ದಾವಣಗೆರೆ ಜ. 13
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಜ. 14 ರಂದು
ಹರಿಹರ ಹಾಗೂ ಚನ್ನಗಿರಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ತಮ್ಮ
ಕುಂದುಕೊರತೆ ಅರ್ಜಿಗಳನ್ನು ಈ ಸಂದರ್ಭದಲ್ಲಿ ನೀಡುವಂತೆ ಎಸಿಬಿ
ಡಿವೈಎಸ್‍ಪಿ ಮಂಜುನಾಥ್ ಆರ್. ಅವರು ಮನವಿ ಮಾಡಿದ್ದಾರೆ.
ಭ್ರಷ್ಟಾಚಾರ ಪೊಲೀಸ್ ಠಾಣೆ ಜಿಲ್ಲಾ ಕೇಂದ್ರ
ಸ್ಥಾನದಲ್ಲಿರುವುದರಿಂದ, ಜಿಲ್ಲೆಯ ವಿವಿಧ ತಾಲೂಕಿನಲ್ಲಿರುವ ಜನರು
ಭ್ರಷ್ಟಾಚಾರ ನಿಗ್ರಹ ದಳದ ಕಛೇರಿಗೆ ಬಂದು ದೂರು
ದಾಖಲಿಸುವುದು ಕಷ್ಟವಾಗುವುದನ್ನು ಗಮನಿಸಲಾಗಿದೆ.
ಸಾರ್ವಜನಿಕರು ತಮ್ಮ ದೂರು ಮತ್ತು ಸಮಸ್ಯೆಗಳನ್ನು
ದಾಖಲಿಸಲು ಅನುಕೂಲವಾಗುವಂತೆ ಮಾಡಲು ದಾವಣಗೆರೆ
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು, ಪ್ರತಿ
ತಿಂಗಳು ಜಿಲ್ಲಾ ವ್ಯಾಪ್ತಿಯ ತಾಲ್ಲೂಕು/ಹೋಬಳಿ ಕೇಂದ್ರಗಳಿಗೆ
ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ.
ಎಸಿಬಿ ಪೊಲೀಸ್ ಅಧಿಕಾರಿಗಳು ಜ. 14 ರಂದು ಬೆಳಿಗ್ಗೆ 11 ಗಂಟೆಯಿಂದ
ಮಧ್ಯಾಹ್ನ 01 ಗಂಟೆಯವರೆಗೆ ಹರಿಹರ ಮತ್ತು ಚನ್ನಗಿರಿಯ
ಪ್ರವಾಸಿ ಮಂದಿರ ದಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ದೂರು
ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ತಮ್ಮ
ಕುಂದುಕೊರತೆಗಳ ಅರ್ಜಿಗಳನ್ನು ನೀಡಿ ಸದುಪಯೋಗ
ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-
236600, 9480806227, 9480806283, 9480806284 ಗಳನ್ನು
ಸಂಪರ್ಕಿಸಬಹುದು ಎಂದು ಎಸಿಬಿ ಡಿವೈಎಸ್‍ಪಿ ಮಂಜುನಾಥ್ ಆರ್. ಅವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *