ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿಗಳ ಕಚೇರಿ ದಾವಣಗೆರೆ, ಇವರ ಅಧೀನದಲ್ಲಿ ಬರುವ
ವಿವಿಧ ಆರೋಗ್ಯ ಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ

ವ್ಯವಸ್ಥೆಯ ನಿರ್ವಹಣೆಗಾಗಿ ತಂತ್ರಜ್ಞರನ್ನು  ಗುತ್ತಿಗೆ
ಆಧಾರದಲ್ಲಿ ನೇರ ಸಂದರ್ಶನ ಮೂಲಕ ನೇಮಕಾತಿ
ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ
ಆಹ್ವಾನಿಸಲಾಗಿದೆ.
ಆಮ್ಲಜನಕ ವ್ಯವಸ್ಥೆ ನಿರ್ವಹಣೆಗೆ ಸಿ.ಜಿ. ಆಸ್ಪತ್ರೆಗೆ 03, ಹರಿಹರ,
ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರು ತಾಲ್ಲೂಕು
ಆಸ್ಪತ್ರೆಗಳಿಗೆ ತಲಾ 02 ತಂತ್ರಜ್ಞರನ್ನು ಮಾಸಿಕ 15 ಸಾವಿರ ರೂ.
ವೇತನದೊಂದಿಗೆ ಗುತ್ತಿಗೆ ಆಧಾರದಲ್ಲಿ
ನೇಮಿಸಿಕೊಳ್ಳಲಾಗುವುದು. ನೇರ ಸಂದರ್ಶನವು   ಜನವರಿ 05
ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ರವರೆಗೆ ಎಸ್‍ಎಸ್ ಹೈಟೆಕ್ ಆಸ್ಪತ್ರೆ
ಹಿಂಭಾಗ, ಶ್ರೀರಾಮನಗರ ರಸ್ತೆ, ಎನ್‍ಸಿಸಿ ಕ್ಯಾಂಪ್ ಪಕ್ಕದಲ್ಲಿನ ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ
ನಡೆಸಲಾಗುವುದು. ಅರ್ಹ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ
ವಿದ್ಯಾರ್ಹತೆ ಮೂಲ ದಾಖಲಾತಿಗಳು ಮತ್ತು ಪ್ರಮಾಣ
ಪತ್ರಗಳೊಂದಿಗೆ ಹಾಗೂ ಒಂದು ಸೆಟ್ ದೃಢೀಕೃತ ಜೆರಾಕ್ಸ್
ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
    ಡಿಪ್ಲೊಮ/ಐಟಿಐ ಇನ್ ಬಯೋಮೆಡಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/
ಇನ್ಸ್‍ಟ್ರುಮೆಂಟೆಶನ್/ ಮೆಕಾನಿಕಲ್/ ಇನ್ಸ್‍ಟ್ರುಮೆಂಟ್ ಮೆಕ್ಯಾನಿಕ್/
ಮೇಂಟೆನೆನ್ಸ್ ಮೆಕ್ಯಾನಿಕ್ ವಿದ್ಯಾರ್ಹತೆಯೊಂದಿಗೆ ಎರಡು ವರ್ಷದ
ಅನುಭವ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಧಿಕಾರಿಗಳ ಕಚೆÉೀರಿ, ದಾವಣಗೆರೆ ದೂ.ಸಂ: 08192 237833 ಇವರನ್ನು
ಸಂಪರ್ಕಿಸಬಹುದೆಂದು ಡಿಹೆಚ್‍ಒ ಡಾ.ನಾಗರಾಜ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *