ಹೊನ್ನಾಳಿ ; ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡುವುದೇ ನನ್ನ ಗುರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಗೊಲ್ಲರಹಳ್ಳಿಯಿಂದ ನೀರಾವರಿ ಇಲಾಖೆಯವರೆಗೆ 25 ಕೋಟಿ ವೆಚ್ಚದಲ್ಲಿ ವಿದ್ಯುತ್ ಅಲಂಕಾರಿಕ ದೀಪ, ಹೈಮಾಸ್ಕ್ ಲೈಟ್ ಹಾಗೂ ಏಳು ಕೋಟಿ ವೆಚ್ಚದಲ್ಲಿ ನಗರದ ಟಿ.ಬಿ.ವೃತ್ತದಿಂದ ದಿಡಗೂರಿನವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನರವೇರಿಸಿ ಅವರು ಮಾತನಾಡಿದರು.
ಹೊನ್ನಾಳಿ ನಗರದ ಗೊಲ್ಲರಹಳ್ಳಿಯಿಂದ ರಸ್ತೆ ವಿಭಜಕಗಳ ಮೇಲೆ ಅಲಂಕಾರಿಕ ದೀಪ ಹಾಗೂ ಆಯ್ದ ಸ್ಥಳಗಳಲ್ಲಿ ಹೈ ಮಾಸ್ಕ್ ಲೈಟ್ ಅವಳವಡಿಸುವ ಮೂಲಕ ಹೊನ್ನಾಳಿ ನಗರವನ್ನು ಸುಂದರೀಕರಣ ಮಾಡಲಾಗುವುದು ಎಂದರು.
ಅದೇ ರೀತಿ ಟಿ.ಬಿ.ವೃತ್ತದಿಂದ ದಿಡಗೂರು ಡಾಬವರೆಗೆ ಏಳು ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡಿ ರಸ್ತೆ ವಿಭಜಕ ಅವಳವಡಿಸಲಾವುದು ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೆರೆ ತುಂಬಿಸಲು 518 ಕೋಟಿ ವೆಚ್ಚದ ಕಾಮಗಾರಿ ಆರಂಭಗೊಂಡಿದೆ ಎಂದ ರೇಣುಕಾಚಾರ್ಯ, ಅವಳಿ ತಾಲೂಕಿನಲ್ಲಿ ತಲಾ ನಾಲ್ಕು ಕೋಟಿ ವೆಚ್ಚದಲ್ಲಿ ಪ್ರಮಾಸಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳನ್ನು ಅಭಿವೃದ್ದಿ ಮಾಡಲಾಗಿದ್ದು ಸಂಪೂರ್ಣವಾಗಿ ಧೂಳ ಮುಕ್ತ ಮಾಡಲಾಗಿದೆ ಎಂದ ಶಾಸಕರು, ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಕಾಮಗಾರಿಗಳು ಕಳಪೆಯಾದರೆ ಅದನ್ನು ನಾನು ಸಹಿಸುವುದಿಲ್ಲಾ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ನಂತರ ಕಾಮಗಾರಿ ಗುಣಪಟ್ಟ ಕಾಪಾಡಿಕೊಂಡು ಕೆಲಸ ಮಾಡುವಂತೆ ಸೂಚಿಸಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್,ಉಪಾಧ್ಯಕ್ಷೆ ರಂಜಿತಾ ಕೆಎಸ್‍ಡಿಎಲ್ ನಿದೇರ್ಶಕ ಶಿವು ಹುಡೇದ್,ವಡ್ಡಿಚನ್ನಪ್ಪ, ಸದಸ್ಯರಾದ ರಂಗನಾಥ್ ಸೇರಿದಂತೆ ಮುಖಂಡರಾದ ಅರಕೆರೆ ನಾಗರಾಜ್,ಮಾಜಿ ಜಿ ಲ್ಲಾ ಪಂಚಾಯತ ಸದಸ್ಯರಾದ ಕೆ ವಿ ಚನ್ನಪ್ಪ ಬಿಂಬಾ ಮಂಜಣ್ಣ ಕುಬೇರಪ್ಪ, ಮಹೇಶ್ ಹುಡೇದ್, ಇಂಚರ ಮಂಜುನಾಥ್,ಚಂದ್ರು, ಕೋಳಿಸತೀಶ್, ನೆಲವೊನ್ನೆ ಮಂಜುನಾಥ್ ಸೇರಿದಂತೆ ಮತ್ತಿತತರರಿದ್ದರು.