ಹೊನ್ನಾಳಿ : ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವಾ ಕಾಂಕ್ಷಿ ಯೋಜನೆ ಜಲಜೀವನ್ ಮೀಷನ್ ಅನ್ನು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಜಾರಿಗೊಳಿಸುವ ಮೂಲಕ ಪ್ರತಿ ಮನೆಗೆ ನೀರು ಪೂರೈಕೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ತಾಲೂಕಿನ ವಿವಿಧ ಗ್ರಾಮಗಳಲ್ಲಿ 2.77 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಪ್ರತಿಯೊಂದು ಮನೆಗೆ ನೀರು ನೀಡುವ ದೃಷ್ಟಿಯಿಂದ ಜಲ ಜೀವನ್ ಮೀಷನ್ ಯೋಜನೆಯನ್ನು ಅವಳಿ ತಾಲೂಕಿನಲ್ಲಿ ಅನುಷ್ಟಾನ ಮಾಡಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಕೆಲ ಗ್ರಾಮಗಳಲ್ಲಿ ಜನರು ಜಲ ಜೀವನ್ ಮಿಷನ್ ಯೋಜನೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದು ಅಧಿಕಾರಿಗಳು ಜನರ ಮನವೊಲಿಸುವಂತೆ ಅಧಿಕಾರಿಗಳಿಗೆ ಕಾಮಗಾರಿ ಅನುಷ್ಟಾನ ಮಾಡುವಂತೆ ಸೂಚಿಸಿದರು.
ವಿವಿಧ ಕಾಮಗಾರಿಗಳ ಉದ್ಘಾಟನೆ : ತಾಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ 40 ಲಕ್ಷ ಮೌಲ್ಯದಲ್ಲಿ ಹೊಳೆಮಟ್ಟಿಲು, ಎಂಟುಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಿ, 15.50 ಲಕ್ಷ ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಹಿರೇಗೋಣಿಗೆರೆ ಗ್ರಾಮದಲ್ಲಿ ಎಂಟು ಲಕ್ಷ ಮೌಲ್ಯದಲ್ಲಿ ಅಂಗನವಾಡಿ ಉದ್ಘಾಟಿಸಿ, ಹೊನ್ನೂರು ವಡ್ಡರಹಟ್ಟಿ ತಾಂಡಲ್ಲಿ 19 ಲಕ್ಷ ಮೌಲ್ಯದಲ್ಲಿ ಜಲಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿ, ಹೊನ್ನೂರು ವಡ್ಡರಹಟ್ಟಿಯಲ್ಲಿ ಎಂಟು ಲಕ್ಷ ಮೌಲ್ಯದ ಅಂಗನವಾಡಿ ಉದ್ಘಾಟಿಸಿದ ಶಾಸಕರು,ಅರಕೆರೆ ಎ.ಕೆ.ಕಾಲೋನಿನಲ್ಲಿ 70 ಲಕ್ಷ ಮೌಲ್ಯದ ಜಲಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿದರು. ಇದರ ಜೊತೆಗೆ ತಿಮ್ಮೇನಹಳ್ಳಿ ಗ್ರಾಮದಲ್ಲಿ 89 ಲಕ್ಷ ಮೌಲ್ಯದ ಸಿಸಿ ರಸ್ತೆ ಉದ್ಘಾಟಿಸಿ, 20 ಲಕ್ಷ ಮೌಲ್ಯದ ಶಾಲಾ ಕೊಠಡಿಗೆ ಗುದ್ದಲಿಪೂಜೆ ನೆರವೇಸಿದ ಶಾಸಕರು ತಾಲೂಕಿನಾಧ್ಯಂತ 2.77 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಎ.ಬಿ.ರಂಗಪ್ಪ, ಸದಸ್ಯರಾದ ಮಹೇಂದ್ರಪ್ಪ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅರಕೆರೆ ನಾಗರಾಜ್ ಮುಖಂಡರಾದ ರಮೇಶ್, ವೆಂಟಕೇಶ್. ಎಕೆ ಗಿರೀಶ್, ತಿಪ್ಪಪ್ಪ ಸೇರಿದಂತೆ ಮತ್ತಿತತರರಿದ್ದರು..