ಹೊನ್ನಾಳಿ ; ಮನುಷ\್ಯನಿಗೆ ಕಣ್ಣುಗಳು ಎಷ್ಟು ಮುಖ್ಯವೋ ದೇಶಕ್ಕೆ ವಿದ್ಯಾರ್ಥಿಗಳು ಅಷ್ಟೇ ಮುಖ್ಯ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಹೊನ್ನಾಳಿಯ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಮೃತ್ಯುಂಜಯ್ಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಲಸಿಕಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೇಶದ ಸಂಪತ್ತು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೇ, ಉತ್ತಮ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಮುಂದಾಗ ಬೇಕೆಂದರು.
15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು ಹೊನ್ನಾಳಿ ನ್ಯಾಮತಿ ಅವಳಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ 72 ಶಾಲೆಗಳ 5047 ಜನ ಹುಡುಗರು, 5075 ಜನ ವಿದ್ಯಾರ್ಥಿಗಳು ಸೇರಿ 10,122 ಜನ ವಿದ್ಯಾರ್ಥಿಗಳಿ ಲಸಿಕೆ ನೀಡಲಿದ್ದು ಸೋಮವರಾದಿಂದ ಬುಧವಾರದವರೆಗೆ ಮೂರು ದಿನಗಳ ಕಾಲಗಳ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಎಂದರು.
ಕೊರೊನಾ ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲಾ ವಿದ್ಯಾರ್ಥಿಗಳು ಬಯಬಿಟ್ಟು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕಾ ಮೇಳವನ್ನು ಯಶಸ್ವಿಗೊಳಿಸುವುದರ ಜೊತೆಗೆ ಕೊರೊನಾದಿಂದ ದೂರ ಇರುವಂತೆ ಕವಿ ಮಾತು ಹೇಳಿದರು.
ಇಂದಿನಿಂದ ವಿದ್ಯಾರ್ಥಿಗಳಿಗೆ ಮೊದಲನೇ ಡೋಸ್ ಲಸಿಕೆ ನೀಡುತ್ತಿದ್ದು 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುವುದು ಎಂದ ರೇಣುಕಾಚಾರ್ಯಈಗಾಗಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 3,15,756 ಜನರಿಗೆ ಲಸಿಕೆ ನೀಡಿದ್ದು ಅದರಲ್ಲಿ ಮೊದಲನೇ ಡೋಸ್ 1,75,390 ಜನರಿಗೆ ನೀಡಿದ್ದು,1,40,366 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಅವಳಿ ತಾಲೂಕಿನಲ್ಲಿ ಇನ್ನು ಕೆಲವರು ಲಸಿಕೆ ಹಾಕಿಸಿಕೊಂಡಿಲ್ಲಾ ಅಂತಹರ ಬಳಿ ಅಧಿಕಾರಿಗಳು ತೆರಳಿ ಅವರ ಮನವೊಲಿಸಿ ಲಸಿಕೆ ಹಾಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳು ಉಂಟಾಗಿದ್ದು ಮನಸ್ಸಿಗೆ ನೋವುಂಟು ಮಾಡಿತ್ತು, ಇದೀಗ ಓಮಿಕ್ರೋನ್ ಬರುತ್ತದೆಂದು ಹೇಳಲಾಗುತ್ತಿದ್ದು ಜನರು ಎಚ್ಚರಿಕೆಯಿಂದ ಇರುವ ಮೂಲಕ ಸರ್ಕಾರದ ಮಾರ್ಗದರ್ಶನಗಳನ್ನು ಪಾಲಿಸುವಂತೆ ಸೂಚನೆ ನೀಡಿದರು.
ವಿದ್ಯಾದಾನ, ಅನ್ನದಾನ, ರಕ್ತದಾನದ ಜೊತೆಗೆ ನೇತ್ರದಾನ ಕೂಡವು ಅಷ್ಟೇ ಮುಖ್ಯ ಎಂದ ರೇಣುಕಾಚಾರ್ಯ ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದಾಗ ಬೇಕೆಂದು ಕೆರೆ ನೀಡಿದರಲ್ಲದೇ ಈ ಮೂಲಕ ಅಂದತ್ವ ನಿವಾರಣೆ ಮಾಡ ಬೇಕೆಂದರು.
ಶಿಕ್ಷಣ ಮನುಷ್ಯ ಜೀವನವನ್ನು ಬದಲಾಯಿಸುತ್ತಿದೇ ಹಾಗಾಗೀ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಕಲಿಯುವ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿರ ಬೇಕೆಂದರು.
ಈ ಸಂದರ್ಭ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ತಾಲೂಕು ಆರೋಗ್ಯಾಧಿಕಾರಿ ಕೆಂಚಪ್ಪ, ತಹಶೀಲ್ದಾರ್ ಬವನಗೌಡ ಕೋಟೂರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೀವ್, ಸಿಂಡಿಕೇಟ್ ಸದಸ್ಯ ಹಳದಪ್ಪ ಸೇರಿದಂತೆ ಶಾಲೆ ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರಿದ್ದರು.