ಹೊನ್ನಾಳಿ ಡಿ;- 31 ತಾಲೂಕು ಮಾರಿಕೊಪ್ಪ ಗ್ರಾಮದಲ್ಲಿರುವ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಸರ್ಕಾರದ ಮುಜರಾಯಿ ಇಲಾಖೆಯ ಸೇರಿರುವ ಕಾರಣ ದೇವಸ್ಥಾನದಲ್ಲಿ ಭಕ್ತರು ಹಣವನ್ನು ಹಾಕಲಿಕ್ಕೆ ಹುಂಡಿಯನ್ನು ಇಟ್ಟಿದ್ದರು . ಭಕ್ತರು ಹಾಕಿದ ಹಣದಿಂದ ಆ ಹುಂಡಿ ತುಂಬಿತ್ತು, ಆದ ಕಾರಣ ಇಂದು ಮಾನ್ಯ ತಾಲೂಕು ತಹಸೀಲ್ದಾರರಾದ ಬಸನಗೌಡ ಕೋಟೂರ್ ರವರ ನೇತೃತ್ವದಲ್ಲಿ ಭಕ್ತರು ಹಾಕಿದ ಹುಂಡಿಯನ್ನು ಹೊಡೆಯಲಾಯಿತು. ಸುಮಾರು 25ರಿಂದ 30 ಕಂದಾಯ ಇಲಾಖೆ ಸೇರಿದ ನೌಕರರು ಸುಮಾರು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ಹುಂಡಿಯಲ್ಲಿದ್ದ ಹಣವನ್ನು ಎಣಿಕೆಯನ್ನು ಪೂರ್ಣಗೊಳಿಸಿ ನಂತರ ಸಿಕ್ಕ ಮೊತ್ತ ಹದಿನೈದು ಲಕ್ಷದ ,ಹದಿನಾಲ್ಕು ಸಾವಿರದ ,ನಾಲ್ಕು ನೂರ.ಇಪ್ಪತ್ತೊಂದು ಮಾತ್ರ (1514421 )ರೂಗಳು ಆಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಾ,
ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ಹಣವನ್ನು ಹೆಣಿಕೆ ಮಾಡಿದ ತಾಲೂಕ್ ಆಫೀಸಿನ ನೌಕರ ಸಿಬ್ಬಂದಿವರ್ಗದವರಿಗೆ ತಾಲೂಕು ದಂಡಾಧಿಕಾರಿಗಳು ಧನ್ಯವಾದ ಗಳನ್ನು ತಿಳಿಸಿದರು.