ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಗಳು ಹಾಗೂ ಕೆಲವು ಬಿಜೆಪಿ ನಾಯಕರು ಗೂಂಡಾಗಳಂತೆ ವರ್ತಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ
ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯನ್ನು ತಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಹಾಗೂ ಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಏಜೆಂಟ್ ಆಗಿ ಸೇರ್ಪಡೆಯಾಗಿರುವುದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಇವರ ಹೇಳಿಕೆಯನ್ನು ಇವರುಗಳ ಹೊಣೆಗೇಡಿತನವನ್ನು ಖಂಡಿಸಿ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು,
ಶಿಕ್ಷಣ ಸಚಿವರಾಗಿ ಮುಖ್ಯಮಂತ್ರಿಗಳ ಮುಂದೆ ದರ್ಪದ ಮಾತನಾಡಿ ಹಾಗೂ ಅಸಂಸದೀಯ ಪದ ಬಳಸಿದ ಸಚಿವ ಅಶ್ವತ್ಥನಾರಾಯಣ ನನ್ನೇ ಬಿಂಬಿಸುತ್ತಿರುವದು ಬಿಜೆಪಿಯ ನಾಯಕರು ಹಾಗೂ ಸಚಿವರ ಹೀನಾಯ ಮನಸ್ಥಿತಿಯನ್ನು ಎತ್ತಿ ತೋರುತ್ತದೆ ಬಿಜೆಪಿ ಸಂಸ್ಕೃತಿಹೀನ ಪಕ್ಷ ಎಂಬುದು ಇಡೀ ದೇಶಕ್ಕೆ ತಿಳಿದಿದೆ ಇಂತಹ ವ್ಯಕ್ತಿಗಳು ಇಂದು ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದಾರೆ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಬಿಜೆಪಿ ನಾಯಕರ ಹೇಳಿಕೆಗಳು ಒಂದೊಂದಾಗಿ ಹೊರ ಹೊಮ್ಮುತ್ತಿದೆ,
ಜೆಡಿಎಸ್ ನಾಯಕ ಕುಮಾರಸ್ವಾಮಿ ದೇಶ ಕಂಡ ಅತ್ಯಂತ ಸಮಯಸಾಧಕ ರಾಜಕಾರಣಿ ಸಮಯಕ್ಕೆ ತಕ್ಕಂತೆ ಸೂಟ್ ಕೇಸ್ ಹಿಡಿಯುವುದರಲ್ಲಿ ನಿಸ್ಸೀಮ ಇಂತಹ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಸಂಸದರಾದ ಡಿ ಕೆ ಸುರೇಶ್ ರವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಕುಮಾರಸ್ವಾಮಿ ಒಳ ರಾಜಕಾರಣದ ನಿಸ್ಸೀಮ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ ಇಂತಹ ಕುಮಾರಸ್ವಾಮಿ ಕೇವಲ ರಾಮನಗರ ಜಿಲ್ಲೆಗೆ ಸೀಮಿತವಾಗುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಮೊದಲು,
ಕಂದಾಯ ಸಚಿವ ಆರ್ ಅಶೋಕ್ ಅವರ ಮೇಲಿರುವ ಆಪಾದನೆ ಎಲ್ಲರಿಗೂ ತಿಳಿದ ವಿಷಯ ಆರ್ ಅಶೋಕ್ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಪ್ರಸ್ತಾಪಿಸಿದರೆ ಅವರ ಹೆಸರು ಹೇಳುವ ಅರ್ಹತೆ ಯೋಗ್ಯತೆ ಆಶೋಕ್ ಗಿಲ್ಲ ರಾಜ್ಯದ ಭೂಗಳ್ಳ ಎಂಬುವರ ಖ್ಯಾತಿ ಪಡೆದಿದ್ದಾರೆ ಇವರು ಸಭ್ಯಸ್ಥರಂತೆ ಹೇಳಿಕೆ ನೀಡುತ್ತಾರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ನಲವತ್ತು%ಸರ್ಕಾರ ಎಂದು ದಾಖಲೆ ಬರೆದಿದೆ ಇವರ ಭ್ರಷ್ಟಾಚಾರಗಳನ್ನು ಮರೆಮಾಚಲು ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಸುವ ಪಾದಯಾತ್ರೆಯನ್ನು ತಡೆಯುವ ಕುತಂತ್ರವನ್ನು ನಡೆಸುತ್ತಿದ್ದಾರೆ
ಈ ಎಲ್ಲ ಕುತಂತ್ರ ರಾಜಕೀಯ ತಂತ್ರವನ್ನು ಮೀರಿ ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಹಿತಕ್ಕಾಗಿ ಈ ಪಾದಯಾತ್ರೆ ನಡೆಸಿಯೇ ತೀರುತ್ತದೆ ಎಂದು ಈಗಾಗಲೇ ಮಾನ್ಯ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ
ಬಿಜೆಪಿ ನಾಯಕರ ಗೂಂಡಾ ವರ್ತನೆ ಹಾಗೂ ಕುಮಾರಸ್ವಾಮಿಯ ಬಾಲಿಶತನದ ಹೇಳಿಕೆ ಖಂಡಿಸಿ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ದನ್ ಎಂ ಆನಂದ್ ಪ್ರಕಾಶ್ ಪುಟ್ಟರಾಜು ವೆಂಕಟೇಶ್ ಉಮೇಶ್ ಮರಿಸ್ವಾಮಿ ಬಾಬು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.