ಹೊನ್ನಾಳಿ ; ನನ್ನ ವಿರುದ್ದ ಮಾಜಿ ಶಾಸಕರು ಹಾಗೂ ಅವರ ಪುತ್ರರು ಮಾಡಿರುವ ಆರೋಪಗಳಲ್ಲಿ ಯಾವುದೇ ಉರುಳಿಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಅವಳಿ ತಾಲೂಕಿಗೆ ಸಾವಿರಾರು ಕೋಟಿ ಅನುದಾನ ತಂದು ಅವಳಿ ತಾಲೂಕುಗಳನ್ನು ಸಮಗ್ರ ಅಭಿವೃದ್ದಿ ಮಾಡುತ್ತಿದ್ದು,ಇದನ್ನು ಸಹಿಸಿಕೊಳ್ಳಲಾಗದೇ ಮಾಜಿ ಶಾಸಕರು ವಿನಾಃ ಕಾರಣ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಅವಳಿ ತಾಲೂಕಿನಲ್ಲಿ ನಾನು ಮಾಡಿದ ಅಭಿವೃದ್ದಿಯನ್ನು ಜನರ ಮುಂದಿಟ್ಟು ಅಭಿವೃದ್ದಿಗೆ ಮತ ಹಾಕಿ ಎಂದು ಕೇಳಿದ್ದೇನೆ ಎಂದರು.
ಮುಂದಿನ 2023 ರ ಚುನಾವಣೆಗೆ ನನಗೆ ಆರ್ಶೀವಾದ ಮಾಡಿ ಎಂದು ಹೇಳಿದ್ದು ಸತ್ಯ, ಇದರಲ್ಲಿ ತಪ್ಪೇನಿದೆ ಎಂದ ರೇಣುಕಾಚಾರ್ಯ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಮಾಡಿದ್ದು ಅಭಿವೃದ್ದಿ ಮಾಡಿದವರಿಗೆ ಮತ ಹಾಕಿ ಎಂದು ಕೇಳಿದ್ದೇನೆ ಮಾಜಿ ಶಾಸಕರು ಅದನ್ನು ವಿಡಿಯೋ ಮಾಡಿಸಿ ನಾನು ಆಣೆ, ಪ್ರಮಾಣ ಮಾಡಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದರು.
2013 ರ ಚುನಾವಣೆಯಲ್ಲಿ ಮಾಜಿ ಶಾಸಕರು ಆಣೆ ಪ್ರಮಾಣ ಮಾಡಿಸಿದ್ದು ನೆನಪಿಲ್ಲವೇ ಎಂದು ಪ್ರಶ್ನೇ ಮಾಡಿದ ರೇಣುಕಾಚಾರ್ಯ ನನ್ನ ಮೇಲೆ ಅತಾಷಾ ಮನೋ ಭಾವನೆಯಿಂದ ಈ ರೀತಿ ಹೇಳಿಕೆ ನೀಡುತ್ತಿರುದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ, ಬೋರ್ ವೆಲ್ ನಲ್ಲಿ ನಾನು ಕೋಟಿಗಟ್ಟಲೇ ಹಣ ಹೊಡೆದಿದ್ದೇನೆಂದು ಮಾಜಿ ಶಾಸಕರು ಹೇಳುತ್ತಿದ್ದು ತಾಖತ್ ಇದ್ದರೇ ಅದನ್ನು ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದರು.
ನಾನು ಎಂದೂ ಕೂಡ ಜಾತಿ ರಾಜಕಾರಣ ಮಾಡಿಲ್ಲಾ ಎಂದ ರೇಣುಕಾಚಾರ್ಯ, ಅದನ್ನು ಮಾಡುತ್ತಿರುವುದು ಮಾಜಿ ಶಾಸಕರು ಎಂದರು. ವಿನಾಃ ಕಾರಣ ದಾಖಲೆ ಇಲ್ಲದೇ ನನ್ನ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ತಮ್ಮ ಘನತೆ ಉಳಿಸಿಕೊಳ್ಳಿ ಎಂದರು.
ಹೊನ್ನಾಳಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಮನೆಹಾನಿ, ಕೋವಿಡ್ ನಿಂದ ಮೃತ ಪಟ್ಟ ವಾರಸುದಾರರಿಗೆ, ಬೋವಿ ನಿಗಮದಿಂದ, ದೇವರಾಜ್ ಅರಸ್ ನಿಗಮದಿಂದ ಸುಮಾರು 17 ಕೋಟಿಯ ಪರಿಹಾರ ಚೆಕ್ ಹಾಗೂ ಪ್ರಮಾಣ ಪತ್ರ ನೀಡಲಾಗಿತ್ತು ಅದೇ ರೀತಿ ನ್ಯಾಮತಿ ತಾಲೂಕಿನಲ್ಲಿ ಸಾಮಾಜಿಕ ಭದ್ರತೆ, ಕೋವಿಡ್ ನಿಂದ ಮೃತಪಟ್ಟವರ ವಾರಸುದಾರರಿಗೆ ಹಾಗೂ ಅತಿವೃಷ್ಟಿಯಿಂದ ಮನೆಹಾನಿಯಾದವರಿಗೆ 17,037,400 ಪರಿಹಾರದ ಚೆಕ್ ಹಾಗೂ ಪ್ರಮಾಣ ಪತ್ರ ಸೇರಿ ಒಟ್ಟು 34 ಕೋಟಿಗೂ ಹೆಚ್ಚಿನ ಪರಿಹಾರ ನೀಡಲಾಗಿದೆ ಎಂದರು.
ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟವರಿಗೆ ಈ ಹಿಂದೆ 30 ಕ್ಕೂ ಹೆಚ್ಚು ಜನರಿಗೆ ಸರ್ಕಾರದಿಂದ ನೀಡುವ ಚೆಕ್ ಜೊತೆಗೆ ವೈಯಕ್ತಿಕವಾಗಿ ತಲಾ ಹತ್ತು ಸಾವಿರ ಪರಿಹಾರ ನೀಡಿದ್ದೇ, ಅದೇ ನಿನ್ನೆಯೂ 39 ಜನರಿಗೆ ತಲಾ ಹತ್ತು ಸಾವಿರ ಪರಿಹಾರ ನೀಡಿದ್ದೇನೆ ಎಂದ ಶಾಸಕರು ಮನೆ ಹಾನಿಯ” ಸಿ” ಕೆಟಗರಿಯವರಿಗೆ ಸರ್ಕಾರ ಐವತ್ತು ಸಾವಿರ ಹಣ ನೀಡಿದ್ದು ನಾನು ತಲಾ ಒಂದು ಸಾವಿರ ಹಣ ನೀಡುವುದಾಗಿ ಹೇಳಿದ್ದು ಅದನ್ನು ನೀಡಿದ್ದೇನೆ ಎಂದರು.
ಈ ಸಂದರ್ಭ ತಾಂಡಭೀವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಮುಖಂಡರಾದ ಅರಕೆರೆ ನಾಗರಾಜ್, ಜುಂಜಾನಾಯ್ಕ, ಮಹೇಶ್ ಹುಡೇದ್, ಸೆಂಟ್ರಿ ನಾಗರಾಜ್ ಸೇರಿದಂತೆ ಮತ್ತಿತತರಿದ್ದರು..