ಹೊನ್ನಾಳಿ- ಜ;-13 ಪಟ್ಟಣದಲ್ಲಿರುವ ವಿರಭದ್ರಸ್ವಾಮಿ ದೇವಸ್ಥಾನದಲ್ಲಿ ಇಂದು ಹೊನ್ನಾಳಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ವೀರಣ್ಣ ಪಟ್ಟಣಶೆಟ್ಟಿ ಬೆನಕನಹಳ್ಳಿ ನಂತರ ಮಾತನಾಡಿ ,ಪಂಚಮಸಾಲಿ ಸಮಾಜ ಸಂಘಟನೆ ಆಗಬೇಕಾದರೆ ನನ್ನ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ, ಪ್ರತಿಯೊಂದು ಹಳ್ಳಿಯಲ್ಲಿರುವ ನಮ್ಮ ಸಮಾಜದ ಹಿರಿಯರು ಮತ್ತು ಕಿರಿಯರ ಸಹಕಾರದಿಂದ ಸಂಘಟನೆಗೆ ಕೈ ಬಲಪಡಿಸಿದಾಗ ಮಾತ್ರ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಹೇಳುತ್ತಾ ,ನಮ್ಮ ಪಂಚಮಸಾಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಉನ್ನತ ಮಟ್ಟದಲ್ಲಿರುವ ವ್ಯಕ್ತಿಯವರೆಗೆ ಯಾವುದೇ ರೀತಿ ಸಣ್ಣಪುಟ್ಟ ತೊಂದರೆಯಾದರೆ ನಮ್ಮ ಗಮನಕ್ಕೆ ತನ್ನಿ ನಮ್ಮ ಸಮಾಜದ ಮುಖಂಡರುಗಳ ಜೊತೆ ಚರ್ಚಿಸಿ ,ನನ್ನ ಕೈಯಿಂದ ಎಸ್ವು ಸಾಧ್ಯವೊ ಅಸ್ವು ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನುಪ್ರಮಾಣಿಕವಾಗಿ ಸಮಾಜದ ಪರವಾಗಿ ನಾನು ಕೆ ಲಸ ಮಾಡುತ್ತೇನೆ ಎಂದು ತಿಳಿಸಿದರು.
ತಾಲೂಕು ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಹಾಲೇಶಣ್ಣ ಸಾಯಿಯವರು ಒಂದು ತಿಂಗಳ ಹಿಂದೆ ಆಯ್ಕೆಯಾಗಿದ್ದರು. ಅವರು ತಾಲ್ಲೂಕು ಯುವ ಘಟಕದ ಪದಾಧಿಕಾರಿಗಳನ್ನು ನೇಮಕವನ್ನು ಮಾಡಿರಲಿಲ್ಲ ಇವತ್ತು ತಾಲೂಕು ಅಧ್ಯಕ್ಷರಾದ ವೀರಣ್ಣ ಪಟ್ಟಣಶೆಟ್ಟಿ ಮತ್ತುಹಾಲೇಶಣ್ಣಸಾಯಿಯವರ ನೇತೃತ್ವದಲ್ಲಿ ನೂತನವಾಗಿ 21 ಸದಸ್ಯರುಗಳ ಪದಾಧಿಕಾರಿಗಳನ್ನು ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.


