ಹೊನ್ನಾಳಿ : ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬುವಂತೆ ದಾನಿಗಳು ನೀಡಿದ ಹಣವನ್ನು ಕಷ್ಟ ಎಂದು ಬಂದವರಿಗೆ ದಾನ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ಸುದ್ದಿಗಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಕೊರೊನಾದಿಂದ ಮೃತ ಪಟ್ಟ ಕುಟುಂಬಕ್ಕೆ ವೈಯಕ್ತಿಕ ಹತ್ತು ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೇ, ಅದರಂತೆ ಪರಿಹಾರ ನೀಡುತ್ತಿದ್ದೇನೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ 289 ಜನರು ಸಾವನ್ನಪ್ಪಿದ್ದು ಅದರಲ್ಲಿ ಸರ್ಕಾರದಿಂದ 67 ಜನರಿಗೆ ತಲಾ ಒಂದು ಲಕ್ಷದ ಚೆಕ್ ಕೊಡಿಸಲಾಗಿದೆ ಎಂದು ರೇಣುಕಾಚಾರ್ಯ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಉಳಿದವರಿಗೂ ಚೆಕ್ ನೀಡಲಾಗುವುದು ಎಂದರು.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ನಿಂದ ಮೃತಪಟ್ಟವರಿಗೆ ತಲಾ ಹತ್ತು ಸಾವಿರ ವೈಯಕ್ತಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೇ ಅದರಂತೆ ಸುರಹೊನ್ನೆ ಗ್ರಾಮದಲ್ಲಿ 28 ಕುಟುಂಬಕ್ಕೆ, ಕತ್ತಿಗಿ ಗ್ರಾಮದಲ್ಲಿ 7 ಕುಟುಂಬಕ್ಕೆ, ಸವಳಂಗ ಗ್ರಾಮದಲ್ಲಿ ಒಂದು ಕುಟುಂಬಕ್ಕೆ, ಮಾದೇನಹಳ್ಳಿ ಗ್ರಾಮದಲ್ಲಿ ನಾಲ್ಕು ಕುಟುಂಬಕ್ಕೆ ಹಾಗೂ ಕುಟುಂಬ ಗ್ರಾಮದಲ್ಲಿ ಆರು ಕುಟುಂಬಕ್ಕೆ ಸೇರಿ 46 ಜನರಿಗೆ ತಲಾ ಹತ್ತು ಸಾವಿರ ವೈಯಕ್ತಿಕ ಪರಿಹಾರ ನೀಡಿದ್ದೇ ಎಂದ ರೇಣುಕಾಚಾರ್ಯ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 49 ಜನರಿಗೆ ತಲಾ ಒಂದು ಲಕ್ಷದ ಚೆಕ್ ನೀಡಿದ್ದು ನಾನು ಕೂಡ ವೈಯಕ್ತಿಕ ಹತ್ತು ಸಾವಿರ ಪರಿಹಾರ ನೀಡಿದ್ದು ಇದುವರೆಗೂ 95 ಜನರಿಗೆ ವೈಯಕ್ತಿವಾಗಿ ಹತ್ತು ಸಾವಿರ ಪರಿಹಾರ ನೀಡಿದ್ದೇನೆ ಎಂದರು.
ಕೋವಿಡ್ ಮೊದಲನೇ ಅಲೆಯಲ್ಲಿ 59 ಜನರು ಸಾವನ್ನಪ್ಪಿದ್ದು ಅವರ ಕುಟುಂಬಕ್ಕೂ ತಲಾ ಹತ್ತು ಸಾವಿರ ನೀಡುತ್ತೇನೆ ಎಂದ ರೇಣುಕಾಚಾರ್ಯ, ನಾನು ಕೋವಿಡ್ ಸಂದರ್ಭದಲ್ಲಿ ಅವಳಿ ತಾಲೂಕಿನ ಜನರಿಗಾಗೀ ಜೀವವನ್ನೇ ಮುಡುಪಾಗಿಟ್ಟು ಕೆಲಸ ಮಾಡಿದ್ದೇನೆ, ಆದರೇ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡದೇ ಮನೆಯಲ್ಲಿ ಮಲಗಿದ್ದವರು ಈಗ ಚುನಾವಣೆ ಬಂತೆಂದು ಮನೆಯಿಂದ ಹೊರ ಬಂದು ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ಆರೋಪ ಮಾಡುತ್ತಿದ್ದು ಅದನ್ನು ಸಾಬೀತು ಪಡಿಸಲಿ ಎಂದರು.
