ಹೊನ್ನಾಳಿ : ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕರ ಆಪೇಕ್ಷೆಯ ಮೇರೆಗೆ ಪಾಲ್ಗೊಂಡಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ನಾನು ರಾಜ್ಯದ ಜನರ,ಮುಖ್ಯಮಂತ್ರಿಗಳ ಕ್ಷಮೆ ಯಾಚಿಸುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ತಾಲೂಕಿನ ಬಲಮೂರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಚಾಲನೆ ನೀಡಲು ಮನಸ್ಸಿಲ್ಲದಿದ್ದರೂ ಯುವಕರ ಆಪೇಕ್ಷೆ ಮೇರೆಗೆ ವಲ್ಲದ ಮನಸ್ಸಿನಿಂದಲೇ ಹೋಗಿ ಚಾಲನೆ ನೀಡ ಬೇಕಾಯಿತು ಎಂದರು.
ಕಳೆದ 15 ದಿನಗಳ ಹಿಂದೆಯೇ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನ ಆಯೋಜನೆ ಮಾಡಿದ್ದರು. ಆದರೇ ಕೋವಿಡ್‍ನಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಯುವಕರಲ್ಲಿ ನಾನು ಮನವಿ ಮಾಡಿದ್ದೇ ಎಂದರು.ಆದರೇ ಯುವಕರು ನನ್ನ ಮೇಲೆ ಒತ್ತಡ ಹೇರಿದ್ದರಿಂದ, ಯುವಕರ ಒತ್ತಡಕ್ಕೆ ಮಣಿಯ ಬೇಕಾಯಿತು ಎಂದರು.
ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಮಾಧ್ಯಮದವರು, ಸಾರ್ವಜನಿಕರು, ಬಿಜೆಪಿ ಪಕ್ಷ ಮೆಚ್ಚುವಂತೆ ನಾನು ಕೆಲಸ ಮಾಡಿದ್ದೇ, ಆದರೇ ಇದೀಗ ಬಲಮುರಿ ಗ್ರಾಮದಲ್ಲಿ ನಡೆದ ಹೋರಿಹಬ್ಬದಲ್ಲಿ ಪಾಲ್ಗೊಂಡಿದ್ದು ನನಗೆ ಮುಜುಗರ ಉಂಟುಮಾಡಿದೆ ಎಂದರು.


ನಾನು ಕೂಡ ಸರ್ಕಾರ ಭಾಗವಾಗಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಿ ಎಂದು ಹೇಳ ಬೇಕಾದವನು ಇದೀಗ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು, ನನ್ನಿಂದ ತಪ್ಪಾಗಿದೆ ಎಂದ ರೇಣುಕಾಚಾರ್ಯ, ಕಾಂಗ್ರೇಸ್ ಪಾದಯಾತ್ರೆಯ ಬಗ್ಗೆ ನಾನೇ ಟೀಕೆ ಮಾಡಿ, ಇದೀಗ ನಾನೇ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದ್ದು, ನನಗೆ ನೈತಿಕತೆ ಇಲ್ಲದಂತಾಗಿದೆ ಎಂದರು.
ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ನಾನು ಮಾಡಿದ ಕೆಲಸವನ್ನು ಎಲ್ಲರೂ ಕೊಂಡಾಡಿದ್ದರು, ಆದರೇ ಇದೀಗ ಬಲಮುರಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬ, ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತಾಗಿದೆ ಎಂದರು.
ಹೊನ್ನಾಳಿ ತಾಲೂಕಿನ ವಿವಿಧ ಕಡೆ ಕುರಿ ಕಾಳಗವನ್ನು ಹಮ್ಮಿಕೊಂಡಿದ್ದು ಕಮಿಟಿಯವರೊಂದಿಗೆ ಮಾತನಾಡಿ, ಅವನ್ನು ಮುಂದೂಡುವಂತೆ ಮನವಿ ಮಾಡಿದ್ದೇನೆ ಎಂದರು.

Leave a Reply

Your email address will not be published. Required fields are marked *