ನ್ಯಾಮತಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳು ಕಸ ಮುಕ್ತ, ಇದಕ್ಕೆ ಗ್ರಾಮದ ಪ್ರತಿಯೊಬ್ಬರ ಸಹಕಾರವೂ ಮುಖ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಸವಳಂಗ ಗ್ರಾಮದಲ್ಲಿ ಹತ್ತೋಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು..
ಈಗಾಗಲೇ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದು, ಇದರಲ್ಲಿ ಕೆಲವು ಆಗಲೇ ಕಾರ್ಯರಂಭಗೊಂಡಿವೆ ಎಂದರು.


ಜನರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಹೇಗೆ ಸ್ಚಚ್ಚವಾಗಿಟ್ಟುಕೊಳ್ಳುತ್ತಾರೋ ಅದೇ ರೀತಿ ಗ್ರಾಮವನ್ನು ಸ್ವಚ್ಚವಾಗಿಡಲು ಜನರು ಕೈ ಜೋಡಿಸ ಬೇಕೆಂದರು.
ಘನತ್ಯಾಜ್ಯ ವಿಲೇವಾರಿ ಘಟಕ ಮಾಡುವುದರಿಂದ ಇಡೀ ಗ್ರಾಮವು ಕಸ ಮುಕ್ತವಾಗಲಿದ್ದು ಇಡೀ ಗ್ರಾಮದಲ್ಲಿ ಸುಂದರ ವಾತಾವರಣ ನಿರ್ಮಾಣವಾಲಿದೆ ಎಂದರು.
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವದ ಕನಸಾದ ಸ್ವಚ್ಚಭಾರತ ಯೋಜನೆಯಡಿ ದೇಶಾಧ್ಯಂತ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕಗಳನ್ನು ಪರಿಸರ ಸ್ವಚ್ಚತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಇಂತಹ ಯೋಜನೆ ಜಾರಿಗೊಳಿಸುತ್ತಿದ್ದು ನಾಗರಿಕರು ಪರಿಸರ ರಕ್ಷಣೆಯ ಜೊತೆಗೆ ಆರೋಗ್ಯದ ರಕ್ಷಣೆಯ ಕಡೆ ಗಮನ ಹರಿಸಿ ಗ್ರಾಮದ ಶುಚಿತ್ವ ಕಾಪಾಡುವಂತೆ ಮನವಿ ಮಾಡಿದರು.
ಈಗಾಗಲೇ ಸವಳಂಗ ಗ್ರಾಮಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ತಂದು ಗ್ರಾಮವನ್ನು ಅಭಿವೃದ್ದಿ ಮಾಡಲಾಗಿದೆ ಎಂದ ರೇಣುಕಾಚಾರ್ಯ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೋಂದು ವರ್ಷದಲ್ಲಿ ಅವಳಿ ತಾಲೂಕಿನ ಪ್ರತಿಯೊಂದು ಕೆರೆಗಳೂ ತುಂಬಲಿವೆ ಎಂದರು.
ಈ ಸಂದರ್ಭ ವಿಧಾನಪರಿಷತ್ ನೂತನ ಸದಸ್ಯರ ಡಿ.ಎಸ್.ಅರುಣ್, ಗ್ರಾ.ಪಂ.ಅಧ್ಯಕ್ಷರಾದ ಲಲಿತಮ್ಮ, ಉಪಾಧ್ಯಕ್ಷರಾದ ಗಿರೀಶ್, ಸದಸ್ಯರಾದ ನಾಗರಾಜ್,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಮಾರಮೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *