ಹೊನ್ನಳ್ಳಿ ಡಿ;- 31 ತಾಲೂಕು ಹೊಳೆ ಹರಳಹಳ್ಳಿ ಗ್ರಾಮದಲ್ಲಿ ಇಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹೊಳೆ ಹರಳಹಳ್ಳಿ ಇವರ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಬಾವುಟ ವನ್ನು ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆಯನ್ನು ಕೊಡಲಾಯಿತು.
ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರಾದ ಎಂಪಿ ರಮೇಶರವರು ಭಾಗವಹಿಸಿದ್ದರು .ನಂತರ ಮಾತನಾಡಿದ ಅವರು ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಬೇಕು ಎಂಬ ನಿಯಮವೇನು ಇಲ್ಲ ಡಿಸೆಂಬರ್ ತಿಂಗಳ 31ನೇ ತಾರಿಕಿಗೆ ಇಲ್ಲಿ ಆಚರಿಸುತ್ತಿದ್ದಾರೆ, ವರ್ಷವಿಡಿ 365 ದಿನಗಳಲ್ಲಿ ಯಾವಾಗ ಬೇಕಾದರೂ ಕನ್ನಡ ರಾಜ್ಯೋತ್ಸವನ್ನು ಆಚರಿಸಬಹುದು ಎಂದು ಹೇಳಿದರು .ಡಿಸೆಂಬರ್ 31 ರಂದು ರಾಜ್ಯಾದ್ಯಂತ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ನಾರಾಯಣಗೌಡ ಬಣ ವಾಟಾಳ್ ಪಕ್ಷದ ಬಣ ಗಳು ಇಂದು ಬೆಳಗಾವಿಯಲ್ಲಿ ಕನ್ನಡ ಧ್ವಜಕ್ಕೆ MES ಪುಂಡರು ಬೆಂಕಿ ಹಚ್ಚಿರವುದನ್ನು ಖಂಡಿಸಿ ಹೋರಾಟವನ್ನು ಹಮ್ಮಿಕೊಂಡಿದ್ದರು,


ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಅವರ ಜೊತೆ ಮಾತನಾಡಿ ನೀವು ಹಮ್ಮಿಕೊಂಡಿದ್ದ ಡಿಸೆಂಬರ್ 31 ನೇ ದಿನ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳಿ ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿರುವವರು ಬಂಧಿಸಿ ಕಾನೂನು ರೀತಿಯ ಕ್ರಮವನ್ನ ನಾವು ತೆಗೆದುಕೊಳ್ಳುತ್ತೇವೆ, ಕನ್ನಡ ನಾಡು ನುಡಿ ಜಲ ವಿಷಯಕ್ಕೆ ಬಂದಾಗ ನಾವು ಕಟಿ ಬದ್ದ ವಾಗಿರುತ್ತೇವೆ ಎಂದು ಮನವಿಯನ್ನು ಎಲ್ಲಾ ಸಂಘಟನೆಯವರಿಗೆ ಮನವಿ ಮುಖ್ಯಮಂತ್ರಿಗಳು ಮಾಡಿರುವುದರಿಂದ ವಾಪಸ್ ತೆಗೆದುಕೊಂಡಿದ್ದಾರೆ .ಆದಕಾರಣ ನಮ್ಮ ಬಿಜೆಪಿ ಪಕ್ಷವು ಕನ್ನಡ ನೆಲ-ಜಲ-ಭಾಷೆಯ ಬಗ್ಗೆ ಕಿಂಚಿತ್ತು ತೊಂದರೆ ಆದರೂ ಸಹ ನಾವು ಸಹಿಸಿಕೊಂಡು ಇರುವುದಿಲ್ಲ ಯಾವತ್ತೂ ಕೂಡ ಕರ್ನಾಟಕದ ರಕ್ಷಣೆಗೆ ಸದಾ ಬಿಜೆಪಿ ಪಕ್ಷ ಇರುತ್ತದೆ ಎಂದು ಎಂ ಪಿ ರಮೇಶ್ ತಿಳಿಸಿದರು.
ಕೊರೋನಾ ಸಂದರ್ಭದಲ್ಲಿ ಹಗಲು-ಇರುಳು ಸೇವೆಸಲ್ಲಿಸಿದ ಕಂದಾಯ ಇಲಾಖೆ ನೌಕರರು ಗಳಿಗೆ ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ,ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಎಂ ಪಿ ರಮೇಶ ರವರು ಕೊರೋನಾ ವಾರಿಯರ್ಸ ಗಳಿಗೆ ಸನ್ಮಾನ ವನ್ನು ಮಾಡಿದರು.
ಉಪಸ್ಥಿತಿಯಲ್ಲಿ ಬಿಜೆಪಿ ಮುಖಂಡರಾದ ಎಂ ಪಿ ರಮೇಶ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ,ವಿಶ್ವ ರಕ್ಷಣಾ ವೇದಿಕೆ ಅಧ್ಯಕ್ಷರು ಮತ್ತು ಸದಸ್ಯರುಗಳು, ಕಾಂಗ್ರೆಸ ಮತ್ತು ಬಿಜೆಪಿ ಯ ಕಾರ್ಯಕರ್ತರುಗಳು ಶಾಲಾ ಮಕ್ಕಳು ಊರಿನ ಮುಖಂಡರು ಗಳು ಮತ್ತು ಗ್ರಾಮಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *