ಹೊನ್ನಾಳಿ ಜ:-4 ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮಹಾಮಂಡಲ ವತಿಯಿಂದ ಹಾಗೂ ಶಾಸಕರಾದ ಎಂಪಿ ರೇಣುಕಾಚಾರ್ಯ ರವರ ನೇತೃತ್ವದಲ್ಲಿ ಇಂದು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ನಂತರ ಮಾತನಾಡಿದ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಅಶ್ವಥ್ ನಾರಾಯಣರವರು ಮೇಕೆದಾಟು ವಿಚಾರವಾಗಿ ಈ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದವರು ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಲಿಕ್ಕೆ ಹೊರಟಿದ್ದಾರೆ ಆದರೆ ನೀವು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೀವೇಕೆ ಮೇಕೆದಾಟು ಯೋಜನೆ ಮಾಡಲಿಲ್ಲ ಎಂಬುದಕ್ಕೆ ಪ್ರಶ್ನೆ ಕೇಳಿ ಮಾತನಾಡುತ್ತಾ ನಿಮಗೆ ಗಂಡಸ್ತನ ಇರಲಿಲ್ಲವೆಂಬ ಅಶ್ವಥ್ ನಾರಾಯಣ ರವರು ಹೇಳಿದಾಗ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ರವರು ಗುಂಡಾ ರೀತಿಯಲ್ಲಿ ವರ್ತನೆಯನ್ನುಅಶ್ವತ್ಥ್ ನಾರಾಯಣ್ ರವರ ಮೇಲೆ ಮಾಡಿದ್ದು ನಾವು ಬಿಜೆಪಿಯವರು ಸುಮ್ಮನೆ ಇರುವುದಿಲ್ಲ ಇದನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾ ಪ್ರತಿಭಟನೆಯ ಸಮಯದಲ್ಲಿ ಡಿ ಕೆ ಸುರೇಶ್ ಅವರ ಪ್ರತಿಕೃತಿ ದಹಿಸಿ ಶಾಸಕರ ನೇತೃತ್ವದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರುಗಳು ಸೇರಿದಂತೆ ಸಿಟ್ಟನ್ನು ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದರು.


ನಂತರ ವಿಧಾನಪರಿಷತ್ ಸದಸ್ಯರಾಧ ಡಿಎಸ್ ಅರುಣ್ ರವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಒಂದು ಸಂಸದ ಸ್ಥಾನವನ್ನು ಗೆದ್ದು ಇಂಥ ಗುಂಡಾಗಿರಿ ಮಾಡುತಿದ್ದರೆ ಕಾಂಗ್ರೆಸ್ ಪಕ್ಷ ಅಧೋಗತಿಗೆ ಹೋಗುತ್ತದೆ ಎಂದು ತಿಳಿಸುತ್ತಾ, ಬಿಜೆಪಿಯವರು ಗೂಂಡಾ ವರ್ತನೆಯನ್ನು ಈ ರಾಜ್ಯದಲ್ಲಿ ಮಾಡಲಿಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಉಪಸ್ಥಿತಿಯಲ್ಲಿ ಹೊನ್ನಾಳಿ ತಾಲೂಕು ಶಾಸಕರು ಮತ್ತು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ರವರು ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್ , ಬಿಜೆಪಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಅಧ್ಯಕ್ಷರಾದ ಜೆ ಕೆ ಸುರೇಶ್ ,ಕುಬೇರಪ್ಪ ಕೆ ವಿ ಚನ್ನಪ್ಪ ,ಶಿವು ಹುಡೇದ್ ,ಪುರಸಭೆಯ ಅಧ್ಯಕ್ಷರಾದ ಹೋಬಳಿದಾರ್ ಬಾಬು ,ಪುರಸಭೆ ಸದಸ್ಯರಾದ ರಂಗಪ್ಪ ಸತೀಶ ಕೋಳಿ, ಉಪಾಧ್ಯಕ್ಷರಾದ ರಂಜಿತ ವಡ್ಡಿ ಚನ್ನಪ್ಪ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ಅರಿಕೇರಿ ಮತ್ತು ಮಂಜುನಾಥ್ ಇನ್ನು ಮುಂತಾದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *