ದಾವಣಗೆರೆಯಲ್ಲಿ ಜರುಗಿದ ಅಂತರ ಕಾಲೇಜು ಟೇಬಲ್ ಟೆನಿಸ್
ಪಂದ್ಯಾವಳಿಯಲ್ಲಿ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಪ್ರಥಮ ಸ್ಥಾನ ಪಡೆದುಕೊಂಡಿತು.
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು
ಸ್ನಾತಕೋತ್ತರ ಕೇಂದ್ರ ಮತ್ತು  ದಾವಣಗೆರೆ ವಿಶ್ವವಿದ್ಯಾಲಯ
ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಇವರ ಸಂಯುಕ್ತ 
ಆಶ್ರಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರಕಾಲೇಜು 
ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿ
ಮತ್ತು ತಂಡದ ಆಯ್ಕೆಯನ್ನು ಬುಧವಾರ ನಡೆಸಲಾಯಿತು.
     ಪಂದ್ಯಾವಳಿಯ  ಪುರುಷರ ವಿಭಾಗದಲ್ಲಿ ಸರ್ಕಾರಿ ಪ್ರಥಮ
ದರ್ಜೆ ಕಾಲೇಜು ದಾವಣಗೆರೆ ಪ್ರಥಮ ಸ್ಥಾನ ಪಡೆದುಕೊಂಡಿತು, ಎ ಜಿ
ಬಿ ಕಾಲೇಜು ದ್ವಿತೀಯ, ಡಿ ಆರ್ ಎಮ್ ಸೈನ್ಸ್ ಕಾಲೇಜು ತೃತೀಯ, ಹಾಗೂ
ಎಚ್ ಐ ಎಚ್ ಇ ಕಾಲೇಜು ನಾಲ್ಕನೆ ಸ್ಥಾನ ಪಡೆದುಕೊಂಡಿತು.
ಮಹಿಳಾ ಪಂದ್ಯದಲ್ಲಿ  ಪ್ರಥಮ ಸ್ಥಾನ ಎಚ್ ಐ ಎಚ್ ಇ ಕಾಲೇಜು
ಪಡೆದುಕೊಂಡಿತು, ದ್ವಿತೀಯ-ಎ ವಿ ಕೆ ಕಾಲೇಜು, ತೃತೀಯ-ಎ ಜಿ ಬಿ
ಕಾಲೇಜು, ಹಾಗೂ ನಾಲ್ಕನೆ ಸ್ಥಾನವನ್ನು ಎಸ್ ಬಿ ಸಿ ಕಾಲೇಜು
ಪಡೆದುಕೊಂಡಿತು.
ಪ್ರಾಂಶುಪಾಲರಾದ ಡಾ. ಸಾಹೀರಾಭಾನು. ಫಾರೂಖಿ, ಕ್ರೀಡಾ ಸಮಿತಿ
ಸದಸ್ಯರುಗಳಾದ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ವೀರೇಂದ್ರ, ಪೆÇ್ರ
ಭೀಮಣ್ಣ ಸುಣಗಾರ್,  ಡಾ. ಎಮ್. ಮಂಜಣ್ಣ,  ಡಾ. ಪ್ರವೀಣ್. ಆನಂದಕಂದ, 
ಡಾ. ನಿವೇದಿತಾ ಡಾ. ಯಶೋದಾ, ಡಾ. ಸದಾಶಿವ, ಕಚೇರಿಯ ಪತ್ರಾಂಕಿತ
ವ್ಯವಸ್ಥಾಪಾಕರುಗಳಾದ ಜಗದೀಶ್ ನಾಯ್ಕ್, ಗೀತಾ ದೇವಿ,
ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *