ಹಿರಿಯ ಸಾಹಿತಿ ಹರಿಹರದ ಸೀತಾನಾರಾಯಣ್ ಅವರ “ನಾ ಕಂಡ ಗುಡಿಗೋಪುರಗಳು” ಕೃತಿ ಲೋಕಾರ್ಪಣೆ
ಹರಿಹರ,ಡಿ.27-ಭಾರತದ ದೇಗುಲಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕನ್ನಡಿಗಳಾಗಿವೆ ಎಂದು ‘ಜನಮಿಡಿತ’ ಪತ್ರಿಕೆಯ ಸಂಪಾದಕ ಜಿ.ಎಂ.ಆರ್.ಆರಾಧ್ಯ ಅಭಿಪ್ರಾಯಪಟ್ಟರು.
ಅವರು ಇಂದು ಹರಿಹರದಲ್ಲಿ ನಡೆದ ಶ್ರೀಮತಿ ಸೀತಾ ಎನ್ ನಾರಾಯಣ ಇವರ ಪುಸ್ತಕ ‘ನಾ ಕಂಡ ಗುಡಿ ಗೋಪುರಗಳು ಇದರ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಇವರು ದೇಗುಲಗಳು ಕೇವಲ ಧಾರ್ಮಿಕ ಶ್ರದ್ದಾ ಕೇಂದ್ರಗಳು ಮಾತ್ರವಲ್ಲ ಜೊತೆಗೆ ಆ ಪ್ರದೇಶದ ಜನಜೀವನ, ರೂಢಿ ಪದ್ಧತಿಗಳು, ಆಹಾರ ಕ್ರಮ ಭಾಷೆ ಎಲ್ಲವನ್ನು ಶತಶತಮಾನಗಳಿಂದ ಇತಿಹಾಸದ ಮುಖಾಂತರ ನಮಗೆ ತಿಳಿಸುತ್ತಾ ಬರುತ್ತಿದೆ. ಈ ನಿಟ್ಟಿನಲ್ಲಿ ಲೇಖಕಿ ಶ್ರೀಮತಿ ಸೀತಾ ಎಸ್ ನಾರಾಯಣ ಇವರು ಒಬ್ಬಗೃಹಿಣಿಯಾಗಿದ್ದು, ಕೊಂಡು ತಮ್ಮ ಕುಟುಂಬ ನಿರ್ವಹಣೆಯ ಜೊತೆಯಲ್ಲೂ ಸಾಹಿತ್ಯ ಸೇವೆಯಲ್ಲಿ ತೊಡಗಿ ಸುಮಾರು ವರ್ಷಗಳಿಂದ ಸಾಹಿತ್ಯ ಲೋಕಕ್ಕೆ ಆಪಾರ ಕೊಡುಗೆಯನ್ನು ನೀಡುತ್ತಿದ್ದಾರೆ. ಇಂದು ಇವರು ನೀಡಿರುವ ಈ ನಾ ಕಂಡ ಗುಡಿಗೋಪುರಗಳು ಪುಸ್ತಕ ಅತ್ಯಂತ ಮಹತ್ವದ ಮಾಹಿತಿಗಳಿಂದ ಕೂಡಿರುವ ಆಕರ ಗ್ರಂಥವಾಗಿದೆ. ಆದ್ದರಿಂದ ಈ ಅಮೂಲ್ಯ ಪುಸ್ತಕವನ್ನು ಹೊರತಂದಿರುವ ಲೇಖಕಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೋ ಸಿ.ವಿ.ಪಾಟೀಲ್ ಕೃತಿಯ ಕುರಿತು ಮಾತನಾಡುತ್ತಾ, ಲೇಖಕಿ ಸೀತಾ ಎಸ್ ನಾರಾಯಣ ಇವರು ಕುತೂಹಲ ಹಾಗೂ ಆಸಕ್ತಿಯಿಂದ ಸಂಗ್ರಹಿಸಿದ ಸಾಹಿ ಸಾಂಸ್ಕೃತಿಕ, ಸಂಶೋಧನಾತ್ಮಕವಾಗಿದ್ದು ವ್ಯಾಪಕವಾದ ಪ್ರಾಪೂರ್ಣ ವಾದ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಇವರ ಈ ಕೃತಿಯಲ್ಲಿ ನೂರಾ ಮತ್ತು ಗುಡಿ ಗೋಪುರಗಳ ಆಪೋರ್ವ ಸಂಗ್ರಹ ಅಡಕವಾಗಿದೆ. ಲೇಖಕಿಯವರು ದರ್ಶಿಸಿದ ಆಯಾ ಕ್ಷೇತ್ರಗಳ ಐತಿಗಳನ್ನು ಅರಿತು ಅವುಗಳ ಸೂಕ್ತ ಮಾಹಿತಿಗಳನ್ನು ಓದುಗರಿಗೆ ಉಣ ಬಡಿಸಿದ್ದಾರೆ. ಪರ ಪೌರಾಣಿಕ, ಐತಿಹಾಸಿಕ ಮಹತ್ವವನ್ನು ಸಾರುವಲ್ಲಿ ಸಫಲರಾಗಿದ್ದಾರೆ. ಸಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ ಇವರು ಮಾತನಾಡಿ, ಲೇಖಕಿ ಸೀತಾ ಎಸ್ ನಾರಾಯಣ ಇವರು ದಾವಣಗೆರೆ ಜಿಲ್ಲೆಯಲ್ಲಿ ಒಬ್ಬ ಮಹಿಳಾ ಭ ಲೇಖಕಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಲೇಖಕ ಮಲ್ಲಮ್ಮ ನಾಗರಾಜ್, ವೀಣಾ ಕೃಷ್ಣಮೂರ್ತಿ ಅವರು
ಶುಭಾಶಯ ನುಡಿಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ಬಿ.ಪಿ ಹರೀಷ್ ಕಾರ್ಯಕ್ರಮಕ್ಕೆ ಬಂದು ಲೇಖಕಿಯ ಸಾಧನೆ ಇನ್ನೂ ಹೆಚ್ಚಾಗಲಿ ಎಂದು ಹಾರೈಸಿದರು.
ಚಿಂತನ ಪ್ರತಿಷ್ಠಾನದ ಅಧ್ಯಕ್ಷರಾದ ಸುಬ್ರಹ್ಮಣ್ಯ ನಾಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಗಾಯಕಿ ಉಮಾ ಭಟ್ ಪ್ರಾರ್ಥನಾ |ಗೀತೆ ಪ್ರಸ್ತುತ ಪಡಿಸಿದರು. ಕು. ಭುವನ ಸ್ವಾಗತ. ನೃತ್ಯ ಪ್ರದರ್ಶಿಸಿದರು. ಕುಮಾರಿ ಸನ್ನಿಧಿ ಸುಮಧುರ ಗೀತೆಗಳನ್ನು ಹಾಡಿದರು.ಲೇಖಕಿ ಸೀತಾ ಎಸ್ ವಹಿಸಿದ್ದರು.
ನಾರಾಯಣ ಇವರು ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ. ಡಿ.ಫ್ರಾನ್ಸಿಸ್ ಕ್ಲೀವಿಯರ್ ಕಾರ್ಯಕ್ರಮ ನಿರೂಪಿಸಿದರು. ಕಾಯ೯ಕ್ರಮ ಕೈ ಕೈಗಾರಿಕೋದ್ಯಮಿ ಎಂ ಆರ್ ಸತ್ಯನಾರಾಯಣ, ಯೋಗ ಪಟು ಡಾ.ಕೆ ಜೈಮುನಿ, ಯಶಸ್ವಿನಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಕೃಷ್ಣಮೂರ್ತಿ, ಸೇರಿದಂತೆ ಅನೇಕ ಜನ ಭಾಗವಹಿಸಿ ಲೇಖಕರಿಗೆ ಅಭಿನಂದನೆ ಸಲ್ಲಿಸಿದರು. ಟಿ.ಎ.ಶಂಕರ ನಾರಾಯಣ ಇವರು ಕಾರ್ಯಕ್ರಮದ ನೇತೃತ್ವ ವಯಿಸಿದ್ದರು.