ನಂತರ ತಾಲೂಕ್ ಯುವ ಘಟಕದ ಅಧ್ಯಕ್ಷರಾದ ಹಾಲೇಶ್ ಣ್ಣ ಸಾಯಿಯವರು ಮಾತನಾಡಿ, ನಾನು ಒಬ್ಬ ಬಿಸಿನೆಸ್ ಮೆನ್ ಅಂದರೆ ನಾನು ಒಬ್ಬ ಗೊಬ್ಬರ ವ್ಯಾಪಾರಿ ವ್ಯಾಪಾರ ಮಾಡುವುದು ಗೊತ್ತೇ ವಿನಹಃ ಸಮಾಜದ ಸಂಗಟನೆ ಮಾಡುವ ಬಗ್ಗೆ ಮಾಹಿತಿ ಕೊರತೆ ಇದೆ .ಈಗ ನೀವುಗಳು ಮತ್ತು ಹೊನ್ನಾಳಿ ತಾಲೂಕಿನ ಪಂಚಮಸಾಲಿ ಸಮಾಜದ ಗೌರವ ಅಧ್ಯಕ್ಷರಾದ ಡಾಕ್ಟರ್ ರಾಜಕುಮಾರ್ ರವರ ಆಶಿರ್ವಾದಿಂದ ಮತ್ತು ಸಮಾಜದ ಹಿರಿಯ ಮುಖಂಡರು ಮತ್ತು ಕಿರಿಯರು ಸೇರಿ ಸಮಾಜದ ಸಂಘಟನೆಯನ್ನು ಮಾಡಲಿಕ್ಕೆ ನನಗೆ ಅಧ್ಯಕ್ಷರ ಗಾದೆಯನ್ನು ಕಟ್ಟಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದೀರಿ, ಮೊದಲನೇದಾಗಿ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಇದರ ಜೊತೆಗೆ ನಿಮ್ಮೆಲ್ಲರ ಸಹಕಾರದಿಂದ ಹಿರಿಯರನ್ನು ಮತ್ತು ಕಿರಿಯರ ಮಾರ್ಗ ದರ್ಶನದಲ್ಲಿ ಒಟ್ಟಾಗಿ ತೆಗೆದುಕೊಂಡು ಸಮಾಜದ ಸಂಘಟನೆಯನ್ನು ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಹಿರಿಯ ಮುಖಂಡರಾದ ಸೋಮಣ್ಣನವರು ಮಾತನಾಡಿ ಹೊನ್ನಾಳಿ ತಾಲೂಕಿನಲ್ಲಿ ಹರ ಜಾತ್ರಾಮಹೋತ್ಸವವನ್ನು ಮಾಡಿಕೊಳ್ಳಲಿಕ್ಕೆ ಹಮ್ಮಿಕೊಂಡಿದ್ದೆವು, ಕರೋನಾ ಮೂರನೇ ಅಲೆಯು ಮತ್ತು ಒಮಿಕ್ರೋನ್ ರೋಗ ಇರುವ ಹಿನ್ನೆಲೆಯಲ್ಲಿ ಅದನ್ನು ಮೊಟಕುಗೊಳಿಸಿ ಮುಂದೂಡಲಾಗಿದೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವೀರಣ್ಣ ಪಿ, ತಾಲೂಕು ಪಂಚಮಸಾಲಿ ಯುವ ಘಟಕದ ಅಧ್ಯಕ್ಷರಾದ ಹಾಲೇಶ್ ಣ್ಣ ಸಾಯಿ, ಮಾಜಿ ಅಧ್ಯಕ್ಷರು ಗಳಾದ ಚೆನ್ನಬಸಣ್ಣ ಜೆ ಮತ್ತು ಸೋಮಣ್ಣ ಕೆ ಪ್ರಧಾನ ಕಾರ್ಯದರ್ಶಿಯವರಾದ ಹಾಲೇಶ್ ಣ್ಣ ಕುಂಕೋದ, ಅಶೋಕ್ ಹೊನ್ನಾಳಿ, ರೈತ ಮುಖಂಡರಾದ ಬಸವರಾಜ ,ಚಂದ್ರಶೇಖರ್ ಚನ್ನಮುಂಬಾಪೂರ ,ಹಾಲೇಶ್ ಣ್ಣ ಬಳ್ಳೇಶ್ವರ , ಪತ್ರಕರ್ತರಾದ ಮೃತ್ಯಂಜಯ ಪಾಟೀಲ್, ದೊಡ್ಡಪ್ಪ ಮೇಷ್ಟ್ರು, ನಗರ ಘಟಕದ ಅಧ್ಯಕ್ಷರಾದ ಗಿರೀಶ್, ಪ್ರದೀಪ್ ಶೆಟ್ಟಿ ,ಹರೀಶ್ ಹಿರೇಮಠ ,ಪ್ರಭು ಎಚ್ಪಿ ,ಭರತ್ ಎಚ್ಪಿ. ಪ್ರಸನ್ನ ,ರಾಜು ಹಿರೇಮಠ ,ಚನ್ನೇಶ್ ಮೆಕ್ಕೆಜೋಳ ವ್ಯಾಪಾರಿ ,ಮಾರಿ ಕೊಪ್ಪದ ಪುಟ್ಟಣ್ಣ, ಭಾರತಿ, siddesh ಇನ್ನು ಮುಂತಾದ ಸಮಾಜದ ಮುಖಂಡರು ಹಿರಿಯರು-ಕಿರಿಯರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *