ಅಸ್ತಂಗತರಾದ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ ದಾವಣಗೆರೆ ಜಿಲ್ಲಾ ಕಸಾಪ ವತಿಯಿಂದ ತೀವ್ರ ಶೋಕ…..
ನಾಡಿನ ಖ್ಯಾತ ಸಾಹಿತಿಗಳು, ಶ್ರೇಷ್ಠ ವಿಮರ್ಶಕರೂ ,ಬಂಡಾಯ ಸಾಹಿತ್ಯದ ನೇತಾರರು ವೈಚಾರಿಕ ನೆಲೆಗಟ್ಟಿನಲ್ಲಿ ಸಾಹಿತ್ಯದ ದೃಷ್ಟಿಕೋನವನ್ನು ಬಿತ್ತು ಅಂತಹ ಮಹಾನ್ ಶಕ್ತಿ ಶಾಲಿಯು, 2017ರಲ್ಲಿ ಮೈಸೂರಿನಲ್ಲಿ ಜರುಗಿದ 83ನೇ ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಆಗಿದ್ದ ನಮ್ಮೆಲ್ಲರ ನೆಚ್ಚಿನ ಪ್ರೊ. ಚಂದ್ರಶೇಖರ ಪಾಟೀಲ( ಚಂಪಾ ) ರವರು ನಿಧನರಾಗಿರುವ ಸುದ್ದಿ ಕೇಳಿ ಕನ್ನಡ ಸಾಹಿತ್ಯಲೋಕವೇ ದಿಗ್ಬ್ರಮೆ ಗೊಂಡಿದೆ ಎಂದು ತಿಳಿಸಿ,
ಮಹಾನ್ ಸಾಹಿತ್ಯ ಚಿಂತಕನನ್ನು ಕಳೆದುಕೊಂಡು ಕನ್ನಡನಾಡು ಬಡವಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ, ಬಿ. ವಾಮದೇವಪ್ಪ ನವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕದ ಪರವಾಗಿ ಎಲ್ಲಾ ಕನ್ನಡದ ಮನಸ್ಸುಗಳ ಪರವಾಗಿ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ತೀವ್ರ ಸಂತಾಪ ಸೂಚಿಸಿ,
ಕನ್ನಡ ತಾಯಿ ಶ್ರೀ ಭುವನೇಶ್ವರಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತಾ, ಎಲ್ಲಾ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಲೋಕದ ಪರವಾಗಿ ದಾವಣಗೆರೆ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ , ಅಗಲಿದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು, ಬಿ. ವಾಮದೇವಪ್ಪ, ಅವರು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *