ಹೊನ್ನಾಳಿ :ಜ;-6 ಹೊನ್ನಾಳಿ ಪಟ್ಟಣದಲ್ಲಿ ಇಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಗೆ ಹಣ ಹಂಚಿ ಚುನಾವಣೆ,ಅಧಿಕಾರ ಪಡೆಯಬೇಕೆಂದು ಎಲ್ಲಿಯೂ ಹೇಳಿಲ್ಲ ಎಂದು ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ನಡೆದ ಘಟನೆ ಸಂಭಂದಿಸಿದಂತೆ ಬಿಜೆಪಿ ಪಕ್ಷದ ವಿರುದ್ದ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೇಸ್ ಪಕ್ಷದ ವತಿಯಿಂದ ಗುರುವಾರ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೋವಿಡ್‍ನಿಂದಾಗಿ ರದ್ದಾದ ಕಾರಣ ಮಾಜಿ ಶಾಸಕರು ಮುಖಂಡರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಮಾಲಾರ್ಪಣೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಮನಗರ ಜಿಲ್ಲೆಯಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತನಾರಾಯಣ ಅವರು ವೇಧಿಕೆಯಲ್ಲಿ ಮುಖ್ಯಮಂತ್ರಿಗಳು ಇತರೆ ಗಣ್ಯರು ಇದ್ದಾರೆ ಎಂಬುದನ್ನು ಲೆಕ್ಕಿಸದೆ ಅತ್ಯಂತ ಪ್ರಚೋಧಾನಾರಿಯಾಗಿ ಕಾಂಗ್ರೆಸ್‍ನವರಿಗೆ ಗಂಡಸ್ತನ ಬಗ್ಗೆ ಕಿಳುಮಟ್ಟದ ಬಾಷಣ ಮಾಡಿದಾಗ ಸಹಜವಾಗಿಯೇ ಆಕ್ರೋಶಗೊಂಡು ಸಂಸದ ಡಿ.ಕೆ.ಸುರೇಶ್ ಮೈಕ್ ಕಸಿದುಕೊಂಡು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ ಬಿಜೆಪಿಯವರು ಇದೇ ವಿಷಯವನ್ನು ತಿರಿಚಿ ಜನತೆಯ ಮುಂದೆ ತಮ್ಮ ತಪ್ಪನ್ನು ಮಾರೆಮಾಚಿಕೊಳ್ಳಲು ಪ್ರತಿಭಟನೆ ಮಡಿರುವುದನ್ನು ಖಂಡಿಸಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಕೋವಿಡ್ ಪರಿಸ್ಥಿಯನ್ನು ದುರಪಯೋಗ ಮಾಡುತ್ತಾ ಪುಕ್ಕಟೆ ಪ್ರಚಾರವನ್ನು ಪಡೆಯುತ್ತಾ ಸರಕಾರದ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು,
ಮುಂಬರುವ ಚುನಾವಣೆಯಲ್ಲಿ ಸೋಲುವ ಬೀತಯಿಂದ ಕೋವಿಡ್‍ನಿಂದ ಮೃತಪಟ್ಟ ಕುಟಂಭದವರನ್ನು ಮನೆಗೆ ಕರೆಸಿ 10 ಸಾವಿರ ಹಣವನ್ನು ನೀಡಿ ಮುಂದಿನ ಚುನಾವಣೆಯಲ್ಲಿ ತಮಗೆ ಓಟು ಕೋಡಿ ಎಂದು ಆಣೆಪ್ರಮಾಣ ಮಾಡಿಸಿಕೋಳುವ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ, ಒಬ್ಬ ಸಾಮಾನ್ಯ ಶಿಕ್ಷಕ ಮಗ ಎಂದು ಹೇಳಿಕೊಳ್ಳುತ್ತಿದ್ದ ಇವರಿಗೆ 10 ಸಾವಿರು ರೂಗಳು ಹಂಚುವಷ್ಟು ಎಲ್ಲಿಂದ ಬಂತು ಎಂದು ಸಾಮಾನ್ಯ ಜನರಿಗೆ ತಿಳಿಸಲಿ ಎಂದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಜವಾಬ್ದಾರಿಯುತ ಸಚಿವರಾದ ಅಶ್ವತನಾರಾಯಣ ಅವರು ಗಂಡಸ್ತನದ ಬಗ್ಗೆ ಪ್ರಚೋಧಕಾರಿಯಾಗಿ ಹೇಳುವ ಮೂಲಕ ತಮ್ಮ ಬಿಜೆಪಿ ಸಂಸ್ಕøತಿಯನ್ನು ಪ್ರಚಾರಪಡಿಸಿದ್ದಾರೆ ಘಟನೆ ಬಗ್ಗೆ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯ ಮುಂದೆ ಘಟನೆಯ ಬಗ್ಗೆ ಕ್ಷೇಮೆ ಕೇಳುವ ಮೂಲಕ ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ, ಸ್ಥಳಿಯ ಶಾಸಕ ರೇಣುಕಾಚಾರ್ಯ ಅವರು ಕೋವಿಡ್ ಮತ್ತು ಪಕೃತಿವಿಕೋಪದಿಂದ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರದ ಹಣ ವಿತರಣೆ ಮಾಡುವಲ್ಲಿ ಪಕ್ಷಬೇದ ತಾರತ್ಯಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವಳಿ ತಾಲೂಕಿ ಮತದಾರಾರು ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಪ್ರಧಾನ ಮಂತ್ರಿಯವರು ಚುನಾವಣೆ ಸಮೀಪಿಸುವ ರಾಜ್ಯಗಳಲ್ಲಿ ಬೇಟಿ ನೀಡಿ ಲಕ್ಷಾಂತರ ಜನರನನ್ನು ಸೇರಿಸಿ ಪ್ರಚಾರ ಬಾಷಣ ಮಾಡುವ ಇವರು ಕೋವಿಡ್ ನಿಯಮವನ್ನು ಪ್ರಧಾನ ಮಂತ್ರಿ ನರೇಂದ್ರಮೋದಿಯವರೇ ಮಾಡುತ್ತಿದ್ದಾರೆ ಇವರಿಗೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ರಾಜ್ಯದ ಜನತೆ ಹಿತ ಕಾಯಲು ಮೇಕದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಇದರಿಂದ ಕಾಂಗ್ರೆಸ್ ಪಕ್ಷ ಜನಮನ್ನಣೆ ಗಳಿಸಸುತ್ತದೆ ಎಂಬ ಬೀತಿಯಿಂದ ಬಿಜೆಪಿ ಸರಕಾರ ಇದನ್ನು ಹತ್ತಿಕ್ಕಲು ಹುನ್ನಾರು ಮಾಡುತ್ತಿದೆ ಎಂದು ಆರೋಪಿಸಿದರು.
.ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಕಾಂಗ್ರೇಸ್ ಮುಖಂಡರು ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಕಾಂಗ್ರೇಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಗದ್ದಿಗೇಶ್,kodikOppa shivanna ,lOkeshappa nayamati ,ಹಿರಿಯ ಮುಖಂಡರಾದ ಬಿ.ಸಿದ್ದಪ್ಪ,ಹೆಚ್.ಬಿ.ಶಿವಯೋಗಿ.ಡಾ.ಈಶ್ವರನಾಯ್ಕ,ಆರ್.ನಾಗಪ್ಪ,ಮಧುಗೌಡ,ಕೆಂಗಲಹಳ್ಳಿ ಮರಳುಸಿದ್ದಪ್ಪ,ತರಗನಹಳ್ಳಿ ರಮೇಶಗೌಡ,ಕುಳಗಟ್ಟೆಶೇಖರಪ್ಪ,ಯುವ ಘಟಕ ಅಧ್ಯಕ್ಷ ಪ್ರಶಾಂತಬಣ್ಣಜ್ಜಿ ಸೇರಿದಂತೆ ಹಲವಾರು ಮುಖಮಡರು ಇದ್ದರು.