ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ದಾವಣಗೆರೆ
ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2021-22ನೇ ಸಾಲಿಗೆ
ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸಮುದಾಯ
ಆರೋಗ್ಯ ಅಧಿಕಾರಿಗಳ (ಸಿ.ಹೆಚ್.ಓ) 16 ಹುದ್ದೆಗಳಿಗೆ ಅರ್ಜಿಗಳನ್ನು
ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್/
ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ.ಎನ್.ಸಿ/ಐ.ಎನ್.ಸಿ
ನಿಂದ ನೋಂದಣಿ ಹೊಂದಿರಬೇಕು. ಕನ್ನಡ ಹಾಗೂ ಇಂಗ್ಲೀಷ್
ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ರಾಜ್ಯದಲ್ಲಿ 10 ವರ್ಷ ವಾಸದ
ದೃಢೀಕರಣ ಹೊಂದಿರಬೇಕು.
     ಮಾಸಿಕ ಸಂಭಾವನೆ ಪ್ರತಿ ತಿಂಗಳಿಗೆ ರೂ. 22,000 ಜೊತೆಗೆ
ಹೆಚ್ಚುವರಿಯಾಗಿ ಪರಫಾರಮೆನ್ಸ್ ಬೇಸ್ ಇನ್ಸೆಂಟಿವ್ ರೂ. 8000/-ವರೆಗೆ
(ಸೇವಾ ಆಧಾರ ಪರಿಗಣಿಸಿ) ನೀಡಲಾಗುವುದು.
     ಗರಿಷ್ಠ ವಯೋಮಿತಿ, ಸಾಮಾನ್ಯ ಅಭ್ಯರ್ಥಿ-35 ವರ್ಷ. ಎಸ್‍ಸಿ/ಎಸ್‍ಟಿ/
ಪ್ರ.ವರ್ಗ 1/ ಮಾಜಿ ಸೈನಿಕರಿಗೆ 40 ವರ್ಷ, 2ಎ/2ಬಿ/3ಎ/3ಬಿ/ ಹಾಗೂ ಇತರೆ
ಹಿಂದುಳಿದ ವರ್ಗ(ರಾಜ್ಯ) 38 ವರ್ಷ ನಿಗದಿಪಡಿಸಲಾಗಿದೆ.
     ಅರ್ಜಿಯನ್ನು ಆನ್‍ಲೈನ್ ಮುಖಾಂತರ ಮಾತ್ರ ಸಂಬಂಧಪಟ್ಟ
ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಹಾಗೂ ಪರೀಕ್ಷೆಯನ್ನು
ಆನ್‍ಲೈನ್ ಮುಖಾಂತರ ನಡೆಸಲಾಗುವುದು. ಅರ್ಜಿ ಸಲ್ಲಿಸಲು ಜ. 23
ಕೊನೆಯ ದಿನವಾಗಿದ್ದು, ಜ. 29 ರಂದು ಲಿಖಿತ ಪರೀಕ್ಷೆ ನಡೆಸಿ,
ಫಲಿತಾಂಶ ಪ್ರಕಟಿಸಲಾಗುವುದು. ಫೆ. 01 ರಂದು
ಮೂಲದಾಖಲೆಗಳನ್ನು ಪರಿಶೀಲಿಸಲಾಗುವುದು.    

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್
hಣಣಠಿ://ಞಚಿಡಿuಟಿಚಿಜu.ಞಚಿಡಿಟಿಚಿಣಚಿಞಚಿ.gov.iಟಿ/hಜಿತಿ/ಠಿಚಿges/home.ಚಿsಠಿx  ಅಥವಾ ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಎಸ್‍ಎಸ್
ಆಸ್ಪತ್ರೆ ಹಿಂಭಾಗ , ಎನ್‍ಸಿಸಿ ಕ್ಯಾಂಪ್ ಹತ್ತಿರ, ಶ್ರೀ ರಾಮನಗರ ರಸ್ತೆ
ದಾವಣಗೆರೆ 577005 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *