ಹೊನ್ನಾಳಿ : ಸರ್ಕಾರಿ ಕಚೇರಿಯಲ್ಲಿ ಮದ್ಯವರ್ತಿಗಳು ಯಾರೇ ತೊಂದರೆ ಕೊಟ್ಟರೂ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊನ್ನಾಳಿ ನಗರದ ತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಗಳೊಂದಿಗೆ ಸಭೆ ನಡೆಸಿ, ಅಧಿಕಾರಿಗಳ ಬಳಿ ಇಲಾಖಾವಾರು ಮಾಹಿತಿ ಪಡೆದು ಮಾತನಾಡಿದರು.
ಸರ್ಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ನೇರವಾಗಿ ತಲುಪ ಬೇಕು,ಜನರು ನಮಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು ಅದನ್ನು ಆತ್ಮಸಾಕ್ಷಿಯಿಂದ ಮಾಡೋಣ ಎಂದ ರೇಣುಕಾಚಾರ್ಯ ಸರ್ಕಾರಿ ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯವರ್ತಿಗಳಿಗೆ ಅವಕಾಶ ನೀಡ ಬೇಡಿ, ಅಷ್ಟೇ ಅಲ್ಲದೇ ಯಾರೇ ಬಂದು ಅಧಿಕಾರಿಗಳನ್ನು ಬ್ಲಾಕ್ ಮೇಲೆ ಮಾಡಿದರೂ ಅವರ ವಿರುದ್ದ ಪ್ರಕರಣ ದಾಖಲಿಸಿ ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದರು.
ನಾನು ಕೆಲಸ ಮಾಡುತ್ತೇನೆ, ನೀವು ಕೆಲಸ ಮಾಡಿ, ಯಾರೇ ಸಮಸ್ಯೆ ಎಂದು ಕಚೇರಿಗೆ ಬಂದರೆ ಅವರನ್ನು ಗೌರವಿಸಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ ರೇಣುಕಾಚಾರ್ಯ, ಎಲ್ಲಿಯವರೆಗೆ ಕೊಡುವ ಕೈ ಇರುತ್ತದೋ ಅಲ್ಲಿಯವರೆಗೆ ಭ್ರಷ್ಟಾಚಾರ ನಡೆಯುತ್ತದೇ, ಆಗಾಗೀ ಯಾರೂ ಕೂಡ ದುಡ್ಡಿಗಾಗೀ ಕೆಲಸ ಮಾಡ ಬೇಡಿ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ 30 ರಿಂದ 50 ಮನೆಗಳು ಸದ್ಯದರಲ್ಲೇ ಬಿಡುಗಡೆಯಾಗಲಿದ್ದು, ಮನೆಗಳ ಸಮರ್ಪಕವಾಗಿ ಹಂಚಿಕಯಾಗ ಬೇಕು ಅದರಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯ ಬಾರದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹೊನ್ನಾಳಿ ಹೊರವಲಯದ ಮಲ್ಲದೇವನಕಟ್ಟೆ ಬಳಿ 29 ಎಕರೆ ಈಗಾಗಲೇ ಗುರುತಿಸಿದ್ದು ನಿವೇಶನ ರಹಿತರಿಗೆ ಅಲ್ಲಿ ನಿವೇಶನ ನೀಡಲಾಗುವುದು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ ಮಿಷನ್‍ಗೆ ಕೆಲವರು ಅಡ್ಡಿ ಪಡಿಸುತ್ತಿದ್ದು ಅಧಿಕಾರಿಗಳು ಅವರ ಮನವೊಲಿಸುವಂತೆ ಸೂಚನೆ ನೀಡಿದ ರೇಣುಕಾಚಾರ್ಯ, ಜೆಜೆಎಂ ಸ್ಕೀಮ್ ನಲ್ಲಿ ಸಿಸಿ ರಸ್ತೆಗಳಿಗೆ ಹಾನಿಯಾಗುತ್ತಿದ್ದು ಗುತ್ತಿಗೆದಾರರು ಸರಿಯಾಗಿ ಪ್ಯಾಕ್ ವರ್ಕ ಮಾಡ ಬೇಕು, ಒಂದು ವೇಳೆ ಪ್ಯಾಕ್ ವರ್ಕ ಸರಿಯಾಗಿ ಮಾಡದೇ ಇದ್ದರೇ ಅಂತಹ ಗುತ್ತಿಗೆ ದಾರರ ಬಿಲ್ ಬರೆದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ರೇಣುಕಾಚಾರ್ಯ, ಬಿಲ್ ಏನಾದರೂ ಬರೆದರೆ ಅದಕ್ಕೆ ಅಧಿಕಾರಿಗಳಿಗೆ ಹೊಣೆಗಾರರಾಗುತ್ತಾರೆ ಎಂದರು.
ಹಂದಿ ಹಿಡಿಯಲು ಒಂದು ವಾರ ಗಡುವು : ಹೊನ್ನಾಳಿ ನಗರದಾಧ್ಯಂತ ಹಂದಿ ಹಾವಳಿ ಜಾಸ್ತಿಯಾಗಿದ್ದು ಒಂದು ವಾರದ ಒಳಗೆ ಹಂದಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಪುರಸಭೆ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ ರೇಣುಕಾಚಾರ್ಯ, ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು ಅವನ್ನು ಹಿಡಿದು ಸ್ಥಳಾಂತರಿಸುವಂತೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *