ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಜ. 15, ರಿಂದ 17 ರವರೆಗೆ
ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರೇಣುಕಾಚಾರ್ಯ ಅವರು ಜ.15 ರಂದು ಬೆಳಿಗ್ಗೆ ಹೊನ್ನಾಳಿಯಿಂದ
ಹೊರಟು 11 ಗಂಟೆಗೆ ದಾವಣಗೆರೆ ಆಗಮಿಸಿ ಜಿಲ್ಲಾಧಿಕಾರಿಗಳ
ಕಚೇರಿಯ ಸಭಾಂಗಣದಲ್ಲಿ ನಡೆಯುವ ಸಂತ ಸೇವಾಲಾಲ್ ಜಯಂತಿ
ಆಚರಣೆ ಕುರಿತು ನಡೆಯುವ ಪೂರ್ವಭಾವಿ ಸಭೆಯಲ್ಲಿ
ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ನ್ಯಾಮತಿಗೆ ತೆರಳಿ, ಪಟ್ಟಣ
ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳ
ಪ್ರಗತಿ ಬಗ್ಗೆ ಸಭೆ ನಡೆಸುವರು. ಸಂಜೆ 5 ಗಂಟೆಗೆ ಹೊನ್ನಾಳಿ
ಪ್ರವಾಸಿ ಮಂದಿರದಲ್ಲಿ ಏತನೀರಾವರಿ ಅನುಷ್ಠಾನದ ಬಗ್ಗೆ
ಅಧಿಕಾರಿಗಳೊಂದಿಗೆ ನಡೆಯುವ ಸಭೆಯಲ್ಲಿ ಭಾಗವಹಿಸುವರು.
ನಂತರ ಹೊನ್ನಾಳಿಗೆ ತೆರಳಿ ವಾಸ್ತವ್ಯ ಮಾಡುವರು.
ಜ.16 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳೇಶ್ವರ ಗ್ರಾಮದಲ್ಲಿ
ಅಂಗನವಾಡಿ ಕಟ್ಟಡ ಉದ್ಘಾಟನೆ ನೆರೆವೇರಿಸುವರು. 11.30ಕ್ಕೆ ಹೆಚ್
ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಶಾಲಾ ಕೊಠಡಿ ಹಾಗೂ
ಅಂಬೇಡ್ಕರ್ ಭವನ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ
ಸೋಮನಮಲ್ಲಾಪುರ ಗ್ರಾಮದಲ್ಲಿ ಸಿ.ಸಿ.ರಸ್ತೆ ಮತ್ತು
ಸಮುದಾಯ ಭವನ ಉದ್ಘಾಟಿಸುವರು. 12.30ಕ್ಕೆ ಮಾದನಹಳ್ಳಿ
ಗ್ರಾಮದಲ್ಲಿ ಸಿ.ಸಿ.ರಸ್ತೆ ಉದ್ಘಾಟಿಸುವರು. ಮ. 01 ಗಂಟೆಗೆ ಕತ್ತಿಗೆ
ಗ್ರಾಮದಲ್ಲಿ ರಸ್ತೆ ಕಾಮಗಾರಿಗಳ ಉದ್ಘಾಟಿಸುವರು. 2.30ಕ್ಕೆ
ಗುಡ್ಡೆಹಳ್ಳಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ
ಗ್ರಾಮಪಂಚಾಯಿತಿ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ
ನೆರವೇರಿಸುವರು. ಮಧ್ಯಾಹ್ನ 3 ಗಂಟೆಗೆ ರಾಮೇಶ್ವರ
ಗ್ರಾಮದಲ್ಲಿ ಕುಡಿಯುವ ನೀರಿನ ಸ್ಥಾವರ ಉದ್ಘಾಟಿಸುವರು. ಸಂಜೆ
4.30ಕ್ಕೆ ಹೊನ್ನಾಳಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆ ಅಹವಾಲು
ಸ್ವೀಕರಿಸಿ ವಾಸ್ತವ್ಯ ಮಾಡುವರು.
ಜ.17 ರಂದು ಬೆಳಿಗ್ಗೆ 10.30 ರಿಂದ 11.30ರವರೆಗೆÉ ಹುರುಳಹಳ್ಳಿ,
ಬಾಗೇವಾಡಿ, ಹನಗವಾಡಿ, ಗ್ರಾಮಗಳಲ್ಲಿ ಕರ್ನಾಟಕ ಸಾಬೂನು ಮತ್ತು
ಮಾರ್ಜಕ ನಿಯಮಿತ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ
ಕಾಮಗಾರಿಗಳನ್ನು ಉದ್ಘಾಟಿಸುವರು. ಮಧ್ಯಾಹ್ನ 12ಕ್ಕೆ ಲಿಂಗಾಪುರ
ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಹೊಸಹಳ್ಳಿ 2ನೇ ಕ್ಯಾಂಪ್,
1ನೇ ಕ್ಯಾಂಪ್ ಹಾಗೂ ಹುಣಸಘಟ್ಟ ಗ್ರಾಮಗಳಲ್ಲಿ ಕರ್ನಾಟಕ ಸಾಬೂನು
ಮತ್ತು ಮಾರ್ಜಕ ನಿಯಮಿತ ವತಿಯಿಂದ ಕೈಗೊಳ್ಳಲಾಗಿರುವ
ವಿವಿಧ ಕಾಮಗಾರಿಗಳನ್ನು ಉದ್ಘಾಟಿಸುವರು. ಸಂಜೆ 4.30ಕ್ಕೆ
ಹೊನ್ನಾಳಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು
ಸ್ವೀಕರಿಸಿ ವಾಸ್ತವ್ಯ ಮಾಡುವರು ಎಂದು ವಿಶೇಷ ಕರ್ತವ್ಯಾಧಿಕಾರಿ
ತಿಳಿಸಿದ್ದಾರೆ.