ಹೊನ್ನಾಳಿ; ಹೊನ್ನಾಳಿ ಹಾಗು ನ್ಯಾಮತಿ ತಾಲ್ಲೂಕು ಪ್ರಜಾಪರಿರ್ವತನಾ ವೇದಿಕೆಯಿಂದ ಕೋರೆಗಾವ್ ವಿಜಯೋತ್ಸವ ಹಾಗು ಸಾವಿತ್ರಿ ಬಾಯಿ ಪುಲೆ ಜನ್ಮ ದಿನದ ಅಂಗವಾಗಿ ಸ್ವಾಭಿಮಾನದ ವಿಜಯದಿನ , ಭೌದ್ಧಧರ್ಮ ವಿದಿವಿಧಾನದಲ್ಲಿ ನಾಮಕರಣ ಕಾರ್ಯಕ್ರಮವು ಜ.3ರ ಸೋಮವಾರ ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವುದಾಗಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಡಿ ಈಶ್ವರಪ್ಪ ಹೇಳಿದರು.
ಪಟ್ಟಣದ ಬಾಲರಾಜ್ ಘಾಟ್ ಅಂಬೇಡ್ಕರ್ ಭವನದಲ್ಲಿಂದು ನಡೆದ ವೇಧಿಕೆ ಪದಾಧಿ ಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಮಾರಂಭದ ಸಾನಿಧ್ಯವನ್ನು ಮೈಸೂರು ಉರಿಲಿಂಗಿ ಪೆದ್ದ ಮಠದ ಗ್ರಾನ ಪ್ರಕಾಶ ಸ್ವಾಮಿಜಿ ವಹಿಸಲಿದ್ದು ಕೋರೆಗಾವ್ ವಿಷಯವಾಗಿ ಬಸವಪಟ್ಟಣದ ಉಪನ್ಯಾಸಕ ಎಕೆ ಚನ್ನೇಶ್ ಸಾವಿತ್ರಿ ಬಾಯಿ ಪುಲೆ ವಿಷಯವಾಗಿ ನಾಗವಂದ ರವಿಕುಮಾರ ಉಪನ್ಯಾಸ ನೀಡಲಿರುವರು.
ಅತಿಥಿಗಳಾಗಿ ದಾವಣಗೆರೆ ನಿವೃತ್ತ ಪೋಲಿಸ್ ಅಧಿಕಾರಿ ಎನ್ ರುದ್ರಮುನಿ,ಜಗಜಿವನ್ ಅಧ್ಯಯನ ಕೇಂದ್ರದ ಹೆಚ್ ವಿಶ್ವನಾಥ್,ಸಿಪಿಐ ದೇವರಾಜ್,ಉಪನೋಂದಣಾಧಿಕಾರಿ ವೀಣಾ,ಉಪನ್ಯಾಸಕ ಬಸವರಾಜಪ್ಪ,ದಾವಣಗೆರೆ ವಕೀಲಾ ರಾಘವೇಂದ್ರನಾಯ್ಕ,ಪುರಸಭೆ ಮುಖ್ಯಾಧಿಕಾರಿ ಪಂಪಾಪತಿನಾಯ್ಕ ಸೇರಿದಂತೆ ಇತರೆ ಅಧಿಕಾರಿ ವರ್ಗದವರು ಭಾಗವಹಿಸಲಿರುವರು.

Leave a Reply

Your email address will not be published. Required fields are marked *