ಹೊನ್ನಾಳಿ ಡಿಸೆಂಬರ್ ;-27 ತಾಲೂಕು ನೇರಲಗುಂಡಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇಂದು ಎಸ್ಡಿಎಂಸಿ ತಾಲೂಕು ಘಟಕದ ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ಮತ್ತು ನೇರಲಗುಂಡಿ ಗ್ರಾಮದ ಗ್ರಾಮಸ್ಥರು ಜೊತೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಎಸ್ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ ರವರು ಮಾತನಾಡಿ, ನೇರಲಗುಂಡಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ತಾಲೂಕಿನಲ್ಲಿ ಏಕೈಕ ಶಾಲೆಯನ್ನಾಗಿ ಮಾಡುವ ಉದ್ದೇಶದಿಂದ ವನಯಾತ್ರಿ ಮತ್ತು ಹೊಸಾಟ್ ಸಂಸ್ಥೆ ಹಾಗೂ ತಾಲೂಕು ಎಸ್ಡಿಎಂಸಿ ಇವರ ಸಂಯುಕ್ತಾಶ್ರಯದಲ್ಲಿ ಸುಮಾರು 280 ರಿಂದ 300 ಮಕ್ಕಳಿರುವ ಶಾಲೆಯಲ್ಲಿ ಎಲ್ ಕೆ ಜಿ-ಯುಕೆಜಿಯಿಂದ ಏಳನೆಯ ತರಗತಿಯವರೆಗೆ ಇಂಗ್ಲೀಷ್ ಮೀಡಿಯಂ ತರಗತಿಯ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ ,ಊರಿನ ಗ್ರಾಮಸ್ಥರು ಮತ್ತು ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪೋಷಕರು ಎಲ್ಲಾ ಶಿಕ್ಷಕರು ಸಹಕಾರವನ್ನು ಕೊಟ್ಟರೆ, ಈ ಶಾಲೆಗೆ ಬರುವ ಮಕ್ಕಳಿಗೆ ಅಕ್ಕ-ಪಕ್ಕದ ಊರುಗಳಿಂದ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಇದರ ಜೊತೆಗೆ ಖಾಸಗಿ ವಿದ್ಯಾಸಂಸ್ಥೆ ಅವರಿಗಿಂತ ಉನ್ನತ ಮಟ್ಟದ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ನೇರಲಗುಂಡಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಗುರಿ ನಮ್ಮದಾಗಿದೆ ಎಂದು ಹೇಳಿದರು.
ಉಪಸ್ಥಿತಿಯಲ್ಲಿ ಎಸ್ಡಿಎಂಸಿ ತಾಲೂಕ ಅಧ್ಯಕ್ಷ ಲಿಂಗಪ್ಪ ಹುಣಸಘಟ್ಟ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರುದ್ರನಾಯಕ, ನ್ಯಾಮತಿ ತಾಲೂಕು ಎಸ್ಡಿಎಂಸಿ ಅಧ್ಯಕ್ಷರಾದ ರಾಜಶೇಖರ್, ನೇರಲಗುಂಡಿ ಗ್ರಾಮಸ್ಥರಾದ ನೀಲಕಂಠಪ್ಪ, ವೀರೇಶ್ ಬಾಬು , ಸತೀಶ ಬನ್ನಿಕೊಡ ,ಹಾಲೇಶಪ್ಪ ,ಮಂಜುನಾಥ್, ಹನುಮಂತಪ್ಪ ಹಾಗೂ ಮುಖ್ಯ ಶಿಕ್ಷಕರಾದ ಲಕ್ಷ್ಮೀಪತಿ ಸಹ ಭಾಗಿಯಾಗಿದ್ದರು.