ಹೊನ್ನಾಳಿ : ಕ್ರೀಡೆಯಲ್ಲಿ ಸೋಲು ಗೆಲುವು ಮಾಮೂಲು, ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ತಾಲೂಕಿನ ಘಂಟ್ಯಾಪುರ ಗ್ರಾಮದಲ್ಲಿ ಆಯೋಜಿಸಿ ಜಿಲ್ಲಾಮಟ್ಟದ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಗೆದ್ದೆ ಎಂದು ಬೀಗದೇ, ಸೋತೇ ಎಂದು ಕುಗ್ಗದ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಬಾವವನ್ನು ಯುವಕರು ಬೆಳೆಸಿಕೊಳ್ಳ ಬೇಕು. ಆಗ ಮಾತ್ರ ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯ ಎಂದರು.
ಯುವಕರು ದುಶ್ಚಟಗಳಿಗೆ ದಾಸರಾಗುವ ಬದಲು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೋಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕವಿ ಮಾತು ಹೇಳಿದ ರೇಣುಕಾಚಾರ್ಯ ಯುವಕರು ನಮ್ಮ ದೇಶದ ಸಂಪತ್ತು, ಕ್ರೀಡೆಯ ಜೊತೆಗೆ ಯುವಕರು ವಿದ್ಯಾಬ್ಯಾಸಕ್ಕೂ ಹೆಚ್ಚಿನ ಒತ್ತು ನೀಡುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಯುವಂತೆ ಯುವಕರಿಗೆ ತಿಳಿ ಮಾತು ಹೇಳಿದರು.
ಕೊವೀಡ್ ಬಗ್ಗೆ ಜಾಗೃತಿ : ದಿನೇ ದಿನೇ ಕೋವಿಡ್ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು ಯುವಕರು ಕೊರೊನಾ ಜಾಗೃತರಾಗಿರುವಂತೆ ಸೂಚಿಸಿದ ರೇಣುಕಾಚಾರ್ಯ ಸರ್ಕಾರದ ನಿಯಮಗಳನ್ನು ಯುವಕರು ಕಟ್ಟು ನಿಟ್ಟಾಗಿ ಪಾಲಿಸುವಂತೆ ಹೇಳಿದರು. ಯುವಕರು ತಮ್ಮ ತಮ್ಮ ಹಳ್ಳಿಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವ ಮೂಲಕ ಕೊರೊನಾ ಹೆಮ್ಮಾರಿ ಗ್ರಾಮವನ್ನು ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಯುವಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭ ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರ ಸುರೇಂದ್ರ ನಾಯ್ಕ, ಗ್ರಾಮದ ಮುಖಡರಾದ ಪೀರ್ಯಾನಾಯ್ಕ, ಸೇವ್ಯಾನಾಯ್ಕ ಸೇರಿದಂತೆ ಯುವಕರಿದ್ದರು.
ಪೋಟೊ ಕ್ಯಾಷನ್ : ತಾಲೂಕಿನ ಘಂಟ್ಯಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಮಟ್ಟದ ಕ್ರೀಡಾ ಕೂಟಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು.