ಹೊನ್ನಾಳಿ -ಜ;- 14 ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿ ಇಂದು ಮಾನ್ಯ ವಿಭಾಗದ ಧಿಕಾರಿಗಳಾದ ಶ್ರೀಮತಿ ಮಮತಾ ಹಿರೇಗೌಡರ್ ರವರ ಅಧ್ಯಕ್ಷತೆಯಲ್ಲಿ ಹೊನ್ನಾಳಿ ತಾಲೂಕು ಮಟ್ಟದ ಮರಳು ಟಾಸ್ಕ್ ಫೋರ್ಸ್ ಸಮಿತಿಯ ಸಭೆಯನ್ನು ನಡೆಸಲಾಯಿತು.
ಉಪವಿಭಾಗಾಧಿಕಾರಿಗಳಾದ ಮಮತಾ ಹಿರೇಗೌಡರ್ ಅವರು ಟಾಸ್ಕ್ ಫೋರ್ಸ್ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಭೆಯಲ್ಲಿ ಮರಳು ಟಾಸ್ಕ್ ಪೋರ್ಸ್ ಸಮಿತಿಗೆ ಸಂಬಂಧಪಟ್ಟ ಹಳ್ಳಿಗಳಾದ ಹೊಸಳ್ಳಿ ಬೀರಗೊಂಡನಹಳ್ಳಿ, ರಾಂಪುರ ,ಬೆನಕನಹಳ್ಳಿ ,ಬೆಲೆಮಲ್ಲೂರು, ಹಿರೇಗೋಣಿಗೆರೆ ,ಹನುಮಸಾಗರ ,ಹರಳಹಳ್ಳಿ , ಗ್ರಾಮಕ್ಕೆ ಸಂಬಂಧಿಸಿದಂತೆ ಹಳ್ಳಿಗಳಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿದ ವ್ಯಕ್ತಿಗಳು ನಿಮಗೆ ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಿ. ಸ್ಟಾಕ್ ಪಾಯಿಂಟ್ ನಿಂದ ಎತ್ತಿನಗಾಡಿಯಲ್ಲಿ ಮರಳನ್ನು ಸಾಗಣೆ ಮಾಡುತ್ತಿದ್ದಾರೆ ಎಂದು ಕೇಳಿ ಪಟ್ಟಿದ್ದೇನೆ, ಎತ್ತಿನಗಾಡಿ ನವರು ಸ್ಟಾಕ್ ಪಾಯಿಂಟ್ ನಿಂದ ಮರಳನ್ನು ಹೊಡೆಯುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಪುನಹ ಅಕ್ರಮ ಮರಳು ಸಾಗಣೆ ಯಾಗುತ್ತಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳಾದ ಆರ್ ಐ ಮತ್ತು ವಿಎ ರವರ ಮೇಲೆ ಕ್ರಮ ತಗೆದುಕೊಳ್ಳಲಾಗುವುದು .
ಅಕ್ರಮ ಮರಳು ಸಂಗ್ರಹಿಸಿ ಸಿಕ್ಕ ನಂತರ ಆ ಮರಳನ್ನು ಸರ್ಕಾರ ನಿಗದಿ ಮಾಡಿದ ದರದಂತೆ ಟೆಂಡರ್ ಕರೆದು ಹರಾಜು ಮಾಡಿ ಆ ಮರಳನ್ನು ಗ್ರಾಮಪಂಚಾಯತಿಗೆ ಸಂಬಂಧಪಟ್ಟಂತೆ ಸರ್ಕಾರ ಕಾಮಗಾರಿಗಳ ಯೋಜನೆಗೆ ಆ ಮರಳನ್ನು ನೀಡಬಹುದು ಎಂದು ತಿಳಿಸಿದರು.
ತಹಸಿಲ್ದಾರ ಬಸನಗೌಡ ಕೋಟೂರ್ ರವರು ಈ ಸಭೆಯಲ್ಲಿ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡಿ ಹೊಳೆಯಲ್ಲಿ ಟೆಂಡರ್ ಆದ ಮರಳು ಪಾಯಿಂಟ ಇರುವ ಜಾಗದಲ್ಲಿ ,ನೀವುಗಳು ಸುತ್ತಲೂ ಬೇಲಿ ಮತ್ತು ಎದುರುಗಡೆ ಗೇಟು ಹಾಕುವುದರ ಜೊತಗೆ ನಾಮ ಪಲಕದ ಬೋರ್ಡ್ ಹಾಕಬೇಕು. ಹಾಗೂ ತೂಕ ಮಾಡುವ ಯಂತ್ರ (ವೇ-ಬ್ರಿಡ್ಜ್) ಅಳವಡಿಸಬೇಕು .
ನಾವು ಯಾವಾಗ ಬೇಕಾದರೂ ಸ್ಥಳವನ್ನು ಪರಿಶೀಲನೆ ಮಾಡಲಿಕ್ಕೆ ಬರುತ್ತೇವೆ, ಮರಳು ಸ್ಟಾಕ್ ಪಾಯಿಂಟ್ ಜಾಗದಲ್ಲಿ ಮರಳು ಶೇಖರಣೆ ಮಾಡಬಹುದು, ಅದನ್ನು ಹೊರತುಪಡಿಸಿ ಬೇರೆಯವರ ಸರ್ವೇ ನಂಬರ್ ಜಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರುಳು ಕಂಡುಬಂದರೆ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮರಳು ಗುತ್ತಿಗೆದಾರರಿಗೆ ಎಚ್ಚರಿಕೆಯನ್ನು ನೀಡಿದರು.
ಟಾಸ್ಕ ಪೋರ್ಟ್ಸ್ ಸಭೆ ಉಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿಗಳಾದ ಮಮತಾ ಹಿರೇಗೌಡರ್ ,ತಹಿಶಿಲ್ದಾರ ಬಸನಗೌಡ ಕೋಟೂರ್, ನ್ಯಾಮತಿ ತಹಸೀಲ್ದಾರರಾದ ಶ್ರೀಮತಿ ರೇಣುಕಮ್ಮ, ಡಿವೈಎಸ್ಪಿ ಸಂತೋಷ್ ಕುಮಾರ್, ಸಿಪಿಐ ದೇವರಾಜ್ ಟಿ ವಿ, ಈ ಈಓ ರಾಮ್ ಬೋವಿ, ಹೊನ್ನಾಳಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗದವರು ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳಾದ ಪಿಡಿಓಗಳು ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *