ಹೊನ್ನಾಳಿ ಡಿ 28 ಹೊನ್ನಾಳಿ ತಾಲೂಕು ದೇವನಾಯಕನಹಳ್ಳಿ ಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಾಖೆ ಹೊನ್ನಾಳಿ ಇವರ ವತಿಯಿಂದ 20 22 ನೇ ಸಾಲಿನ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ {ರಿ,}ಬೆಂಗಳೂರು ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಕ್ಷರಿಯವರು ಹೊನ್ನಾಳಿ ಸರ್ಕಾರಿ ನೌಕರ ಭವನದಲ್ಲಿ ದೀಪವನ್ನು ಬೆಳಗಿಸುವುದರ ಮೂಲಕ ಚಾಲನೆಯನ್ನು ಕೊಟ್ಟರು.
ಅಧ್ಯಕ್ಷತೆಯನ್ನು ಹೊನ್ನಾಳಿ ತಾಲೂಕು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕುಮಾರ್ ಬಿ ವಹಿಸಿದ್ದರು.
ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರು ಮಾತನಾಡಿ ಹೊನ್ನಾಳಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಕುಮಾರ್ ಬಿ ಅವರು ಅಧಿಕಾರ ವಹಿಸಿಕೊಂಡು 3ತಿಂಗಳು ಆಗಿದೆ, ಅವರು ರಾಜ್ಯದಲ್ಲೆ ಹೊನ್ನಾಳಿ ತಾಲೂಕಿನಯಲ್ಲಿ ಪ್ರಥಮ ಬಾರಿಗೆ ಪ್ರತಿಯೊಂದು ಶಾಲಾ ಶಿಕ್ಷಕರುಗಳಿಗೆ ಹಾಗೂ ಎಲ್ಲಾ ನೌಕರರ ಸಂಘದ ನೌಕರರಿಗೂ ಪದಾಧಿಕಾರಿಗಳಿಗೂ ಹೊಸವರ್ಷಕ್ಕೆ 20 22 ನೇ ಸಾಲಿನ ಕ್ಯಾಲೆಂಡರ್ ಕೊಡುತ್ತಿರುವುದು ಶ್ಲಾಘನೀಯ ಕೆಲಸ .ನಾವು ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾದ್ಯಂತ ನೌಕರರಿಗೆ ಕ್ಯಾಲೆಂಡರ್ ಕೊಡುತ್ತಿದ್ದೆವು, ಈಗ ಅವರು ಶಿವಮೊಗ್ಗದಲ್ಲಿ ಕೊಡುತ್ತಿರುವ ಕೆಲಸವನ್ನು ನೋಡಿಕೊಂಡು ಹೊನ್ನಾಳಿ ತಾಲೂಕಿನ ಎಲ್ಲಾ ನೌಕರರುಗಳಿಗೆ ಕ್ಯಾಲೆಂಡರ ಕೊಡುತ್ತಿರುವುದನ್ನು ಸಂತೋಷಪಡುವುದುರ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡುತ್ತ ಎನ್ ಪಿ ಎಸ್ ಪಿಡುಗನ್ನು ರದ್ದುಪಡಿಸಿ ಕೇಂದ್ರದ ಮಾದರಿಯಲ್ಲಿ ವೇತನವನ್ನು ರಾಜ್ಯದ ಎಲ್ಲಾ ನೌಕರರು ಮತ್ತು ಶಿಕ್ಷಕರ ಸೇರಿ ದಂತೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಕೊಡಿಸುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಿ ಕಾರ್ಯರೂಪಕ್ಕೆ ಬರುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಮಾತನ್ನು ಮುಗಿಸಿದರು.
ಉಪಸ್ಥಿತಿಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಕ್ಷರಿ ತಾಲೂಕ್ ಅಧ್ಯಕ್ಷರಾದ ಕುಮಾರ್ ಬಿ ತಹಸೀಲ್ದಾರರಾದ ಬಸನಗೌಡ ಕೋಟೂರ್. ತಾಲೂಕ್ ವೈದ್ಯಾಧಿಕಾರಿಗಳಾದ ಕೆಂಚಪ್ಪ ಬಂಟಿ .ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ ಪಾಲಾಕ್ಷ ಚಾರಿ ,ತಾಲೂಕ ಪ್ರಾಥಮಿಕ ನೌಕರ ಸಂಘದ ಅಧ್ಯಕ್ಷರಾದ ನಾಗರಾಜ್ ದೊಂಕತ್ತಿ ಹಾಗೂ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಮಾಜಿ ಅಧ್ಯಕ್ಷರು .ಉಪಾಧ್ಯಕ್ಷರುಗಳು. ಈ ಸಂಘದ ಎಲ್ಲಾ ಪದಾಧಿಕಾರಿಗಳು, ತಾಲೂಕಿನ ಎಲ್ಲ ಶಿಕ್ಷಕರು,ಶಿಕ್ಷಿಯರು ಮತ್ತು ಎಲ್ಲಾ ಇಲಾಖೆಯ ನೌಕರ ವರ್ಗದ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.