ಹೊನ್ನಾಳಿ : ಬಿಜೆಪಿ ಸರ್ಕಾರ ಅತಿಥಿ ಉಪನ್ಯಾಸಕರ ಪರವಿದ್ದು, ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಿ ಅವರ ಸಮಸ್ಯೆ ಬಗೆ ಹರಿಸುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.
ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 57 ಜನ ಅತಿಥಿ ಉಪನ್ಯಾಸಕರಿದ್ದು, ಸೇವಾ ಭದ್ರತೆ ಹಾಗೂ ವೇತನ ವಿಲ್ಲದೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟ ಸಮಂಜಸವಾಗಿದ್ದು, ನನ್ನ ಸರ್ಕಾರ ನಿಮ್ಮ ಪರವಾಗಿದ್ದು, ಸದ್ಯದರಲ್ಲೇ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಸುವುದಾಗಿ ಬರವಸೆ ನೀಡಿದರು.
ಹೋರಾಟದಿಂದ ಮಾತ್ರ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯ, ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದ ರೇಣುಕಾಚಾರ್ಯ ನಾನು ಕೂಡ ಹೋರಾಟದಿಂದಲೇ ಶಾಸಕನಾಗಿದ್ದು ಎಂದರು.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರು ತಮ್ಮ ಭವಿಷ್ಯವನ್ನು ಬದಿಗಿಟ್ಟು ವಿದ್ಯೆಯನ್ನು ದಾರೆ ಎರೆಯುವ ಕೆಲಸ ಮಾಡುತ್ತಿದ್ದು ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದ ರೇಣುಕಾಚಾರ್ಯ, ಅತಿಥಿ ಉಪನ್ಯಾಸಕರು ಹೋರಾಟ ಅರ್ಥ ಪೂರ್ಣವಾಗಿದ್ದು ಈ ಬಗ್ಗೆ ಸಂಬಂಧ ಪಟ್ಟ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಬರವಸೆ ನೀಡಿದರು.
ಅತಿಥಿ ಉಪನ್ಯಾಸಕ ವಿನಾಯಕ್ ಮಾತನಾಡಿ, ತರಗತಿ ಬಹಿಷ್ಕರಿಸಿ ಕಳೆದ 17 ದಿನಗಳಿಂದ ನಿರಂತರವಾಗಿ ಅತಿಥಿ ಉಪನ್ಯಾಸಕರು ಹೋರಾಟ ಮಾಡಿಕೊಂಡು ಬರುತ್ತಿದ್ದು, ನಮ್ಮ ಸಮಸ್ಯೆ ಬಗೆ ಹರಿಯುವವರೆಗೂ ನಾವು ಹೋರಾಟ ಕೈ ಬಿಡುವುದಿಲ್ಲಾ ಎಂದರು.
ರಾಜ್ಯದ 412 ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು ಶೇ 95 ರಷ್ಟು ಅತಿಥಿ ಉಪನ್ಯಾಸಕರು ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದರು.
ಅತಿಥಿ ಉಪನ್ಯಾಸಕಿ ಪುಪ್ಪಲತಾ ಮಾತನಾಡಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಬದ್ದ ವೇತನ, ಹಾಗೂ ಸೇವೆ ಖಾಯಂ ಗೊಳಿಸ ಬೇಕು ಇಲ್ಲದೇ ಇದ್ದರೇ ಅತಿಥಿ ಉಪನ್ಯಾಸಕರನ್ನೇ ಸೇವೆಯಿಂದ ವಿಮುಕ್ತಿ ಗೊಳಿಸ ಬೇಕೆಂದರು.
ಈ ಸಂದರ್ಭ ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಗೂ ಸಿಂಡಿಕೇಟ್ ಸದಸ್ಯರ ಹಳದಪ್ಪ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಶರ್ಮ, ಖಜಾಂಚಿ ಅರುಣ್ , ಯು.ಬಿ.ಜಯಪ್ಪ, ಶ್ರೀನಿವಾಸ್,ಸಂಜು, ನಾಗೇಂದ್ರಪ್ಪ, ರಾಘವೇಂದ್ರ, ಪ್ರಕಾಶ್, ಕಿರಣ್, ಅಮಿತ್ ಕುಮಾರ್, ಅಶೋಕ್ ಸೇರದಿಂತೆ ಮತ್ತೀತತರಿದ್ದರು..
ಸಂತಾಪ : ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹರ್ಷ ಶಾನ್ ಬೋಬ್ ಹೋರಾಟದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಹೊನ್ನಾಳಿಯ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಇದೇ ವೇಳೆ ಸಂತಾಪ ವ್ಯಕ್ತ ಪಡಿಸಿದರು..




Leave a Reply

Your email address will not be published. Required fields are marked *