ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ದಾವಣಗೆರೆ
ನಗರದಲ್ಲಿ 137ನೇ ಕಾಂಗ್ರೆಸ್ ಸಂಸ್ಥಾಪನಾ
ವರ್ಷಾಚರಣೆವನ್ನು ಹಮ್ಮಿಕೊಳ್ಳಲಾಗಿತ್ತು.
ಇಂದು ಬೆಳಿಗ್ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ
ನಡೆದ ಸರಳ ಸಮಾರಂಭದಲ್ಲಿ ಹುತಾತ್ಮ ಸ್ವಾತಂತ್ರ್ಯ
ಹೋರಾಟಗಾರರಿಗೆ ಹಾಗೂ ಪಕ್ಷದ ಹಿರಿಯರಿಗೆ ಪುಷ್ಪ
ನಮನ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ
ಹೆಚ್.ಬಿ.ಮಂಜಪ್ಪನವರು ದೀಪ ಬೆಳಗಿಸುವ ಮೂಲಕ
ಸಮಾರಂಭವನ್ನು ಉದ್ಘಾಟಿಸಿದರು.

ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ
ಹೆಚ್.ಬಿ.ಮಂಜಪ್ಪನವರು ಮಾತನಾಡಿ ದೇಶದ
ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮಿಸಿದ ಕಾಂಗ್ರೆಸ್ ಪಕ್ಷ
ಬ್ರಿಟಿಷ್‍ರ ವಿರುದ್ದ ಹೋರಾಟ ನಡೆಸಿತು.ಆದರೆ ಬ್ರಿಟಿಷರ
ಜೊತೆ ಕೈಜೋಡಿಸಿದವರು ಮತ್ತು
ಮಹಾತ್ಮಗಾಂಧಿಯವರನ್ನು ಕೊಂದವ ಸಂತತಿ ಇಂದು
ದೇಶವನ್ನು ಆಳ್ವಿಕೆ ಮಾಡುತ್ತಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ವಕೀಲರ ಘಟಕದ ಅಧ್ಯಕ್ಷ ಪ್ರಕಾಶ್
ಪಾಟೀಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್
ಕೆ.ಶೆಟ್ಟಿ ಮಾತನಾಡಿ ದೇಶದಲ್ಲಿ ಕೇಂದ್ರ ಸರ್ಕಾರದ
ಆಡಳಿತದಿಂದ ಜನ ಬೇಸತ್ತಿದ್ದು, ಅರಾಜಕತೆ ಮೂಡಿದೆ.
ದೇಶವನ್ನು ಜಾತಿ ಧರ್ಮದ ವಿಷಯದಲ್ಲಿ
ಒಡೆಯಲಾಗುತ್ತಿದೆ. ದೇಶವನ್ನು ಆಳುತ್ತೇವೆ ಎನ್ನುವ
ಬಿಜೆಪಿಗರು ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಅಂಬಾನಿ,
ಆದಾನಿಯಂತಹ ಉದ್ಯಮಿಗಳಿಗೆ ಮಾರಾಟ
ಮಾಡುತ್ತಿದ್ದಾರೆ.ಅದರ ಬದಲು ಇಡೀ ದೇಶವನ್ನೇ ಅವರಿಗೆ
ಮಾರಾಟ ಮಾಡಿ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಶ್ರೀಮತಿ ಗೀತಾ ಚಂದ್ರಶೇಖರ್,
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಿತಾ
ರಘು, ಎಸ್ಸಿ ಕಾಂಗ್ರೆಸ್‍ನ ರಾಕೇಶ್, ಕಿಸಾನ್ ಕಾಂಗ್ರೆಸ್‍ನ ಬಾತಿ
ಶಿವಕುಮಾರ್, ನಾಗರಾಜ್ ಭಂಡಾರಿ, ಅಧ್ಯಕ್ಷತೆ ವಹಿಸಿದ್ದ ಬ್ಲಾಕ್
ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಲಿಯಾಕತ್ ಅಲಿ,
ಅವರುಗಳು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ

ತಂದುಕೊಟ್ಟ ಕಾಂಗ್ರೆಸ್ ಪಕ್ಷ ದೇಶವನ್ನು
ಸಮಗ್ರವಾಗಿ ಅಭಿವೃದ್ಧಿ ಮಾಡಿತ್ತು. ಆದರೆ ಬಿಜೆಪಿ ಅದನ್ನು
ನಿರ್ನಾಮ ಮಾಡಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ
ಹೆಚ್.ಜಯಣ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್
ಕೊಂಡಜ್ಜಿ, ಉಪಾಧ್ಯಕ್ಷ ಸಾಗರ್, ಇಬ್ರಾಹಿಂ ಖಲೀವುಲ್ಲಾ,
ಸದ್ದಾಂ, ಪಂಚಾಯತ್ ರಾಜ್‍ನ ರಾಘವೇಂದ್ರಗೌಡ,
ಸೇವಾದಳದ ಅಬ್ದುಲ್ ಜಬ್ಬಾರ್, ಸುಭಾನ್ ಸಾಬ್, ಆವರಗೆರೆ
ಅಣ್ಣಪ್ಪ, ಯುವರಾಜ್, ಜಯಮ್ಮ ಮತ್ತಿತರರಿದ್ದರು.

Leave a Reply

Your email address will not be published. Required fields are marked *