ಹೊನ್ನಾಳಿ ಜ;- 7 ಹೊನ್ನಾಳಿ ತಾಲೂಕು ಗೊಲ್ಲರಹಳ್ಳಿ ಗ್ರಾಮದ ಲ್ಲಿರವ ಶ್ರೀ ತರಳಬಾಳು ಕಲ್ಯಾಣ ಮಂಟಪಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಕಲ್ಯಾಣಮಂಟಪ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಸಮಾಜದ ವತಿಯಿಂದ ದೇಣಿಗೆ ಎತ್ತಲಿಕ್ಕೆ ಬಿದರಗಡ್ಡೆ ಗ್ರಾಮಕ್ಕೆ ಹೋದ ಸಂದರ್ಭದಲ್ಲಿ ಬಿದರಗಡ್ಡೆ ಗ್ರಾಮದ ಸಮಾಜದ ಮುಖಂಡರು ಮತ್ತು ಗ್ರಾಮದ ಜನತೆ ಸುಮಾರು ಐದು ಲಕ್ಷ ರೂಗಳನ್ನು ಕೊಡಲಿಕ್ಕೆ ಒಪ್ಪಿ ರುವುದರಿಂದ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಊರಿನ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿದರಗಡ್ಡಿ ವಾಸಿಯಾದ ಶ್ರೀಮತಿ ಶ್ರೀ ದೇವಿರಮ್ಮ ಕೋ/೦ ಲೇಟ್ ಬರಮಪ್ಪ ಪಟೇಲ್ ರವರ ಧರ್ಮಪತ್ನಿ ಅವರು ವೈಯಕ್ತಿಕವಾಗಿ ಸುಮಾರು 50 ಸಾವಿರ ರೂಗಳನ್ನು ಬಿದರಗಡ್ಡೆ ಗ್ರಾಮಸ್ಥರ ಸಮ್ಮುಖದಲ್ಲಿ ಇವರ ಪುತ್ರರಾದ ನಾಗರಾಜ್ ರವರು ಮುಖಾಂತರ ಡಿ ಜಿ ಶಾಂತನಗೌಡ್ರುರವರಿಗೆ ಹಸ್ಥಾಂತರಿಸಿದರು ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ವೀರಶೈವ ಸಮಾಜದ ಅಧ್ಯಕ್ಷರುಗಳಾದ ಕರೇಗೌಡ್ರು,ಕೋಡಿಕೊಪ್ಪ ಶಿವಣ್ಣನವರು ಎಚ್ ಎ ಗದ್ದಿಗೇಶಣ್ಣ ,ನೀಲಕಂಟಪ್ಪ ನಾಗರಾಜ್ ಪಟೇಲ್, ಬಿ ಹೆಚ್ ನಾಗರಾಜ್, ಬಿದರಗಡ್ಡೆ ಗ್ರಾಮದ ಸಮಾಜದ ಮುಖಂಡರು ಸಹ ಬಾಗಿಯಾಗಿದ್ದರು.