಿಗಳು ಮಾತನಾಡಿ ಯೇಸುರವರ ಇವತ್ತು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ನಾವು ನಮ್ಮ ಯೇಸು ದೇವಾಲಯದಲ್ಲಿ ಸರ್ಕಾರ ಆದೇಶವನ್ನು ಪಾಲಿಸಿಕೊಂಡು ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಂಡು ಕೆಲವು ಕುಟುಂಬಗಳ ಜೊತೆಗೆ ಸುಮಾರು ಒಂದುವರೆ ಘಂಟೆಗಳ ಕಾಲ ಯೇಸು ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಯೇಸುಕ್ರಿಸ್ತರ ಆಸೆಯಂತೆ ಪ್ರಪಂಚದಾದ್ಯಂತ ಎಲ್ಲರೂ ಪ್ರೀತಿಯಿಂದ ಒಗ್ಗಟ್ಟಾಗಿ ಎಲ್ಲಾ ಸಮಾಜದ ಜೊತೆಗೆ ಹೊಂದಾಣಿಕೆಯಿಂದ ಪ್ರತಿಯೊಬ್ಬರು ಬೇರೆಯವರ ಬಗ್ಗೆ ಒಳ್ಳೆಯ ಮನಸ್ಸನಿಂದ ಪ್ರೀತಿಯ ಜೊತೆಗೆ ಅಕ್ಕಪಕ್ಕದ ನೆರೆಹೊರೆಯವರು ಜೊತೆ ಸಂತೋಷದಿಂದ ಬಾಳಿ ಸುಖ ಸಂತೋಷದಿಂದ ಬದುಕಿ ಎಲ್ಲರಿಗೂ ಒಳಿತನ್ನು ಬಯಸುತ್ತಾ ಯೇಸುಕ್ರಿಸ್ತರ ಹಾದಿಯನ್ನು ನಾವು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದು ತಿಳಿಸಿದರು.
ಯೇಸು ಸ್ವಾಮಿಯು ಈ ದೇಶದ ಎಲ್ಲಾ ಸಮಾಜದವರಿಗೂ ಈ ಕೊರೋನಾ ರೋಗದಿಂದ ಮುಕ್ತರನ್ನಾಗಿ ಮಾಡಿ ಪ್ರತಿಯೊಬ್ಬರು ಆರೋಗ್ಯದಿಂದ ಬದುಕುವಂತೆ ಆಗಲಿ ಎಂದು ಹೇಳುತ್ತಾ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಲೂರ್ಡತ ಸ್ವಾಮಿಗಳು ತಿಳಿಸಿದರು.
ಹೊನ್ನಾಳಿ ಏಸು ದೇವಾಲಯದ ಫಾದರ್ ಎಪ್ ಆರ್ ಲೂರ್ಡತ ಸ್ವಾಮಿಗಳು,ಹಾಗೂ ಎಪ್ ಆರ್ ಥಾಮಸ್ ಸ್ವಾಮಿಗಳು ಮತ್ತು ಯೇಸು ರವರ ಭಕ್ತಾದಿಗಳು ಈ ದಾರ್ಮಿಕ ಕಾರ್ಯದಲ್ಲಿ ಬಾಗಿಯಾಗಿದ್ದರು.