ನಾನು ಬಹಿರಂಗವಾಗಿ ಮತಯಾಚನೆ ಮಾಡಿದ್ದೇನೆ, ಕೆಲಸ ಮಾಡಿದ್ದೇನೆ ಮತ ಹಾಕಿ ಆರ್ಶಿವಾದ ಮಾಡಿ ಎಂದು ಕೇಳಿದ್ದೇನೆ ಇದರಲ್ಲಿ ತಪ್ಪೇನಿದೇ ಎಂದು ಪ್ರಶ್ನೇ ಮಾಡಿದ ರೇಣುಕಾಚಾರ್ಯ ವಾಮಮಾರ್ಗದಲ್ಲಿ ಯಾರ ಬಳಿಯೂ ಮತಯಾಚನೆ ಮಾಡಿಲ್ಲಾ ಎಂದರು.
ನಾನು ಶಾಸಕನಾಗುವ ಪೂರ್ವದಿಂದಲೂ ಶಿವಮೊಗ್ಗದಲ್ಲಿ ವಿದ್ಯಾಸಂಸ್ಥೆ ಮಾಡಿದ್ದು ನಾನು ಸ್ವತಂತ್ರವಾಗಿ ದುಡಿದ ಕಾಲೇಜು ಕಟ್ಟಿದ್ದೇನೆ, ನನಗೆ ಹಣ ಮಾಡ ಬೇಕೆಂದೆನ್ನಿಲ್ಲಾ ಎಂದ ರೇಣುಕಾಚಾರ್ಯ ಯಾರೇ ನನ್ನ ವಿರುದ್ದ ಏನೇ ಟೀಕೆ ಮಾಡಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲಾ, ಅದನ್ನು ಆಶೀರ್ವಾದ ಎಂದು ತಿಳಿದು ಕೆಲಸ ಮಾಡುತ್ತೇನೆ.
ಜೀವನಹಳ್ಳಿ ಗ್ರಾಮದಲ್ಲಿ ಬ್ಲಾಕ್ ಫಂಗಸ್‍ಗೆ ತುತ್ತಾಗಿ ಗುಣಮುಖರಾಗಿ ಬಂದವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದ ರೇಣುಕಾಚಾರ್ಯ ವೈಯಕ್ತಿಕ ಇಪ್ಪತ್ತು ಸಾವಿರ ಧನ ಸಹಾಯ ಮಾಡಿದ್ದು ಅವರ ಚಿಕಿತ್ಸೆಗೆ ಇನ್ನು ಹಣ ಬೇಕಾಗಿದ್ದು ಅದನ್ನು ತಾವೇ ಬರಿಸುವುದಾಗಿ ಹೇಳಿದರು.
ಅದೇ ರೀತಿ ಅವಳಿ ತಾಲೂಕಿನಲ್ಲಿ ನಾಲ್ಕು ಜನರಿಗೆ ಬ್ಲಾಕ್ ಫಂಗಸ್ ತಗುಲಿದ್ದು ಅವರು ಗುಣಮುಖರಾಗಿದ್ದು ಅವರಿಗೂ ವೈಯಕ್ತಿಕ ಪರಿಹಾರ ನೀಡಿದ್ದೇನು ಎಂದ ರೇಣುಕಾಚಾರ್ಯ ನನ್ನ ವಿರುದ್ದ ಯಾರು ಏನೇ ಟೀಕೆ ಮಾಡಿದರೂ ಅದಕ್ಕೆ ನಾನು ಬಗ್ಗುವುದಿಲ್ಲಾ, ಜಗ್ಗುವುದಿಲ್ಲಾ, ಅದನ್ನೇ ಆಶೀರ್ವಾದ ಎಂದು ತಿಳಿದು ಮುಂದೆ ಸಾಗುತ್ತೇನೆ ಎಂದರು.
ಈ ಸಂದರ್ಭ ಜೀನಹಳ್ಳಿ ಗ್ರಾಮಸ್ಥರಾದ ರವಿಕುಮಾರ್, ಸತೀಶ್, ಶೇಖರಪ್ಪ, ಗೋವಿಂದರಾಜು, ಪಂಚಾಕ್ಷರಪ್ಪ, ಬೆಣ್ಣೆ ನಾಗರಾಜ್, ಪ್ರದೀಪ್ ಸೇರಿದಂತೆ ಗ್ರಾಮಸ್ಥರಿದ್ದರು..

Leave a Reply

Your email address will not be published. Required fields are marked *