ಹೊನ್ನಾಳಿ;- ಜ/ 11 ಪಟ್ಟಣದಲ್ಲಿರುವ ಹಿರೇಕಲ್ಮಠ ದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾಕ್ಟರ್ ಚಂದ್ರಶೇಖರ್ ಪಾಟೀಲ್ ರವರು ದಿನಾಂಕ 10/ 1./2020ನೇಯ ಸೋಮವಾರದಂದು ಬೆಳಗ್ಗೆ ನಿಧನರಾಗಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊನ್ನಾಳಿ ಹಿರೇಕಲ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಇವರ ದಿವ್ಯಸಾನಿಧ್ಯದಲ್ಲಿ ಹಾಗೂ ಹೊನ್ನಾಳಿ ಕಾ ಸ ಪ ಅಧ್ಯಕ್ಷರಾದ ಮುರುಗಪ್ಪಗೌಡ ಜಿ ಎಂ ಅಧ್ಯಕ್ಷತೆಯಲ್ಲಿ ಡಾ// ಚಂಪಾರವರಿಗೆ
ಹೊನ್ನಾಳಿ ಸಾಹಿತ್ಯ ಪರಿಷತ್ತಿನ ವತಿಯಿಂದ ಎರಡು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡುವುದರ ಮೂಲಕ ಅವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .
ಹಿರಿಯ ಸಾಹಿತಿ ಸಂಗನಾಳಮಠ ಹೊನ್ನಾಳಿ ರವರು ಮಾತನಾಡಿ ಚಂಪಾರವರು ಕವಿಯಷ್ಟೇ ಅಲ್ಲ ಕನ್ನಡ ನಾಡು ನುಡಿ, ಜಲ, ಗಡಿ ,ಸಾಹಿತ್ಯ-,ಸಂಸ್ಕೃತಿ ಕನ್ನಡದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡು ಹೋರಾಟವನ್ನು ಮಾಡಿಕೊಂಡು 1963ರಲ್ಲಿ ಸಂಕ್ರಮಣ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಸ್ಥಾಪಿಸಿ, ಸುಮಾರು 54 ವರ್ಷಗಳ ಕಾಲ ನಡೆಸಿ ಆ ಪತ್ರಿಕೆಯ ಮೂಲಕ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಕನ್ನಡಪರ ಹೋರಾಟಗಳನ್ನು ಮಾಡಿ, ಕನ್ನಡಕ್ಕೆ ಅನ್ಯಾಯ ಆದಾಗ ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಬಡಿದೆಬ್ಬಿಸಿ ,ನೇರ ನುಡಿ ,ನಿಷ್ಟುರವಾದಿ ಆಗಿದ್ದ ಚಂಪಾರವರು ಅಗಲಿಕೆಯಿಂದ ನಮಗೆ ತುಂಬಾ ನೋವಾಗಿದೆ ಎಂದು ಅವರ ಬಗ್ಗೆ ಸವಿಸ್ತಾರವಾಗಿ ನಡೆದು ಬಂದ ದಾರಿಯನ್ನು ನೆನಪು ಮಾಡಿಕೊಳ್ಳುವುದರ ಮೂಲಕ ನುಡಿ ನಮನವನ್ನು ಸಂಗನಾಳಮಠರವರು ತಿಳಿಸಿದರು.
ಹೊನ್ನಾಳಿ ಕಸಾಪ ಅಧ್ಯಕ್ಷರಾದ ಮುರಿಗೆಪ್ಪಗೌಡ ರವರು ಮಾತನಾಡಿ ಚಂಪಾರವರು ಕನ್ನಡ, ಕನ್ನಡ ,ಎನ್ನಿರಿ, ನಮ್ಮ ಸಂಗಡ ಬನ್ನಿರಿ, ಎಂದು ಕನ್ನಡ ಪರ ಹೋರಾಟವನ್ನು ಮಾಡಲಿಕ್ಕೆ ಜನರನ್ನು ಎಚ್ಚೆತ್ತುಕೊಳ್ಳುವಂತೆ ಕನ್ನಡ ಹೋರಾಟಗಾರರನ್ನು ಚುರುಕು ಮುಟ್ಟಿಸುವಂಥ ಕೆಲಸವನ್ನು ಸಹ ಮಾಡುತ್ತ ನೇರನುಡಿ ಸಾಯಿತಿ, ಪ್ರೀತಿ ಮಾಡಿ ದ್ವೇಷವನ್ನು ಮತ್ತು ದೇಶವನ್ನು ಗೆಲ್ಲಬಹುದು, ಅದರಂತೆ ಬಂಡಾಯ ಸಾಹಿತಿಯಾಗಿ ಕನ್ನಡ ಸಾಹಿತ್ಯ ಬೆಳೆಯ ಬೇಕು,ಮತ್ತು ಕನ್ನಡ ಜಾಗೃತಿ ಹೋರಾಟ ,ಗೋಕಾಕ್ ಚಳುವಳಿ ಪ್ರಾರಂಭಿಸಸುವುದರ ಮೂಲಕ, ಮಾತೃ ಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು, ಶಾಸ್ತ್ರೀಯವಾಗಿ ಬರಬೇಕು,ಹಾಗೂ ಮಹಾಜನ ವರದಿಯನ್ನು ಜಾರಿಗೆ ತರುವ ಕೆಲಸ ಮಾಡಿದರು. ಆದಿಕವಿ ಪಂಪ, ಅಂತ್ಯ ಕವಿ ಚಂಪಾ ಎನ್ನುವ ಮಾತನ್ನು ಸಾಹಿತ್ಯಲೋಕದಲ್ಲಿ ಕನ್ನಡಪರ ಹೋರಾಟಗಾರರು ಮನದಲ್ಲಿ ಅಚ್ಚಳಿಯದೆ ಚಂಪಾರವರು ಉಳಿದರು. .ಅವರ ಅಗಲಿಕೆಯಿಂದ ತುಂಬಾ ನೋವಾಗಿದೆ, ದೇವರು ಅವರ ಕುಟುಂಬಕ್ಕೆ ಮತ್ತು ಮಕ್ಕಳಿಗೆ ಸಾಹಿತ್ಯ ಲೋಕದ ಶಿಷ್ಯಂದಿರುಗಳಿಗೆ ದುಃಖವನ್ನು ಸಹಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಡಾಕ್ಟರ್ ಚೆನ್ನಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ ಚಂದ್ರಶೇಖರ್ ಪಾಟೀಲ್ ಅವರ ನಿಧನದಿಂದ ಉತ್ತರ ಕರ್ನಾಟಕ ಭಾಗ ಅದು ಹುಬ್ಬಳ್ಳಿ-ಧಾರವಾಡ ಭಾಗದ ಜನರಿಗೆ ಚಂಪಾ ಎಂದರೆ ಹೆಸರುವಾಸಿಯಾಗಿದ್ದರು, ಅವರನ್ನು ಕಳೆದುಕೊಂಡಿರುವುದು ಒಬ್ಬ ಕನ್ನಡವನ್ನು ಕಟ್ಟುವ ದೊಡ್ಡ ಶಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಇಂತಹ ಚಂಪಾ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶೀರ್ವದಿಸಿದರು.
ಉಪಸ್ಥಿತಿಯಲ್ಲಿ ಡಾಕ್ಟರ್ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಹೊನ್ನಾಳಿ ಕಾಸಪ ಅಧ್ಯಕ್ಷರಾದ ಜಿಎಂ ಮುರುಗಪ್ಪ ಗೌಡ ,ಹಿರಿಯ ಸಾಹಿತಿ ಸಂಗನಾಳಮಠ ,ಎಂಎಸ್ ರೇವಣಪ್ಪ, ರುದ್ರಪ್ಪ ,ಪ್ರೇಮ್ ಕುಮಾರ್ ಬಂಡಿಗಡಿ, ಕಡದಕಟ್ಟೆ ತಿಮ್ಮಣ್ಣ ,ಜಯಪ್ಪ ಹತ್ತೂರು , ಬಸಣ್ಣ ಚನ್ನೇಶ ,ಗಾಯತ್ರಿ ,ಶಾರದಾ ಕನಘಟಗಿ, ದೇವೇಂದ್ರಯ್ಯ ಸಾಸ್ವೆಹಳ್ಳಿ ,ಇನ್ನು ಮುಂತಾದ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಗಳು ಸಹ ಭಾಗಿಯಾಗಿದ್ದರು.