ಹೊನ್ನಾಳಿ ಜನವರಿ 5 ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಅಶ್ವಥ್ ನಾರಾಯಣ್ ರವರು ಸಚಿವರು ಎನ್ನದೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಡಿ ಕೆ ಸುರೇಶ್ರವರ ಮೇಲೆ ಗುಂಡ ವರ್ತನೆಯನ್ನು ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ಅಶ್ವತ್ ನಾರಾಯಣ್ ರವರ ವಿರುದ್ಧ ಇಂದು ಹೊನ್ನಾಳಿ ಎನ್ಎಸ್ಯುಐ ಮತ್ತು ಕಾಂಗ್ರೆಸ್ ಯುವ ಘಟಕದ ವತಿಯಿಂದ ಸಚಿವರಾದ ಅಶ್ವತ್ ನಾರಾಯಣರವರ ಪ್ರತಿಕೃತಿಯನ್ನು ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷರಾದ ಎಚ್ ಬಿ ಮಂಜಪ್ಪನವರು ಮಾತನಾಡಿ ಬಿಜೆಪಿ ಅಧಿಕಾರದಲ್ಲಿರುವವರಿಗೆ ಅಧಿಕಾರ ಮಧ ಹೆಚ್ಚಾಗಿದೆ , ಹಾಗಾಗಿ ಕಾಂಗ್ರೆಸ್ ಸಂಸದರಾದ ಡಿ ಕೆ ಸುರೇಶ್ ಅವರ ಮೇಲೆ ಇಂತಹ ಗುಂಡ ವರ್ತನೆಯನ್ನು ಅಶ್ವತ್ ನಾರಾಯಣರವರು ಮಾಡುವುದನ್ನು ನಾವು ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ಎಚ್ ಬಿ ಮಂಜಪ್ಪನವರು ಆಕ್ರೋಶ ವ್ಯಕ್ತಪಡಿಸಿದರು. .
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ರಮೇಶ್ ಅವರು ಮಾತನಾಡುತ್ತ ರಾಜ್ಯದಲ್ಲಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಘಟನೆಯನ್ನು ಮಾಡುವುದರ ಜೊತೆಗೆ 2023ಕ್ಕೆ ಅಧಿಕಾರ ಬಂದೇ ಬರುತ್ತೆ ಎಂದು ಹೇಳುತ್ತಾ ಇಂಥ ಬಿಜೆಪಿಯ ಗುಂಡಾ ವರ್ತನೆಯನ್ನು ನಾವು ಕೂಡ ಸಹಿಸುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಉಪಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮಾಜಿ ಜಿಲ್ಲಾ ಪಂಚಾಯತ್ ಎಂ ರಮೇಶ್ ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಬಣ್ಣಜ್ವಿ, ಎನ್ಎಸ್ಯುಐ ಅಧ್ಯಕ್ಷ ಮನೋಜ್ ,ಬೆಳಗುತ್ತಿಯ ಪ್ರಕಾಶ್, ಗೊಲ್ಲರಹಳ್ಳಿ ಕಿರಣ್ ಇನ್ನು ಮುಂತಾದ ಕಾಂಗ್ರೆಸ್ ಪಕ್ಷದ ಯುವ ಘಟಕದ ಕಾರ್ಯಕರ್ತರು ಮತ್ತು ಎನ್ಎಸ್ ಯು ಐ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದರು.