ಚನ್ನಗಿರಿ ಪುರಸಭೆ ವತಿಯಿಂದ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ
ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ್
ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ
ಅಭಿಯಾನ(ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ
ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ ಗೌರವಧನದ ಆಧಾರದ
ಮೇಲೆ ತಾತ್ಕಾಲಿಕ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ್ದು,
ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ನಗರಸಭೆ ವ್ಯಾಪ್ತಿಯಲ್ಲಿ ನೊಂದಾಯಿತ ಅರ್ಹ ಸ್ವ-ಸಹಾಯ
ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ
ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆ
ಮಾಡಲಾಗುತ್ತದೆ.    ಹುದ್ದೆ ಸಂಖ್ಯೆ 02, ಅರ್ಜಿ ಸಲ್ಲಿಸಲು ದ್ವಿತೀಯ
ಪಿ.ಯು.ಸಿ ಉತ್ತೀರ್ಣರಾಗಿರಬೇಕು, ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ
ನೀಡಲಾಗುವುದು. ಮಾಸಿಕ ಗೌರವಧನ ರೂ.8000 ಪ್ರಯಾಣ
ಭತ್ಯೆ ರೂ.2000 ವರೆಗೆ ಪಾವತಿಸಲಾಗುವುದು. ಕಂಪ್ಯೂಟರ್ ಜ್ಣಾನ
ಹೊಂದಿರಬೇಕು (ಪ್ರಮಾಣ ಪತ್ರ ಬೇಕು) ನಗರಸಭೆ ವ್ಯಾಪ್ತಿಯಲ್ಲಿ
ಖಾಯಂ ನಿವಾಸಿಯಾಗಿದ್ದು ಕನಿಷ್ಟ 3 ವರ್ಷ ಸ್ವ-ಸಹಾಯ ಸಂಘದಲ್ಲಿ
ಸದಸ್ಯರಾಗಿರಬೇಕು.  ಯಾವುದೇ ಸರ್ಕಾರಿ /ಅರೆಸರ್ಕಾರಿ/ಎನ್.ಜಿ.ಓ
ಗಳಲ್ಲಿ ಉದ್ಯೋಸ್ಥರಾಗಿರಬಾರದು.  ಉತ್ತಮ ಸಂವಹನ ಕೌಶಲ್ಯದ
ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೊಳ್ಳುವ
ಇಚ್ಚಾಶಕ್ತಿ ಹೊಂದಿರಬೇಕು. ಕಾರ್ಯನಿಮಿತ್ತ ಅಗತ್ಯವಿದ್ದಲ್ಲಿ ಹೊರ

ಸಂಚಾರಕ್ಕೆ ಸಿದ್ದರಿರಬೇಕು. 18 ರಿಂದ 45 ವರ್ಷದೊಳಗಿನ
ವಯೋಮಾನದಾವರಾಗಿಬೇಕು.
     ಆಸಕ್ತ ಮಹಿಳಾ ಆಭ್ಯರ್ಥಿಗಳು ನಗರಸಭೆ ಕಚೇರಿ ಅವಧಿಯಲ್ಲಿ
ಕಚೇರಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಜ.18
ರಂದು ಸಂಜೆ 5:30ರ ರೊಳಗಾಗಿ ದ್ವಿಪ್ರತಿಯಲ್ಲಿ
ಮುಖ್ಯಾಧಿಕಾರಿಗಳು, ಪುರಸಭೆ, ಚನ್ನಗಿರಿ ಅವರಿಗೆ ಸಲ್ಲಿಸಬೇಕು
ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *