ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ
ಎಂ.ಪಿ.ರೇಣುಕಾಚಾರ್ಯ ಇವರು ಜನವರಿ 01 ರಿಂದ 03 ರವರೆಗೆ ಜಿಲ್ಲಾ
ಪ್ರವಾಸ ಕೈಗೊಳ್ಳಲಿದ್ದಾರೆ.
ಜ.01 ರಂದು ಬೆಳಿಗ್ಗೆ 11 ಗಂಟೆಗೆ ಹೊನ್ನಾಳಿ ತಾಲ್ಲೂಕು ಕಚೇರಿ
ಸಭಾಂಗಣಕ್ಕೆ ಆಗಮಿಸಿ, ಕೋವಿಡ್ ಸೋಂಕಿನಿಂದ ಮೃತಪಟ್ಟವರು,
ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಹಾಗೂ
ಅತಿವೃಷ್ಠಿಯಿಂದ ಹಾನಿಗೊಳಗಾದ ಮನೆಗಳ ಕುಟುಂಬಗಳಿಗೆ
ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 1.15ಕ್ಕೆ ಕುಂದೂರು ಗ್ರಾಮದಲ್ಲಿ ನಡೆಯುವ ಅಪ್ಪು
ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ
ನ್ಯಾಮತಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕೋವಿಡ್ ಸೋಂಕಿನಿಂದ
ಮೃತಪಟ್ಟವರು, ಸಾಮಾಜಿಕ ಭದ್ರತಾ ಯೋಜನೆಯ
ಫಲಾನುಭವಿಗಳು ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ
ಮನೆಗಳ ಕುಟುಂಬಗಳಿಗೆ ಪತ್ರಗಳ ವಿತರಣಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7 ಗಂಟೆಗೆ
ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜ.02 ರಂದು ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯಲ್ಲಿ ಅಲಂಕಾರಿಕ
ವಿದ್ಯುದೀಪ ಕಾಮಗಾರಿಗೆ ಶಂಕುಸ್ಥಾಪನೆ. ಹಾಗೂ ಹೊನ್ನಾಳಿ ಟಿ.ಬಿ
ವೃತ್ತದಿಂದ ದಿಡಗೂರು ಡಾಬಾದವರೆಗೆ ರಸ್ತೆ ಅಭಿವೃದ್ದಿ
ಕಾಮಗಾರಿಯ ಶಂಕುಸ್ಥಾಪನೆ ನೆರೆವೇರಿಸುವರು. ಮಧ್ಯಾಹ್ನ 3
ಗಂಟೆಗೆ ನ್ಯಾಮತಿಯಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮಧ್ಯಾಹ್ನ 3 ಕ್ಕೆ ಶಿವಮೊಗ್ಗಕ್ಕೆ ತೆರುಳಿ, ಪುನಃ
ರಾತ್ರಿ 7.30 ಗಂಟೆಗೆ ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜ. 03 ರಂದು ಬೆ. 11 ಗಂಟೆಗೆ ಹೊನ್ನಾಳಿಯಲ್ಲಿ ಕರ್ನಾಟಕ
ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ತಾಲ್ಲೂಕು ಟ್ಟದ
ಅಧಿಕಾರಿಗಳ ಸಭೆ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಗ್ರಾಮ
ಪಂಚಾಯತ್‍ನ ಪಿಡಿಒ ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ
ನಡೆಸುವರು. ಮಧ್ಯಾಹ್ನ 3 ಗಂಟೆಗೆ ತಾಲ್ಲೂಕು ಬಗರ್ ಹುಕುಂ
ಸಮಿತಿ ಸಭೆ ನಡೆಸುವರು. ಸಂಜೆ 6 ಗಂಟೆಗೆ ಸಾರ್ವಜನಿಕರ
ಕುಂದುಕೊರತೆ ಅಹವಾಲು ಸ್ವೀಕರಿಸಿ, ಹೊನ್ನಾಳಿಯಲ್ಲಿ ವಾಸ್ತವ್ಯ
ಮಾಡುವರೆಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.